Wednesday, April 23, 2025
Homeಬೆಂಗಳೂರುಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾಗೆ 75 ವರ್ಷ : ಮಹಿಳಾ ದಿನದಂದು 75 ಮಹಿಳೆಯರಿಗೆ...

ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾಗೆ 75 ವರ್ಷ : ಮಹಿಳಾ ದಿನದಂದು 75 ಮಹಿಳೆಯರಿಗೆ ಸನ್ಮಾನ

ಬೆಂಗಳೂರು: ಪ್ರವಾಸೋದ್ಯಮ ವಲಯದಲ್ಲಿ ಪ್ರಮುಖ ಹೆಜ್ಜೆಗುರುತುಗಳನ್ನು ಮೂಡಿಸಿರುವ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಟಿಎಎಐ) ರಾಜ್ಯ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಹಭಾಗಿತ್ವ ಹೊಂದುವ ಮೂಲಕ ಕರ್ನಾಟಕದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದೆ.
“ಅಂತರರಾಷ್ಟ್ರೀಯ ಮಹಿಳಾ ದಿನ”ದ ಸಂದರ್ಭದಲ್ಲಿ ವಾವ್ ಅಂದರೆ ವುಮೆನ್ ಆಫ್ ವಂಡರ್ ಸ್ಕ್ರಾಲ್ ಆಫ್ ಆನರ್ ಅನ್ನು ಶುಭಾರಂಭ ಮಾಡಿದೆ. ಸಂಘಟನೆಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ 75 ಮಹಿಳೆಯರನ್ನು ಗೌರವಿಸಲು ನಿರ್ಧರಿಸಿದೆ. ದೇಶಾದ್ಯಂತ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಯಶಸ್ವಿ ಮಹಿಳೆಯನ್ನು ಸನ್ಮಾನಿಸುತ್ತಿದೆ.

ಪ್ರವಾಸೋದ್ಯಮ ಕೈಗಾರಿಕೆ ವಲಯದಲ್ಲಿ ಇದು ಅತಿ ದೊಡ್ಡ, ಹಳೆಯ ಮತ್ತು ಅತ್ಯಂತ ಸಕ್ರಿಯವಾದ ಸಂಘಟನೆಯಾಗಿದೆ. ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯವನ್ನು ಉತ್ತೇಜಿಸುವಲ್ಲಿ ತನ್ನನ್ನು ಸಮರ್ಪಿಸಿಕೊಂಡಿದೆ. ಯುನೈಟೆಡ್ ಫೆಡರೇಶನ್ ಆಫ್ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ಸ್ ಮೂಲಕ ಜಾಗತಿಕ ಮಟ್ಟದಲ್ಲಿ ಚನ್ನ ಚಟುವಟಿಕೆಯನ್ನು ಅತ್ಯಂತ ವ್ಯಾಪಕವಾಗಿ ನಡೆಸುತ್ತಿದೆ.

ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಲ್ಮಾ ಫಾಹಿಮ್, ಅವರಿಗೆ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಕರ್ನಾಟಕದ ಅಧ್ಯಕ್ಷ ನಿರಂಜನ್ ಎಸ್ ಭಾರ್ಗವ, ಪದಾಧಿಕಾರಿಗಳಾದ ಜಿತೇಂದ್ರ ಕೆ ಶೆಟ್ಟಿ ಅವರು ಟಿಎಎಐ ವಾವ್ ಗೌರವ ಸ್ಕ್ರಾಲ್ ಅನ್ನು ನೀಡಿದರು. ಪ್ರವಾಸೋದ್ಯಮ, ಹೂಡಿಕೆ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ಸಲ್ಮಾ ಫಾಹಿಮ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕದಲ್ಲಿ ಪ್ರವಾಸೋದ್ಯಮ ಪಾಲುದಾರರನ್ನು ಒಟ್ಟುಗೂಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಖಜಾಂಚಿ ಬಾಲಾಜಿ ಕೆ.ಎಸ್, ರಾಷ್ಟ್ರೀಯ ವ್ಯವಸ್ಥಾಪಕ ಸಮಿತಿ ಸದಸ್ಯ ಅಮಿಶ್ ದೇಸಾಯಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular