ಮಂಗಳೂರು: ನವೆಂಬರ್ 10ಕ್ಕೆಕುಡ್ಲ ನಮ್ದು ಊರು ಕನ್ನಡ ಸಿನಿಮಾದ ಟ್ರೀಸರ್ ಮತ್ತು ಹಾಡಿನ ಟ್ರೈಲರ್ ಬಿಡುಗಡೆ ಸಮಾರಂಭವು ಮಂಗಳೂರಿನ ಯುವ ಕಲಾ ಪ್ರತಿಭೆ ಅಲೋಕ್ ದುರ್ಗಾಪ್ರಸಾದ್ ರ ಕೃತಾರ್ಥ ಪ್ರೊಡಕ್ಷನ್ಸ್ ಲಾಂಛನದಡಿ ನಿರ್ಮಾಣ ಗೊಂಡು, ಅವರೇ ನಿರ್ದೇಶಿಸಿ, ಅವರೇ ನಾಯಕನಟನಾಗಿಯೂ ಅಭಿನಯಿಸಿ, ಸದ್ಯದಲ್ಲೇ ಬಿಡುಗಡೆಯಾಗಲಿರುವ ವಿಭಿನ್ನ ಶೈಲಿಯ ಕುಡ್ಲ ನಮ್ದು ಊರುಎಂಬ ಕನ್ನಡ ಸಿನಿಮಾದ ಆಡಿಯೋ ಟ್ರೀಸರ್ ಮತ್ತುಹಾಡಿನ ಟ್ರೈಲರ್ ಬಿಡುಗಡೆ ಸಮಾರಂಭವು ಇದೇ ಬರುವ ನವೆಂಬರ್ 10ರಂದು ಮಂಗಳೂರಿನ ಪಿ,ಆರ್,ವಿ, ಮಾಲ್ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.
ಮಂಗಳೂರಿನ ಯುವ ಕಲಾ ಪ್ರತಿಭೆ ಅಲೋಕ್ ದುರ್ಗಾ ಪ್ರಸಾದ್ ರ ಚೊಚ್ಚಲ ಸಿನಿಮಾ ಇದಾಗಿದ್ದು, ಇನ್ನೂ ಹಲವಾರು ಸಿನಿಮಾಗಳು ಇವರ ಬ್ಯಾನರ್ ನಡಿ ತಯಾರಾಗುವ ಹಂತದಲ್ಲಿ ವೆ. ಕುಡ್ಲ ನಮ್ದು ಊರು ಸಿನಿಮಾವು ತುಳುನಾಡಿನ ಕಲೆ, ಸಂಸ್ಕೃತಿ, ಭಾಷಾ ವೈವಿಧ್ಯತೆ, ಆಚಾರ,ವಿಚಾರ, ಸಾಮರಸ್ಯ ಮುಂತಾದ ವಿಷಯಗಳ ಮೆರುಗನ್ನು ಅನಾವರಣ ಗೊಳಿಸುವ ವಿಭಿನ್ನ ಶೈಲಿಯ ಕತೆಯನ್ನೊಳಗೊಂಡಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣಗೊಂಡು ಸದ್ಯದಲ್ಲೇ ಬಿಡುಗಡೆಯಾಗುವ ಸಿದ್ಧತೆಯಲ್ಲಿದೆ.
ತುಳು ಮತ್ತು ಕನ್ನಡ ಚಲನಚಿತ್ರದ ನಟ, ನಟಿಯರ ಜೊತೆಗೆ ತುಳುನಾಡಿನ ಯುವ ಪ್ರತಿಭೆಗಳಿಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 10ಕ್ಕೆ ನಡೆಯಲಿರುವ ರೀ ಸರ್ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ತುಳುನಾಡಿನ ಗಣ್ಯಾತಿ ಗಣ್ಯರು, ತುಳುಹಾಗೂ ಕನ್ನಡದ ಪ್ರಸಿದ್ಧಸಿನಿಮಾ ನಟರು, ಪ್ರಸಿದ್ಧ ಗಾಯಕರು ಮುಂತಾದವರು ಭಾಗವಹಿಸಲಿದ್ದಾರೆ.