ತೀರ್ಥಹಳ್ಳಿ: ಇಲ್ಲಿನ ಆಗುಂಬೆ ಬಳಿಯ ಹೋಟೆಲ್ ಮಂದಾರ್ತಿ ಗ್ರಾಂಡ್ ಎದುರು ನಿಂತಿದ್ದ ಟಿಪ್ಪರ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದು, ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತೀರ್ಥಹಳ್ಳಿಯ ದೊಡ್ಡಮನೆಕೇರಿಯ ಸಲ್ಮಾನ್ ಎಂಬಾತ ಮೃತಪಟ್ಟಿದ್ದಾರೆ.
ಸಲ್ಮಾನ್ ಕ್ಯಾಂಟರ್ ನಲ್ಲಿ ಮಲಗಿದ್ದರು. ಈ ವೇಳೆ ಡ್ರೈವರ್ ನಿಯಂತ್ರಣ ತಪ್ಪಿ ನಿಂತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿರುವ ಚಾಲಕನನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಆಗುಂಬೆಯಿಂದ ತೀರ್ಥಹಳ್ಳಿಗೆ ಬರುವ ವೇಳೆ ಘಟನೆ ನಡೆದಿದೆ. ಕ್ಯಾಂಟರ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.