Thursday, December 5, 2024
Homeಮಂಗಳೂರುಮಂಗಳೂರಿನಲ್ಲಿ ಘೋರ ದುರಂತ : `ಸ್ವಿಮ್ಮಿಂಗ್​ ಪೂಲ್' ನಲ್ಲಿ ಮುಳುಗಿ ಮೂವರು ಯುವತಿಯರು ಸಾವು..!

ಮಂಗಳೂರಿನಲ್ಲಿ ಘೋರ ದುರಂತ : `ಸ್ವಿಮ್ಮಿಂಗ್​ ಪೂಲ್’ ನಲ್ಲಿ ಮುಳುಗಿ ಮೂವರು ಯುವತಿಯರು ಸಾವು..!


ಮಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮೂವರು ಯುವತಿಯರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಂಗಳೂರಿನ ಉಚ್ಚಿಲ ಬಳಿಯ ಬೀಚ್ ನ ಖಾಸಗಿ ರೆಸಾರ್ಟ್ ನಲ್ಲಿ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ್ದಾರೆ.
ಮೃತ ಯುವತಿಯರನ್ನು ಮೈಸೂರು ಮೂಲದವರು ಎಂದು ಗುರುತಿಸಲಾಗಿದೆ.

ಮೃತ ಯುವತಿಯರನ್ನು ಮೈಸೂರು ಮೂಲದವರು ಎಂದು ಗುರುತಿಸಲಾಗಿದ್ದು, ಕುರುಬರಹಳ್ಳಿಯ ನಿವಾಸಿ ನಿಶಿತಾ ಎಂಡಿ (21), ವಿಜಯನಗರದ ದೇವರಾಜ ಮೊಹಲ್ಲಾದ ಪಾರ್ವತಿ (20), ಮೈಸೂರಿನ ಕೆ.ಆರ್. ಮೊಹಲ್ಲಾದ ಕೀರ್ತನಾ (20) ಎಂದು ಗುರುತಿಸಲಾಗಿದೆ. ನಿನ್ನೆ ಬೆಳಗ್ಗೆ ಬೀಚ್ ರೆಸಾರ್ಟ್ ಗೆ ಆಗಮಿಸಿದ್ದರು.

RELATED ARTICLES
- Advertisment -
Google search engine

Most Popular