ಹೈದರಾಬಾದ್: ಇಲ್ಲೊಬ್ಬ ಸಾಧಕರು ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ 449 ಬಾರಿ ಕಾಲ್ನಡಿಗೆಯಲ್ಲೇ ಹತ್ತಿ ಏಷ್ಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದು ದಾಖಲೆ ರೂಪಿಸಿದ್ದಾರೆ.
ಶ್ರೀಕಾಕುಳಂ ನಗರದ ಮೊಹಂತಿ ಶ್ರೀನಿವಾಸ ರಾವ್ ತಿರುಪತಿ ತಿಮ್ಮಪ್ಪನ ಪರಮಭಕ್ತರು. ಅವರು 1997ರಲ್ಲಿ ಮೊದಲ ಬಾರಿ ತಿರುಮಲ ಬೆಟ್ಟವೇರಿ ತಿಮ್ಮಪ್ಪನ ದರ್ಶನ್ ಕಾಲ್ನಡಿಗೆಯ ಮೂಲಕವೇ ಪಡೆದರು. 2018ರ ವೇಳೆಗೆ 175 ಬಾರಿ ಕಾಲ್ನಡಿಗೆಯಲ್ಲೇ ಅವರು ದರ್ಶನ ಪೂರ್ಣಗೊಳಿಸಿದ್ದರು.
2017ರಲ್ಲಿ ತಮ್ಮ 50ನೇ ವರ್ಷದಲ್ಲಿ 50 ಬಾರಿ ಕಾಲ್ನಡಿಗೆಯಲ್ಲಿ ತಿಮ್ಮಪ್ಪನ ಬೆಟ್ಟ ಹತ್ತಿದ್ದಾರೆ. ಅಲ್ಲಿಂದೀಚೆಗೆ ಈ ವರ್ಷದ ಜುಲೈ ವೇಳೆಗೆ 449 ಬಾರಿ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದ್ದಾರೆ. ಆ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾರೆ.