ಮಕರ ಸಂಕ್ರಾಂತಿಯವರೆಗೆ ಭಿನ್ನ ವಿಭಿನ್ನ ರೀತಿಯ ಪಾಣಾರಾಟ ಹಾಗೂ ಕೋಲ ನಡೆಯಲಿದ್ದು ಭಕ್ತರಿಗೆ ಭಕ್ತಿಯ ಸಿಂಚನ ಶಿರೂರು ಮುದ್ದು ಮನೆಯಲ್ಲಿ ವಿಶಿಷ್ಟ ಭೂತರಾಧನೆ, ಭೂತರಾಯನ ಅಣಿಕೋಲ
20 ಅಡಿಗೂ ಎತ್ತವಾದ ಅಣಿ ನೇಮೋತ್ಸವದ ವಿಶಿಷ್ಟತೆ ಎಲ್ಲವನ್ನು ವಿವರಿಸಲಾಗದಷ್ಟು ನಿಗೂಢ ರಹಸ್ಯದ ಭಿನ್ನವೈವಿಧ್ಯತೆಗಳನ್ನು ಹೊಂದಿರುವ ಕಾರಣಿಕ, ಧಾರ್ಮಿಕ ಕ್ಷೇತ್ರ ಮುದುಸ್ವಾಮಿ ದೇವಸ್ಥಾನ.
ಎರಡು ವರ್ಷ ಗಳಿಗೊಮ್ಮೆ ಹನ್ನೆರಡು ದಿನಗಳು ನಿರಂತರವಾಗಿ ನಡೆಯುವ ಇಲ್ಲಿನ ಕೋಲಕ್ಕೆ ವಿಶೇಷವಾದ ಮಾನ್ಯತೆ ಯಿದೆ. ನ್ಯೆಸರ್ಗಿಕವಾದ ಸಹಜ ಹುತ್ತಕ್ಕೆ ಪೂಜಾವಿಧಿ ಗಳನ್ನು ನಡೆಸುವವರು ಬಂಟ ಅರ್ಚಕರು ಎನ್ನುವುದು ವಿಶೇಷ.
ಇದೇ 2023 ರ ಜನವರಿ 2 ರಿಂದ 14 ಮಕರಸಂಕ್ರಾಂತಿಯ ತನಕ ಹನ್ನೆರಡು ರಾತ್ರಿ ನಡೆಯುವ ಕೋಲ ವೀಕ್ಷಿಸುವುದು ಧಾರ್ಮಿಕ ಆಸ್ತಕರಿಗೆ ಇನ್ನಿಲ್ಲದ ನೆಮ್ಮದಿ. ಹನ್ನೆರಡು ದಿನದ ಕೋಲವನ್ನು ಪಾಣಾರಾಟ ಎಂದು ಕರೆಯುವುದು ಇಲ್ಲಿನ ರೂಢಿ. ಸಂಪ್ರದಾಯ ಬದ್ಧ ಶಿಷ್ಟಾಚಾರದದೊಂದಿಗೆ ಹಿರಿಯರಿಂದ ನಡೆದು ಬಂದ ಕಟ್ಟು ಪಾಡಿನಂತೆ ಪೂರ್ವ ನಿರ್ಧರಿತ ನೀತಿಯೊಂದಿಗೆ ಪಾಣಾರು ಭಕ್ತಿ ಭರಿತ ಕರ್ತವ್ಯವನ್ನು ಜವಾಬ್ದಾರಿಯುತ ವಾಗಿ ನಿರ್ವಹಿಸುತ್ತಾರೆ.ಆದ್ದರಿಂದ ಇಲ್ಲಿನ ದೇವರ ಸೇವೆ ಸುಗಮವಾಗಿ ನೆರವೇರುತ್ತದೆ.
ಪ್ರತಿದಿನ ಕೋಲ ಪ್ರಾರಂಭಕ್ಕೆ ಮೊದಲು ಪಾಣಾರ ಮಹಿಳೆಯರಿಂದ ಅರ್ಥಗರ್ಭಿತ ಸುಮಧುರ ಪಾಡ್ದನ ಇಂಪಾಗಿ ಭಕ್ತಿಪೂರಕವಾಗಿ ಹಾಡುತ್ತಾರೆ.ಪಾಡ್ದನ ಕಟ್ಟಿಹಾಡುವ ಕಲೆ ಪರಂಪರೆಯಿಂದ ಬಂದಿರುತ್ತದೆ. ಹಿರಿಯರು ಹಾಡುವ ಪಾಡ್ದನದ ದಾಟಿಯನ್ನು ಕಥಾ ಹಂದರವನ್ನು, ಸನ್ನಿವೇಶದ ವರ್ಣನೆಯೊಂದಿಗೆ ನಿಯತವಾದ ಲಯ, ವಿಶಿಷ್ಟವಾದ ದಾಟಿಯ ಪಾಡ್ದನಗಳಲ್ಲಿ ಭಾಷಾ ಶೈಲಿ ಹಾಗೂ ಒಂದು ತರಹದ ರಾಗ ಸಂಯೋಜನೆಯಿರುತ್ತದೆ.
ಶ್ರೀ ಮುದ್ದುಸ್ವಾಮಿ ದೇವಸ್ಥಾನದಲ್ಲಿ 12 ದಿನಗಳು ನಿರಂತರ ನಡೆಯುವ ಪಾಣಾರಾಟದಲ್ಲಿ:-
ಮೊದಲ ದಿನದ ಕೋಲ ಜಂಬೆಟ್ಟು ಮೇಲು ಮನೆಯವರ ಕೋಲ. ಇದರಲ್ಲಿ ಜಟ್ಟಿಗನಕೋಲ, ಧಕ್ಕೆಕೋಲ,ಹುಲಿಕೋಲ ಮತ್ತು ವಾಜನೂರು, ಅಕ್ಷಲಾಡಿ, ಅಂಬರಕಲ್ಲು, ಹೆಮ್ಮಣಿಕೆ, ದೊಡ್ಡಕಲ್ಲು ಇವರ 5 ಒಂಟಿ ಬೊಬ್ಬರ್ಯ ಹಾಗೂ ಜೋಡಿ ಬೊಬ್ಬರ್ಯ ಕೋಲ ನಡೆಯುತ್ತದೆ. ಸ್ವಾಮಿ ಹುಲಿಕೋಲ ಹಾಗೂ ಬೊಬ್ಬರ್ಯ ಕೋಲ ಹನ್ನೆರಡು ದಿನವು ಬೇರೆ ಬೇರೆ ಮನೆಯವರ ಹರಕೆ ಸೇವೆಸಲ್ಲುತ್ತದೆ.
ಎರಡನೇ ದಿನ ಹೊಳೆ ಬಾಗಿಲು ಮತ್ತು ಅಂತರ್ಸರ ಮನೆಯವರ ನಂದಿ,ಹುಲಿಚೌಂಡಿ, ಜಟ್ಟಿಗ, ಪಂಜುರ್ಲಿ ಕೋಲ.
ಮೂರನೇ ದಿನ ಕಲ್ಲುಬೆಟ್ಟು, ಮೆಕ್ಕೆ ಮನೆ, ಹೆಗ್ಗೆರಿ ತೋಟದ ಮನೆ, ಆರ್ಡಿಯರ ಮನೆ ಕೊಂಚಬೆಟ್ಟು ಮನೆಯವರ ಕ್ಷೇತ್ರಪಾಲ ಹುಲಿ ಪಂಜುರ್ಲಿ ಕೋಲ, ಕ್ಷೇತ್ರ ಪಾಲನ ಕೋಲ ಸೇವೆನಿಗದಿತ ಕಾಲ ಮತ್ತು ಸಮಯದಲ್ಲಿ ಚಾಚುತಪ್ಪದೆ ನಡೆಯುವ ಕೋಲಚಾರಣೆಗಳು ಇಲ್ಲಿನ ಪ್ರಧಾನ ದೇವರು ಮುದ್ದುಸ್ವಾಮಿ ಭಕ್ತರ ಧುರಿತಗಳನ್ನು ನಿವಾರಿಸುವ ದೇವರು ಎಂಬ ಬಲವಾದ ನಂಬಿಕೆ ಹೊತ್ತ ಭಕ್ತರು ಸನ್ನಿದಿಗೆ ಆಗಮಿಸಿ ಶ್ರದ್ಧೆ ಭಕ್ತಿಯಿಂದ ಅವರವರ ಶಕ್ತಿಗನುಸಾರವಾಗಿ ಹರಕೆ ಅರ್ಪಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.
ನಾಲ್ಕನೇ ದಿನ ಪಡುಬೆಟ್ಟು ಮನೆಯವ ರ ಸ್ವಾಮಿ ಬೊಬ್ಬರ್ಯ ಕೋಲ ಹಾಗೂ ಹಂದಿಕೋಲದ ಹರಕೆ ಸಲ್ಲುತ್ತದೆ.
ಐದನೇ ದಿನ ಕೋಲ ಸೇವಾನಿರತ ಪಾಣರು ಎಲ್ಲಾ ದೇವರಿಗೆ ಧಕ್ಕೆಕೋಲ ರೂಪದಲ್ಲಿ ಸೇವೇ ಸಲ್ಲಿಸುತ್ತಾರೆ.
ಆರನೇ ದಿನ ಚ್ವಾಂಡಾಲ್ ಮನೆ ಹಾಗೂ ತೆಂಕುಬೆಟ್ಟು ಮನೆಯವರ ಸೇವೆ ಬೆಮ್ಮಣ್ಣನ ಕೋಲ, ಯಕ್ಕಸ್ತ್ರಿಕೋಲ, ಹುಲಿಚೌಂಡಿಕೋಲ ನಡೆಯುತ್ತದೆ.
ಏಳನೇಯ ದಿನ ಕಲ್ಲುಮನೆ ಯವರ ಧಕ್ಕೆಕೋಲ, ದಾಸರಕೋಲ ಹುಲಿ ಹಂದಿ ಕೋಲಗಳು ಸಲ್ಲುತ್ತದೆ. ಈ ಎಲ್ಲಾ ಕೋಲ ಸೇವೆಯಲ್ಲಿ ಪಾಣರು ದೈವ ದೇವರುಗಳ ವೇಷಧರಿಸಿ, ಅದೇ ದೇವರ ಪರಿಚಯ, ಸ್ಥಳ ಮಹಾ ತ್ಮೆದೈವ ದೇವರುಗಳು ಭಕ್ತರನ್ನು ಕಾಪಾಡುವ ಪರಿಯ ವಿವರಣೆ ಆಡಿತೋರಿಸುತ್ತಾರೆ.
ಅಪರೂಪದ ಧಾರ್ಮಿಕ ಶ್ರದ್ದಾ ಕೇಂದ್ರ ಹಾಗೂ ಆರಾಧನಾ ಕ್ಷೇತ್ರವಾಗಿರುವ ಮುದ್ದುಸ್ವಾಮಿ ದೇವಸ್ಥಾನ ವೂ ಪುರಾತನ ಶಕ್ತಿ ಹಾಗೂ ಮನೋಕಾರ್ಯವನ್ನು ಸಫಲಗೊಳಿಸುವ ದೇವರು ಎಂಬ ನಂಬಿಕೆಯಿಂದ ಇಷ್ಟಾರ್ಥ ಸಿದ್ದಿ ಕೋಲ ಮತ್ತು ಮಕ್ಕಳಾಗದವರು ಬಸುರಿ ಕೋಲವನ್ನು ಹರಕೆ ರೂಪದಲ್ಲಿ ಸಲ್ಲಿಸುತ್ತಾರೆ. ಬಸುರಿ ಕೋಲದಲ್ಲಿ ಪಾಣರು ಸೀಮಂತ ಶಾಸ್ತ್ರವನ್ನು ಬಸುರಿ ಯಂತೆ ಶೃಂಗರಿಸಿಕೊಂಡು ಹಿಟ್ಟು ಬಡಿಸಿ ಆರತಿ ಎತ್ತಿ ಭಕ್ತಾದಿಗಳ ಹರಕೆ ಪೂರ್ತಿಗೊಳಿಸುತ್ತಾರೆ. ಹರಕೆ ಹೊತ್ತ ಭಕ್ತರು ವೀಳ್ಯದೆಲೆ, ಅಡಿಕೆ, ಶೃಂಗಾರ ಹೂ, ತೆಂಗಿನ ಎಣ್ಣೆ ಮತ್ತು ಬಸುರಿಗೆ ಬಡಿಸಲು ಒಂಬತ್ತು ಬಗೆಯ ಹಿಟ್ಟು ಗಳನ್ನು ಪಾಣಾರಿಗೆನೀಡಬೇಕು. ಎಂಟನೇ ದಿನ ದ ಕೋಲ ಬ್ಯೆಲುಮನೆಯವರ ಕೋಲ. ಇವರು ಈ ದೇವಸ್ಥಾನದ ಸ್ಥಳಮನೆಯವರು ಮತ್ತು ಅನುವಂಶೀಯ ಆಡಳಿತ ಮುಕ್ತೇಸರರು. ಎಲ್ಲಾ ದಿನಗಳಂತೆ ಹುಲಿ, ಜಟ್ಟಿಗ, ಬೊಬ್ಬರ್ಯ ಕೋಲದೊಂದಿಗೆ ಕಾಡ್ತಿಯಮ್ಮನಕೋಲ ಮತ್ತು ಕ್ಷೇತ್ರ ಪಾಲನಕೋಲ ಹಾಗೂ ಬೈಲುಮನೆಯಲ್ಲಿ ಪ್ರತಿ ವರ್ಷ ಕಂಬಳ ನಡೆಯುವುದರಿಂದ ಕಂಬಳ ಕೋಲ ಎಲ್ಲರ ಮನರಂಜಿಸುವ ಅಪರೂಪದ ಪಾಣಾರಾಟ ಸೇವೆ.
ಒಂಬತ್ತನ್ನೇ ದಿನ ಗರಡಿ ಮನೆಯವರ ಸ್ವಾಮಿ ಕೋಲ, ಜಟ್ಟಿಗನ ಕೋಲ, ರಾಹುತನಕೋಲ, ಕಂಬಳದ ಕೋಲ, ಭೂತರಾಯನಅಣಿ ಮತ್ತು ರಾಹುತನ ಕೋಲ,
ಹತ್ತನೆಯ ದಿನ ಮಳಮನೆಯವರ ನಾಯರ ಬೆಟ್ಟು ಪಂಜುರ್ಲಿ ಕೋಲದಲ್ಲಿ ಭಯ, ಭಕ್ತಿ ಹುಟ್ಟಿಸುವ ವಾತಾವರಣವಿದ್ದು ಪುಟ್ಟನ ಕೋಲ, ಭೂತರಾಯನ ಕೋಲದಲ್ಲಿ ವಿಶೇಷ ಆಕರ್ಷಣೆಯಿದೆ.
ಹನ್ನೊಂದನೆಯ ದಿನ ಜಂಬೆಟ್ಟು ಕೆಳಮನೆಯವರ ವಿವಿಧ ಸೇವೆಕೋಲ , ಜಟ್ಟಿಗನ ಕೋಲ, ಹುಲಿ-ಹಂದಿ ಕೋಲ,ಹೋರಿ ಕಂಬಳಕ್ಕೆ ಹೋಗುವುದು,
ಹನ್ನೆರಡನೆಯ ದಿನ ಬಾಳೆಹಿತ್ಲು ಮನೆಯವರ ದಾಸರ ಕೋಲ, ಹುಲಿ-ಹಂದಿಕೋಲ, ಹರಕೆಕೋಲ ನಡೆಯುತ್ತದೆ.
ಶ್ರೀ ಮುದ್ದುಸ್ವಾಮಿ ದೇವಸ್ಥಾನದ ಪಾಣಾರಾಟದ ಇನ್ನೊಂದು ವಿಶೇಷ:- ಮದುವೆಯ ಹರಕೆ ಕೋಲ ನಡೆಯುವುದು. ಈ ಸೇವೆಯಲ್ಲಿ ಮದುಮಗ, ಮದುಮ ಗಳು,ಎರಡು ಕಡೆಯ ದಿಬ್ಬಣ, ಪುರೋಹಿತರು , ಕನ್ಯಾ ದಾನ, ಶೋಭಾನ ಮದುವೆಯ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಪಾಣರು ಮದುವೆಯಂತೆ ನಡೆಸುವುದ ರಿಂದ ಇಲ್ಲಿ ನಡೆಯುವ ಹನ್ನೆರಡು ದಿನ ಕೋಲವನ್ನು *ಪಾಣಾರಾಟ ಎಂದು ಕರೆಯುವುದು ರೂಢಿ.
ಕೊನೆಯ ಮೂರುದಿನಗಳಲ್ಲಿ ಸುಳ್ಳೊಡು ಗರಡಿ ,ನಾಯರು ಬೆಟ್ಟು ಗರಡಿ ಹಾಗೂ ಹೊಳೆಬಾಗಿಲು ಗರಡಿವತಿಯಿಂದ ಭೂತರಾಯನ ಅಣಿಕೋಲ ಸಾಕಷ್ಟು ಕೌತುಕಕಾರಿ, ಎತ್ತರದ ಅಣಿಯನ್ನು ತಯಾರಿಸಿ ಅದನ್ನು ಹೊತ್ತು ಕುಣಿಯುವ ಪಾಣರು ಕೋಲ ಕಟ್ಟುವವರ ಸಾಹಸ ನಿಜವಾಗಿಯೂ ಮೈನವಿರೇಳಿಸುತ್ತ ದೆ. ಆವೇಶ ಭರಿತ ಅಣಿಹೋತ್ತವರು ಮುದ್ದುಸ್ವಾಮಿ ದೇವಸ್ಥಾನದಿಂದ ಹೊರಟು ಅಣಿಯನ್ನು ಸೀತಾನದಿ ತೀರದ ನಿರ್ದಿಷ್ಟ ಸ್ಥಳದಲ್ಲಿ ಇಟ್ಟು ಪೂಜೆ ಸಲ್ಲಿಸುತ್ತಾರೆ