Monday, December 2, 2024
Homeಮುಲ್ಕಿತೋಕೂರು : ಮಕ್ಕಳ ಹಬ್ಬ- 2024 ಕ್ರೀಡಾಕೂಟದ ಬಹುಮಾನ ವಿತರಣೆ

ತೋಕೂರು : ಮಕ್ಕಳ ಹಬ್ಬ- 2024 ಕ್ರೀಡಾಕೂಟದ ಬಹುಮಾನ ವಿತರಣೆ

ಮೂಲ್ಕಿ: ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಒಲಂಪಿಕ್ ನಲ್ಲಿ ಭಾರತಕ್ಕೆ ಕೇವಲ ನಾಲ್ಕು ಪದಕ ಸಿಕ್ಕಿದೆ, ಒಂದೂ ಕೂಡ ಚಿನ್ನದ ಪದಕ ನಮ್ಮದಾಗಿಲ್ಲ ನಮ್ಮಲ್ಲಿ ಕ್ರಿಡೆಗೆ ಸಿಗುವ ಪ್ರೋತ್ಸ್ಸಾಹ ಸಾಕಾಗುದಿಲ್ಲ ಎಂದು The Rays Montessori House of Childredn, Kulai ಪ್ರಾಂಶುಪಾಲೆಯ ರಶ್ಮಿ‌ಕಿರಣ್ ಹೇಳಿದರು ಅವರು
ಭಾರತ ಸರಕಾರ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಯುವ ನೆಹರು ಯುವ ಕೇಂದ್ರ, ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಪಡುಪಣಂಬೂರು ತಾಲೂಕು ಮತ್ತು ಜಿಲ್ಲಾ ಯುವ ಜನ ಒಕ್ಕೂಟ, ದ.ಕ.ಜಿಲ್ಲೆ ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.) ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿ| ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆಯ ಗೌರವಾರ್ಥ ಮಕ್ಕಳ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ಸಭಾಭವನದಲ್ಲಿ ನಡೆದ ಮಕ್ಕಳ ಹಬ್ಬ-2024 ಹಾಗೂ ಮಕ್ಕಳ ಕ್ರೀಡಾಕೂಟದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ‌ಮಾತನಾಡಿದರು.
ಪತ್ರಕರ್ತ ನಿಶಾಂತ್ ಕಿಲೆಂಜೂರು ದೀಪ ಪ್ರಜ್ವಲನೆ ಮಾಡಿದರು ಬಹುಮಾನ ವಿತರಣೆಯನ್ನು ಉದ್ಯಮಿ ಕಿರಣ್ ಕುಮಾರ್ ನೆರವೇರಿಸಿದರು. ಈ ಸಂದರ್ಭ ಸಂಸ್ಥೆಯ ಗೌರವಾಧ್ಯಕ್ಷ. ಪ್ರಶಾಂತ್ ಕುಮಾರ್ ಬೇಕಲ್
ಅಧ್ಯಕ್ಷರಾದ ದೀಪಕ್ ಸುವರ್ಣ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸುನಿಲ್ ಜಿ. ದೇವಾಡಿಗ,ಕಾರ್ಯಾಧ್ಯಕ್ಷರು ಸಂತೋಷ್ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಯಶೋಧ ದೇವಾಡಿಗ ಕ್ರೀಡಾ ಕಾರ್ಯದರ್ಶಿ ಯೂನೂಸ್ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ತಕ್ಷ ದೀಪಕ್ ಸುವರ್ಣ ಸ್ವಾಗತಿಸಿ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು, ಸುರೇಖಾ ಕಲ್ಲಾಪು ಧನ್ಯವಾದ ಸಮರ್ಪಿಸಿದರು..

RELATED ARTICLES
- Advertisment -
Google search engine

Most Popular