Thursday, July 25, 2024
Homeಪುತ್ತೂರುಸುಳ್ಯ | ಅರಂತೋಡು ಬಳಿ ಮಾಣಿ-ಮೈಸೂರು ಹೆದ್ದಾರಿಗೆ ಬಿದ್ದ ಬೃಹತ್‌ ಮರ; ರಸ್ತೆ ತಡೆ

ಸುಳ್ಯ | ಅರಂತೋಡು ಬಳಿ ಮಾಣಿ-ಮೈಸೂರು ಹೆದ್ದಾರಿಗೆ ಬಿದ್ದ ಬೃಹತ್‌ ಮರ; ರಸ್ತೆ ತಡೆ

ಸುಳ್ಯ: ಇಲ್ಲಿನ ಅರಂತೋಡು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್‌ ಗಾತ್ರದ ಮರ ಕುಸಿದು ಬಿದ್ದು ಸಂಚಾರಕ್ಕೆ ಭಾರೀ ಅಡಚಣೆಯುಂಟಾಯಿತು. ಗ್ರಾಮದ ಎಲ್ಪಕಜೆ ಎಂಬಲ್ಲಿ ಈ ದುರಂತ ಸಂಭವಿಸಿದೆ.
ರಾತ್ರಿ ಸುಮಾರು 3 ಗಂಟೆ ಹೊತ್ತಿಗೆ ಮರ ಬಿದ್ದಿದೆ. ಮರ ಬಿದ್ದ ಶಬ್ದಕ್ಕೆ ಪಕ್ಕದ ಮನೆಯ ಜನಾರ್ಧನ ಎಂಬವರು ಎಚ್ಚರಗೊಂಡು, ಅರಂತೋಡಿನ ವಿನಯ್‌, ತಾಜುದ್ದೀನ್‌ ಎಂಬವರಿಗೆ ಕರೆ ಮಾಡಿ ತಿಳಿಸಿದರು. ಅವರು ಆಗಮಿಸಿ ಪ್ರಕೃತಿ ವಿಕೋಪ ಸಹಾಯವಾಣಿಗೆ ಕರೆ ಮಾಡಿದರು.
ರಸ್ತೆಯ ಎರಡೂ ಬದಿ ಸಂಚಾರ ಅಡಚಣೆಯುಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನ ಚಾಲಕರು ಮರಕ್ಕೆ ಹಗ್ಗಕಟ್ಟಿ ಪಿಕಪ್‌ ಮೂಲಕ ಮರವನ್ನು ಬದಿಗೆ ಸರಿಸಲು ಯತ್ನಿಸಿದರು. ಆದರೆ ಸಾಧ್ಯವಾಗಿರಲಿಲ್ಲ. ಬಳಿಕ ಅರಂತೋಡಿನ ಸೋಮಶೇಖರ್‌ ಎಂಬವರು ಕ್ರೇನ್‌ ತರಿಸಿ ಮರವನ್ನು ಬದಿಗೆ ಸರಿಸಲಾಯಿತು.
ಈ ನಡುವೆ ಲಾರಿಯೊಂದು ರಸ್ತೆ ಬದಿ ಮಣ್ಣಿನಲ್ಲಿ ಹೂತು ಹೋಗಿ ಮುಂದೆ ಬರಲಾಗದೆ ಬಾಕಿಯಾದ ಪ್ರಸಂಗವೂ ನಡೆಯಿತು. ವಿನಯ್‌ ಎಲ್ಪಕಜೆ, ಸೋಮಶೇಖರ್‌ ಪೈಕ, ಶಿವಪ್ರಸಾದ್‌ ಎಲ್ಪಕಜೆ, ದೀಪಕ್‌ ಪೈಕ, ತಾಜುದ್ದೀನ್‌ ಅರಂತೋಡು ಹಾಗೂ ವಾಹನ ಚಾಲಕರು ಮರ ಸರಿಸುವ ಕಾರ್ಯದಲ್ಲಿ ಸಹಕರಿಸಿದರು.

RELATED ARTICLES
- Advertisment -
Google search engine

Most Popular