Thursday, April 24, 2025
Homeಬೆಂಗಳೂರುಲಿಂಗ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಬದ್ಧತೆಯನ್ನು ಸಾರುವ ಮೂಲಕ 2025ರ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಲಿಂಗ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಬದ್ಧತೆಯನ್ನು ಸಾರುವ ಮೂಲಕ 2025ರ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿಯು ಆಟೋಮೊಬೈಲ್ ಉದ್ಯಮದಲ್ಲಿ ಲಿಂಗ ವೈವಿಧ್ಯತೆಯನ್ನು ಪಾಲಿಸುವ ಮತ್ತು ಮಹಿಳೆಯರನ್ನು ಸಶಕ್ತಗೊಳಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪ್ರತಿಪಾದಿಸಿದೆ. ಉದ್ಯಮದಲ್ಲಿ ಲಿಂಗ ಅಸಮಾನತೆಯನ್ನು ತೊಡೆಯುವ ಪ್ರಯತ್ನದ ಭಾಗವಾಗಿ ಟಿಕೆಎಂ ಉತ್ಪಾದನಾ ವಿಭಾಗ, ತಾಂತ್ರಿಕ ವಿಭಾಗ ಮತ್ತು ನಾಯಕತ್ವದ ಹುದ್ದೆಗಳಿಗೆ ಮಹಿಳೆಯರನ್ನು ಆರಿಸಿಕೊಳ್ಳುವ ನೀತಿಗಳು ಮತ್ತು ಮೂಲಸೌಕರ್ಯಗಳನ್ನು ರೂಪಿಸಲು ಆದ್ಯತೆ ನೀಡುತ್ತಿದೆ. 2030ರ ವೇಳೆಗೆ ಶೇ.30ರಷ್ಟು ಮಹಿಳಾ ಪ್ರಾತಿನಿಧ್ಯ ಹೊಂದುವ ಗುರಿಯನ್ನು ಇಟ್ಟುಕೊಂಡಿರುವ ಟಿಕೆಎಂ ಸಂಸ್ಥೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಒಳಗೊಳ್ಳುವಿಕೆಯ, ಪ್ರತಿಭೆಗಳನ್ನು ಪ್ರೋತ್ಸಾಹಿಸುವ, ಉತ್ಪಾದನಾ ವಲಯದಲ್ಲಿನ ಅಸಮಾನತೆಯನ್ನು ತೊಡೆದುಹಾಕುವ ವಾತಾವರಣ ಹೊಂದುವ ಟೊಯೋಟಾದ ಸಂಸ್ಥೆಯ ದೃಷ್ಟಿಕೋನಕ್ಕೆ ಪೂರಕವಾಗಿ ಈ ವರ್ಷದ ಮಹಿಳಾ ದಿನಾಚರಣೆಗೆ “#ಆಕ್ಸಲರೇಟ್ಆಕ್ಷನ್” (ಕ್ರಿಯೆಗೆ ವೇಗ ನೀಡುವುದು) ಎಂಬ ಥೀಮ್ ಅನ್ನು ಇಟ್ಟುಕೊಳ್ಳಲಾಗಿತ್ತು. ಮಹಿಳೆಯರ ಅಮೂಲ್ಯ ಕೊಡುಗೆಯನ್ನು ಗುರುತಿಸಲು ಟಿಕೆಎಂ ತನ್ನ ಬಿಡದಿ ಘಟಕದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಈ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ನಾಯಕತ್ವ ಚರ್ಚೆ, ಪ್ಯಾನೆಲ್ ಸೆಷನ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮಹಿಳೆಯರ ಉತ್ತಮ ಕೊಡುಗೆಗಳನ್ನು ಗುರುತಿಸುವ ಕಾರ್ಯಕ್ರಮ ನಡೆಯಲಿದೆ.

 ಸಂದರ್ಭದಲ್ಲಿ ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌  ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ ಶಂಕರ್ ಅವರು, “ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನಲ್ಲಿ ವೈವಿಧ್ಯತೆ ಅನ್ನುವುದು ಆವಿಷ್ಕಾರ ಮತ್ತು ಅಭಿವೃದ್ಧಿಗೆ ಒಂದು ಪ್ರೇರಕ ಶಕ್ತಿ ಎಂದು ನಾವು ನಂಬಿದ್ದೇವೆ. ಒಳಗೊಳ್ಳುವ ಕೆಲಸದ ಸ್ಥಳವನ್ನು ರೂಪಿಸುವ ನಮ್ಮ ಬದ್ಧತೆಯು ನಿಮಯಗಳನ್ನೆಲ್ಲಾ ಮೀರಿದ್ದಾಗಿದ್ದು, ಮಹಿಳೆಯರು ಬೆಳೆಯಬಹುದು, ನಾಯಕತ್ವ ವಹಿಸಬಹುದು ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಬಹುದು ಎಂಬಂತಹ ವಾತಾವರಣವನ್ನು ಸೃಷ್ಟಿಸುವುದಾಗಿದೆ. ಕೌಶಲ್ಯಾಭಿವೃದ್ಧಿ ಕಡೆಗೆ ನಿರಂತರ ಗಮನ ಹರಿಸುವ ಮೂಲಕ ಸಾರಿಗೆ ಕ್ಷೇತ್ರದ ಭವಿಷ್ಯವನ್ನು ಮುನ್ನಡೆಸಲು ಹೆಚ್ಚಿನ ಮಹಿಳೆಯರನ್ನು ಸಶಕ್ತಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಅಂತರರಾಷ್ಟ್ರೀಯ ಮಹಿಳಾ ದಿನದಂದು ಟೊಯೋಟಾದ ಯಶಸ್ಸನ್ನು ಮಾತ್ರವಲ್ಲದೆ ಆಟೋಮೊಬೈಲ್ ಉದ್ಯಮದ ಭವಿಷ್ಯವನ್ನು ರೂಪಿಸುತ್ತಿರುವ ನಮ್ಮ ಮಹಿಳಾ ಉದ್ಯೋಗಿಗಳ ದೃಢತೆ, ಶಕ್ತಿ ಮತ್ತು ಕೊಡುಗೆಗಳನ್ನು ನಾವು ಸಂಭ್ರಮಿಸುತ್ತೇವೆ” ಎಂದು ಹೇಳಿದರು.

ಆಟೋಮೊಬೈಲ್ ಕ್ಷೇತ್ರದಲ್ಲಿ ಲಿಂಗ ವೈವಿಧ್ಯತೆ ಸಾಧ್ಯವಾಗಲು ಕೌಶಲ್ಯಾಬಿವೃದ್ಧಿ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಟಿಕೆಎಂ ಮಹಿಳೆಯರಿಗೆ ಉದ್ಯಮ ಕೇಂದ್ರಿತ ತರಬೇತಿ ಒದಗಿಸುವುದರ ಮೂಲಕ ಸಶಕ್ತೀಕರಣಕ್ಕೆ ಬದ್ಧವಾಗಿದೆ. ಟೊಯೋಟಾ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ (ಟಿಟಿಟಿಐ) ಈ ಗುರಿ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ವಾರ್ಷಿಕವಾಗಿ 1,200 ವಿದ್ಯಾರ್ಥಿಗಳನ್ನು ಹೊಸತಾಗಿ ಸೇರಿಸಿಕೊಳ್ಳುತ್ತಿದ್ದು, ಇದರಲ್ಲಿ ಶೇ.50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಟಿಕೆಎಂನ ಮಹಿಳಾ ಮ್ಯಾರಥಾನ್ ತಂಡವು 2024ರ ಗ್ಲೋಬಲ್ ಟೊಯೋಟಾ ಮ್ಯಾರಥಾನ್ ನ ರಿಲೇ ರೇಸ್‌ನಲ್ಲಿ ಮೊದಲಬಾರಿಗೆ ಭಾಗವಹಿಸಿ 10ನೇ ಸ್ಥಾನ ಪಡೆದು, ಕ್ರೀಡೆ ಮತ್ತು ಇತರ ಕ್ಷೇತ್ರಗಳಲ್ಲಿಯೂ ಮಹಿಳೆಯರ ಶಕ್ತಿ ಸಾಧನೆಯನ್ನು ಪ್ರದರ್ಶಿಸಿದೆ. ಇದರ ಜೊತೆಗೆ ಟೊಯೋಟಾ ಕೌಶಲ್ಯ “ಲರ್ನ್ ಅಂಡ್ ಈರ್ನ್” ಯೋಜನೆಯು ಅಭ್ಯರ್ಥಿಗಳಿಗೆ ವಿಶಅವ ದರ್ಜೆಯ ಕೌಶಲ್ಯಗಳನ್ನು ಕಲಿಸುತ್ತಿದ್ದು, ಇದು ಅವರ ಉದ್ಯೋಗ ಸಾಮರ್ಥ್ಯ ಮತ್ತು ದೀರ್ಘಕಾಲೀನ ವೃತ್ತಿಜೀವನದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ)ನ ಒಳಗೊಳ್ಳುವಿಕೆಯ ಬದ್ಧತೆಯು ಮೂಲದಲ್ಲಿ ಮೂರು ಪ್ರಮುಖ ಅಂಶಗಳ ಆಧಾರದ ಮೇಲೆ ನಿಂತಿದೆ. ಅದೇನೆಂದರೆ ನಿಯಮಾನುಸರಣೆ, ಮೂಲಸೌಕರ್ಯ ಮತ್ತು ಪರಿಸರ ವ್ಯವಸ್ಥೆ ಅಭಿವೃದ್ಧಿ. ನಿಯಮಾನುಸರಣೆ ಎಂದರೆ ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ಭದ್ರತೆ ಒದಗಿಸುವತ್ತ ಗಮನ ಹರಿಸುವುದು. ಅದಕ್ಕಾಗಿ ಕಟ್ಟುನಿಟ್ಟಾದ ನೀತಿಗಳನ್ನು ಜಾರಿಗೊಳಿಸಲಾಗಿದೆ. ಲೈಂಗಿಕ ಕಿರುಕುಳ ತಡೆಗಟ್ಟುವ (ಪಾಶ್) ಮಾರ್ಗಸೂಚಿಗಳು, ಸಿಸಿ ಟಿವಿ ಮೇಲ್ವಿಚಾರಣೆ, ಸುರಕ್ಷಿತ ಸಾರಿಗೆ ಮತ್ತು ದೂರುಗಳನ್ನು ಪರಿಹರಿಸುವ ವ್ಯವಸ್ಥೆ ಇದರಲ್ಲಿ ಸೇರಿವೆ. ಮಹಿಳೆಯರು ರಾತ್ರಿ ಶಿಫ್ಟ್‌ ನಲ್ಲಿ ಕೆಲಸ ಮಾಡುವಂತೆ ಟಿಕೆಎಂ ನೀತಿ ಬದಲಾವಣೆ ಮಾಡಿದ್ದು, ಅದರಿಂದ ಉತ್ಪಾದನಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೊಸ ವೃತ್ತಿ ಅವಕಾಶಗಳು ತೆರೆದುಕೊಂಡಿವೆ. ಇದೊಂದು ಮಹತ್ವದ ಹೆಜ್ಜೆಯಾಗಿದೆ.

ಮೂಲಸೌಕರ್ಯ ಅಭಿವೃದ್ಧಿ ಟಿಕೆಎಂನ ಲಿಂಗ ವೈವಿಧ್ಯತೆ ತಂತ್ರದ ಮೂಲಾಧಾರವಾಗಿದೆ. ವೆಲ್ಡಿಂಗ್, ಜೋಡಣೆ ಮತ್ತು ಪೇಂಟಿಂಗ್‌ ನಂತಹ ಕೆಲಸಗಳಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ ಮಾಡಲು ವಿಶೇಷ ಸೌಲಭ್ಯಗಳನ್ನು ರೂಪಿಸಲಾಗಿದೆ. ಕಂಪನಿಯು ಆಧುನಿಕ ವಸತಿ ಸೌಕರ್ಯಗಳಲ್ಲಿ ಹೂಡಿಕೆ ಮಾಡಿದೆ. 600 ಮಹಿಳಾ ಉದ್ಯೋಗಿಗಳಿಗೆ ಸ್ಥಳವಿರುವ ವಸತಿಗೃಹಗಳನ್ನು ನಿರ್ಮಿಸಿ, ಅವರು ಆರಾಮಾಗಿ ಇರಬಹುದಾದ ವಾತಾವರಣವನ್ನು ಸೃಷ್ಟಿಸಿದೆ. ಮೂರನೇ ಆಧಾರ ಕೇಂದ್ರವಾಗಿರುವ ಪರಿಸರ ವ್ಯವಸ್ಥೆ ಅಭಿವೃದ್ಧಿಯು ಸಂಸ್ಥೆಯೊಳಗೆ ಸಾಂಸ್ಕೃತಿಕ ಬದಲಾವಣೆಗೆ ಒತ್ತು ನೀಡುತ್ತದೆ.

“ಸಂವರ್ಧನ” ಎಂಬ ಯೋಜನೆಯ ಮೂಲಕ ಟಿಕೆಎಂ 1,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸಂವೇದನಾಶೀಲತಾ ಕಾರ್ಯಕ್ರಮಗಳನ್ನು ನಡೆಸಿದ್ದು, ಈ ಮೂಲಕ ಅಪ್ರಜ್ಞಾಪೂರ್ವಕ ಪಕ್ಷಪಾತದ ಬಗ್ಗೆ ಜಾಗೃತಿ ಮೂಡಿಸಿದೆ.

ಕಂಪನಿಯು ಮಹಿಳೆಯರಿಗೆ ಕುಟುಂಬ ಜವಾಬ್ದಾರಿಗಳನ್ನು ಪಾಲಿಸಲು ವೃತ್ತಿಗೆ ವಿರಾಮ ನೀಡಿ ನಂತರ ಮತ್ತೆ ಕೆಲಸಕ್ಕೆ ಸೇರುವ ನಿಯಮಗಳನ್ನು ಜಾರಿಗೆ ತಂದಿದೆ. ಅವರಿಗೆ ಹೊಂದಿಕೊಳ್ಳುವ ಕೆಲಸದ ಆಯ್ಕೆಗಳನ್ನು ಒದಗಿಸುವ ಮೂಲಕ ಕೆಲಸ ಮತ್ತು ಬದುಕಿನ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತಿದೆ. ಯಶಸ್ವಿ ಮಹಿಳಾ ನಾಯಕರು ನಡೆಸಿಕೊಡುವ ನಾಯಕತ್ವ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಈ ಮೂಲಕ ಉದ್ಯೋಗಿಗಳಿಗೆ ಸ್ಫೂರ್ತಿ ನೀಡಲಾಗಿದೆ. ಕೌಶಲ್ಯ ಸ್ಪರ್ಧೆಗಳು ಮತ್ತು ನಾಯಕತ್ವ ಚಿಂತನಾ ಕಾರ್ಯಕ್ರಮಗಳು ಮಹಿಳೆಯರನ್ನು ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿವೆ.

“ಸರ್ವರಿಗೂ ಸಂತೋಷ” ಎಂಬ ದೃಷ್ಟಿಯನ್ನಿಟ್ಟುಕೊಂಡು ಮುನ್ನಡೆಯುತ್ತಿರುವ ಟಿಕೆಎಂ ಲಿಂಗ ವೈವಿಧ್ಯತೆಗೆ ತನ್ನ ಬದ್ಧತೆಯನ್ನು ಸಾರುವ ಮೂಲಕ ಮೂಲಕ ಹೆಚ್ಚು ಸಮಾನತೆಯ ಮತ್ತು ಪ್ರಗತಿಪರ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸಾಗುತ್ತಿದೆ.

RELATED ARTICLES
- Advertisment -
Google search engine

Most Popular