ಕೊಡಗು : ಕೊಡವ ಮತ್ತು ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಲು ರಾಜ್ಯಪಾಲರಾದ ಡಾ. ತಾವರ್ ಚಂದ್ ಗೆಹ್ಲೋಟ್ ಇವರಲ್ಲಿ ಪ್ರತೀಕ್ ಪೊಣ್ಣನ್ನ ವಿನಂತಿ ಮಾಡಿದರು.
ನವಂಬರ್ 7ನೇ ತಾರೀಕಿಗೆ ಮಾನ್ಯ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಇವರನ್ನು ರಾಜ ಭವನದಲ್ಲಿ ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಕೊಡವ ಮತ್ತು ತುಳು ಭಾಷೆಗಳ ಇತಿಹಾಸ ಪ್ರಸ್ತುತ ಸಂದರ್ಭದಲ್ಲಿ ಹೇಗಿದೆಹಾಗೂ ಲಿಪಿಯ ಡಿಜಿಟಲಿಕರಣದಲ್ಲಿ ಯುವಕರ ಪಾತ್ರದ ಬಗ್ಗೆ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ. ಹಾಗೆ ಇದಕ್ಕೆ ಸಕಾರಾತ್ಮಕವಾಗಿ ಮನವಿಗೆ ಸ್ಪಂದಿಸಿದ ರಾಜ್ಯಪಾಲರು ಸರ್ಕಾರಕ್ಕೆ ತನ್ನ ಮನವಿಯನ್ನು ನೀಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಪ್ರತೀಕ್ ಪೊಣ್ಣನ್ನ ಹೇಳಿದ್ದಾರೆ.