ಮಂಗಳೂರು: ಬಿಲ್ಡರ್ ಒಬ್ಬರಿಂದ ಬರೋಬ್ಬರಿ 86 ಲಕ್ಷ ರೂ. ಹಣ ಪಡೆದು ವಂಚಿಸಿ, ಅವರ ವ್ಯವಹಾರಕ್ಕೆ ಅಡ್ಡಿಪಡಿಸುತ್ತಿರುವುದಲ್ಲದೆ, ಜೀವಬೆದರಿಕೆಯೊಡ್ಡಿರುವ ಪ್ರಕರಣ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬ್ರೋಕರ್, ಬ್ಯಾಂಕ್ ಮ್ಯಾನೇಜರ್, ಸಿವಿಲ್ ಗುತ್ತಿಗೆದಾರ ಹಾಗೂ ಅವರ ಸಹಚರರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್, ಜೆಪ್ಪಿನಮೊಗರುವಿನ ಪವನ್ ಕುಮಾರ್, ಬಾಕಿಮಾರು ನಿವಾಸಿ ಬ್ರೋಕರ್ ಗುರುರಾಜ್, ಗುತ್ತಿಗೆದಾರ ಜಗದೀಶ್ ಹಾಗೂ ಅವರ ಸಹಚರ ಜಯಪ್ರಕಾಶ್ ಜೆ.ಪಿ. ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೂಲದ ಬಿಲ್ಡರ್ ಲೇಔಟ್ ಮಾಡುವ ವಿಚಾರದಲ್ಲಿ ಮಂಗಳೂರಿನಲ್ಲಿ ವ್ಯವಹಾರ ನಡೆಸಿದ್ದಾರೆ. ಈ ವ್ಯವಹಾರದಲ್ಲಿ ಪ್ರಕರಣದ ಆರೋಪಿಗಳು ಬಿಲ್ಡರ್ ಗೆ ವಂಚಿಸಿದ್ದಲ್ಲದೆ, ಅಪಪ್ರಚಾರ ಮಾಡಿದ್ದಾರೆ ಮತ್ತು ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ತಿಳಿದುಬಂದಿದೆ.