ಉಡುಪಿಯ ಪ್ರತಿಷ್ಠಿತ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿ.ನ 2025-2030 ರ ಅವಧಿಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎಚ್. ಜಯಪ್ರಕಾಶ್ ಕೆದ್ಲಾಯ, ಉಪಾಧ್ಯಕ್ಷರಾಗಿ ಪಿ. ರಾಘವೇಂದ್ರ ಭಟ್‌ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ನಿರ್ವಚನಾಧಿಕಾರಿ ಲಾವಣ್ಯ ಕೆ.ಆರ್. ನಿರ್ವಹಿಸಿದರು. ಆಡಳಿತ ಮಂಡಳಿ ನಿರ್ದೇಶಕರಾದ ಪಿ. ಎನ್. ರವೀಂದ್ರ ರಾವ್, ಮನೋರಮಾ ಎಸ್., ಕೆ. ಮುರಳೀಧರ ಭಟ್, ಎನ್. ಪ್ರಹ್ಲಾದ್ ಬಲ್ಲಾಳ್, ಡಾ|| ಪಡುಬಿದ್ರಿ ಶ್ರೀಪತಿ ರಾವ್, ಸೂರ್ಯಪ್ರಕಾಶ್ ರಾವ್ ಎನ್., ಭಾಸ್ಕರ ರಾವ್ ಕಿದಿಯೂರು, ಸೀತಾರಾಮ ಕೇಕುಡ, ಜಯಪ್ರಕಾಶ ಭಂಡಾರಿ, ದೇವದಾಸ್, ರೂಪಾ ಮೋಹನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.