Tuesday, June 18, 2024
Homeರಾಷ್ಟ್ರೀಯಟೋಲ್‌ ಶುಲ್ಕ ಕೇಳಿದ್ದಕ್ಕೆ ರೊಚ್ಚಿಗೆದ್ದು ಜೆಸಿಬಿಯಿಂದ ಟೋಲ್‌ ಬೂತನ್ನೇ ಧ್ವಂಸ ಮಾಡಿದ ಚಾಲಕ: ವಿಡಿಯೋ ವೈರಲ್

ಟೋಲ್‌ ಶುಲ್ಕ ಕೇಳಿದ್ದಕ್ಕೆ ರೊಚ್ಚಿಗೆದ್ದು ಜೆಸಿಬಿಯಿಂದ ಟೋಲ್‌ ಬೂತನ್ನೇ ಧ್ವಂಸ ಮಾಡಿದ ಚಾಲಕ: ವಿಡಿಯೋ ವೈರಲ್

ನವದೆಹಲಿ: ಹೆದ್ದಾರಿಗಳಲ್ಲಿ ಟೋಲ್‌ ಬೂತ್‌ ಪಾವತಿಸುವಾಗ ಯಾರಿಗಾದರೂ ಹೊಟ್ಟೆ ಉರಿಯದೆ ಇರುವುದಿಲ್ಲ. ಆದರೂ ರಸ್ತೆಯಲ್ಲಿ ಹೋಗಬೇಕಲ್ಲಾ ಎಂದು ಗೊಣಗಿಕೊಂಡೇ ಟೋಲ್‌ ಪಾವತಿಸುತ್ತಾರೆ. ಇಲ್ಲೊಬ್ಬ ಟೋಲ್‌ ಬೂತ್‌ನಲ್ಲಿ ಟೋಲ್‌ ಶುಲ್ಕ ಕೇಳಿದ್ದಕ್ಕೆ ರೊಚ್ಚಿಗೆದ್ದು ಜೆಸಿಬಿಯಿಂದ ಟೋಲ್‌ ಬೂತನ್ನೇ ಧ್ವಂಸ ಮಾಡಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಟೋಲ್‌ ಒಂದರಲ್ಲಿ ಈ ಘಟನೆ ನಡೆದಿದೆ. ಇದರ ವೀಡಿಯೊ ಈಗ ಸಖತ್‌ ವೈರಲ್‌ ಆಗಿದೆ.
ಟೋಲ್‌ ಬೂತಿನ ಕಬ್ಬಿಣದ ಗೇಟನ್ನು ಜೆಸಿಬಿಯಿಂದ ಕಿತ್ತೆಸೆಯಲಾಗಿದೆ. ದೆಹಲಿ-ಲಕ್ನೊ ಹೈವೆಯ ಹಾಪುರ್‌ ಟೋಲ್‌ ಬೂತ್‌ ನಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಟೋಲ್‌ ಶುಲ್ಕ ಪಾವತಿಸುವಂತೆ ಟೋಲ್‌ ಬೂತ್‌ ಸಿಬ್ಬಂದಿ ಚಾಲಕನಲ್ಲಿ ಕೇಳಿದ್ದಾರೆ. ಇದರಿಂದ ಸಿಟ್ಟಾದ ಚಾಲಕ ಟೋಲ್‌ ಬೂತನ್ನು ಧ್ವಂಸಗೊಳಿಸಿದ್ದಾನೆ ಎಂದು ವರದಿಗಳು ತಿಳಿಸಿದ್ದಾರೆ. ಟೋಲ್‌ ಸಿಬ್ಬಂದಿ ಘಟನೆಯ ವಿಡೀಯೋ ಚಿತ್ರೀಕರಿಸಿದ್ದಾರೆ.

https://x.com/SachinGuptaUP/status/1800408145963237440?ref_src=twsrc%5Etfw%7Ctwcamp%5Etweetembed%7Ctwterm%5E1800408145963237440%7Ctwgr%5E7626362680840a01accbe0d145e89d6b4579dc4a%7Ctwcon%5Es1_&ref_url=https%3A%2F%2Fwww.udayavani.com%2Fhomepage-karnataka-edition%2Fbig5-karnataka-edition%2Fbulldozer-destroys-toll-booth-after-driver-asked-to-pay

RELATED ARTICLES
- Advertisment -
Google search engine

Most Popular