Saturday, February 15, 2025
Homeಉಡುಪಿಜೀವಿಯರ್ ಪಿ ಡಯಾಸ್ ಗೆ : ಬೀಳ್ಕೊಡುಗೆ ಸಮಾರಂಭ

ಜೀವಿಯರ್ ಪಿ ಡಯಾಸ್ ಗೆ : ಬೀಳ್ಕೊಡುಗೆ ಸಮಾರಂಭ

ಮೂಲಸೌಲಭ್ಯ ಅಭಿವೃದ್ಧಿ ಬಂದರು  ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ  ಬೀಳ್ಕೊಡುಗೆ ಸಮಾರಂಭ ಜ . 31 ರಂದು ಅಂಬಲಪಾಡಿ ಕಾರ್ತಿಕ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.                                                                                                    ಬಂದರು ಮತ್ತು ಮೀನುಗಾರಿಕಾ ಉಡುಪಿ ಉಪವಿಭಾಗದ ಎಂಜಿನಿಯರ್ ಆಗಿ ಸುಮಾರು 29 ವರ್ಷಗಳ ಸೇವೆಸಲ್ಲಿಸಿ   ವಯೋ ನಿವೃತ್ತಿ ಹೊಂದಿದ್ದ  ಜೀವಿಯರ್ ಪಿ ಡಯಾಸ್ ದಂಪತಿಗಳನ್ನು  ಸಮಾರಂಭದ ಅಧ್ಯಕ್ಷರಾದ   ಉಡುಪಿ ಬಂದರು ಮತ್ತು ಮೀನುಗಾರಿಕಾ   ಇಲಾಖೆಯ  ಕಾರ್ಯನಿರ್ವಾಹಕ ಇಂಜಿನಿಯರ್  ಪ್ರಸನ್ನ ಶೇಟ್ ಶಾಲು ಹೊದಿಸಿ , ಫಲ ಪುಷ್ಪ , ಪೇಟಾ ತೊಡಿಸಿ ,  ಸ್ಮರಣಿಕೆ ನೀಡಿ ಗೌರವಿಸಿದರು , ಇಲಾಖೆಯಲ್ಲಿ ಪ್ರಾಮಾಣಿಕ , ನಿಷ್ಠೆ  , ಸಮಯ ಪರಿಪಾಲನೆ ಶಿಸ್ತು ಬದ್ದ ಕಾರ್ಯತೆ ಯಿಂದ ಸೇವೆನೀಡಿ  ಉತ್ತಮ ಅಧಿಕಾರಿಯಾಗಿ  ಜನಪ್ರಿಯತೆ ಹೊಂದಿದ್ದರು ,  ಇಂದು ನಿವೃತ್ತಿಯಾದರು , ಅವರ ಸಲಹೆ  ಸೂಚನೆ ಇಲಾಖೆಗೆ ಬೇಕು ಇವರ ಮುಂದಿನ ಜೀವನ ಸುಖಮಯಾ ಎಂದು ಶುಭ ಹಾರೈಸಿದರು.                              ವೇದಿಕೆಯಲ್ಲಿ ಸಹಾಯಕ    ಕಾರ್ಯನಿರ್ವಾಹಕ ಇಂಜಿನಿಯರ್  ಜಿ ಎಮ್ ರಾಥೋಡ್  , ನೀರಾವರಿ ಇಲಾಖೆಯ   ಕಾರ್ಯನಿರ್ವಾಹಕ ಇಂಜಿನಿಯರ್ ಉದಯಕುಮಾರ್ , ಗುತ್ತಿಗೆದಾರದ ಸಂಘದ ಸತೀಶ್ ಶೇಟ್ ಉಡುಪಿ  , ಮೀನುಗಾರಿಕಾ ಇಲಾಖೆಯ ಸಹಾಯಕ ಇಂಜಿಯರ್ ಭಾನುಪ್ರಕಾಶ್ ಅತ್ತಾವರ್ , ಪ್ರೆಸಿಲ್ ಡಯಾಸ್  , ಸಹಾಯಕ ಇಂಜಿಯರ್  ಪ್ರಶಾಂತ್ ಹಾಗೂ ಇಲಾಖೆಯ ಅಧಿಕಾರಿಗಳು  , ಗುತ್ತಿಗೆದಾರರು , ಸಿಬ್ಬಂದಿಗಳು ಉಪಸ್ಥರಿದ್ದರು  ಕಾರ್ಯಕ್ರಮದ ಸ್ವಾಗತ , ನಿರೂಪಣೆ , ವಂದನಾರ್ಪಣೆ  ನಿಧಿ ಪೈ  ನಿರ್ವಹಿಸಿದರು.

RELATED ARTICLES
- Advertisment -
Google search engine

Most Popular