ಬೆಂಗಳೂರು: ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ದೇಶದ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಬೇಕೆಂದು ಸರ್ಕಾರ ಕಳೆದ ಒಂದು ವರ್ಷದ ಹಿಂದೆ ಆದೇಶ ಹೊರಡಿಸಿತ್ತು.ಆದರೂ ಬಹುತೇಕ ವಾಹನ ಮಾಲೀಕರು ಇನ್ನೂ ಕೂಡ ನಂಬರ್ ಪ್ಲೇಟ್ ಬದಲಿಸುವ ಗೋಜಿಗೆ ಹೋಗಿಲ್ಲ. ಈ ಹಿಂದೆ ಒಂದು ಬಾರಿ ಗಡುವು ನೀಡಿ ಮತ್ತೆ ಸರ್ಕಾರ ಜೂನ್ 12 ರಂದು ಅಂತಿಮ ಗಡುವು ನೀಡಿದೆ. ಅಂದರೆ ನಾಳೆಯೊಳಗೆ ವಾಹನ ಸವಾರರು ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳದಿದ್ದಲ್ಲಿ ಸಾರಿಗೆ ಇಲಾಖೆ ದಂಡಾಸ್ತ್ರ ಪ್ರಯೋಗಿಸಲಿದೆ.
2019 ಕ್ಕಿಂತ ಮೊದಲು ನೋಂದಣಿಯಾದ ಎಲ್ಲಾ ವಾಹನಗಳಿಗೆ ಸಾರಿಗೆ ಇಲಾಖೆ HSRP ಕಡ್ಡಾಯ ರೂಲ್ಸ್ ಜಾರಿ ಮಾಡಿದೆ. ಪದೇ ಪದೇ ಡೆಡ್ಲೈನ್ ನೀಡಿದ್ರೂ ವಾಹನ ಸವಾರರ ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಹೀಗಾಗಿ HSRP ನಂಬರ್ ಪ್ಲೇಟ್ ಆಳವಡಿಕೆಗೆ ಜೂನ್12 ಕ್ಕೆ ಅಂತಿಮ ಡೆಡ್ಲೈನ್ ನೀಡಲಾಗಿದೆ.
ಜೂನ್ 12 ವರೆಗೆ HSRP ನಂಬರ್ ಪ್ಲೇಟ್ ಆಳವಡಿಕೆ ಮಾಡದ ವಾಹನ ಸವಾರರ ಮೇಲೆ ಕ್ರಮವಿಲ್ಲ ಎಂದು ಸಾರಿಗೆ ಇಲಾಖೆ ಹೇಳಿತ್ತು. ಆದರೆ, ಇದೀಗ HSRP ನಂಬರ್ ಪ್ಲೇಟ್ ಆಳವಡಿಕೆ ಅವಧಿ ಮತ್ತೆ ವಿಸ್ತರಣೆಯಿಲ್ಲ, ಡೆಡ್ಲೈನ್ ನೀಡಿದ್ರೂ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಆಳವಡಿಸದ ವಾಹನ ಸವಾರರ ಮೇಲೆ RTO ಅಧಿಕಾರಗಳು ದಂಡ ವಿಧಿಸಲಿದ್ದಾರೆ.
ಏಪ್ರಿಲ್ 2019 ಕ್ಕಿಂತ ಮೊದಲು ನೋಂದಣಿ ಮಾಡಿಕೊಂಡ ದ್ವಿಚಕ್ರ ತ್ರಿಚಕ್ರ, ಲಘು, ಮಧ್ಯಮ, ಭಾರಿ ಕಾರು ಸೇರಿ ಎಲ್ಲಾ ವಾಹನಗಳಿಗೆ ನಿಯಮ ಅನ್ವಯವಾಗಲಿದೆ. ಸಧ್ಯ ಇಲ್ಲಿಯವರೆಗೆ ರಾಜ್ಯದಲ್ಲಿ ಇಲ್ಲಿಯವರೆಗೆ 35 ಲಕ್ಷ ವಾಹನಗಳಿಗೆ ಮಾತ್ರ HSRP ನಂಬರ್ ಪ್ಲೇಟ್ ಆಳವಡಿಕೆ ಮಾಡಲಾಗಿದೆ. ಇನ್ನೂ 1.54 ಕೋಟಿ ವಾಹನಗಳಿಗೆ ನಂಬರ್ ಪ್ಲೇಟ್ ಆಳವಡಿಸಬೇಕಿದೆ.
ಈಗಾಗಲೇ ಸಾರಿಗೆ ಇಲಾಖೆ ಮೂರು ಬಾರಿ ಡೆಡ್ಲೈನ್ ವಿಸ್ತರಣೆ ಮಾಡಿದೆ. ಇದೀಗ HSRP ನಂಬರ್ ಪ್ಲೇಟ್ ಆಳವಡಿಕೆಗೆ ಒಂದು ದಿನವಷ್ಟೇ ಬಾಕಿ ಇದೆ. ಆದ್ರೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆಗೆ ವಾಹನ ಸವಾರರು ಆಸಕ್ತಿ ತೋಡುತ್ತಿಲ್ಲ. ಜೂನ್ 13 ರಿಂದ ನಂಬರ್ ಪ್ಲೇಟ್ ಆಳವಡಿಸಿಕೊಳ್ಳದ ವಾಹನ ಸವಾರರಿಗೆ ಭಾರೀ ಶಾಕ್ ಕಾದಿದೆ.