ಮೊರಿಗಾಂವ್: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಕಾಡಾನೆಯೊಂದು ಡಿಕ್ಕಿ ಹೊಡೆದು ದಾರುಣ ಸಾವನ್ನಪ್ಪಿದ ಘಟನೆ ನಡೆದಿದ್ದು, ಗಾಯಗೊಂಡ ಆನೆ ನರಳಿ ನರಳಿ ಸಾಯುತ್ತಿರುವ ದೃಶ್ಯವುಳ್ಳ ವಿಡಿಯೊವೊಂದು ವೈರಲ್ ಆಗಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಆನೆ ಗಂಭೀರ ಗಾಯಗೊಂಡಿತ್ತು. ರೈಲಿನ ಹಳಿ ಮೇಲೆ ಬಿದ್ದಿದ್ದ ಆನೆ ಎದ್ದೇಳಲು ಹರಸಾಹಸ ಪಟ್ಟಿದೆ. ಅಸ್ಸಾಂನ ಮೊರಿಗಾಂವ್‌ನ ಜಾಗಿರೋಡ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಅಪಘಾತದಲ್ಲಿ ಗಂಡು ಆನೆ ಸಾವನ್ನಪ್ಪಿರೋದನ್ನು ಖಚಿತಪಡಿಸಿದ್ದಾರೆ. ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಮೊರಿಗಾಂವ್‌ನಲ್ಲಿ ಚಲಿಸುತ್ತಿರುವಾಗ ಕಾಡಾನೆ ಹಿಂಡಿನಿಂದ ಈ ಆನೆ ಬೇರ್ಪಟ್ಟಿತ್ತು. ರೈಲು ಬರುತ್ತಿರುವಾಗ ಆನೆ ಬಂದಿದ್ದು, ರೈಲು ಡಿಕ್ಕಿಯಾಗಿದೆ. ಇನ್ನೊಂದು ಆನೆ ರೈಲು ಹಳಿಯನ್ನು ಕ್ರಾಸ್ ಮಾಡಿ ಪ್ರಾಣಾಪಾಯದಿಂದ ಪಾರಾಗಿದೆ.
ಕಾಡಾನೆ ನರಳಿ ಸಾಯುತ್ತಿರುವ ದೃಶ್ಯವನ್ನು ರೈಲಿನ ಪ್ರಯಾಣಿಕರು ವಿಡಿಯೊ ಮಾಡಿದ್ದು, ಆ ವಿಡಿಯೊ ಅತ್ಯಂತ ಕರುಣಾಜನಕವಾಗಿದೆ. ಕೊನೆಗೆ ಆನೆಯನ್ನು ಬೇರೆಡೆ ಸ್ಥಳಾಂತರಿಸಿದ್ದು, ಪಶುವೈದ್ಯರು ಕಾಡಾನೆಯನ್ನು ಪೋಸ್ಟ್ ಮಾರ್ಟಂ ಮಾಡಿದ್ದಾರೆ.
ವಿಡಿಯೊ ನೋಡಲು ಲಿಂಕ್ ಕ್ಲಿಕ್ ಮಾಡಿ…