ಮೂಡುಬಿದ್ರೆ ನ್ಯಾಯಾಲಯದ ವಕೀಲರ ಸಂಘದ ಆವರಣದಲ್ಲಿ ಹಣ್ಣು ಹಂಪಲು ಹಾಗೂ ಇತರ ಗಿಡಗಳನ್ನು
ನೆಡುವ ಕಾರ್ಯಕ್ರಮಕ್ಕೆ ಮೂಡುಬಿದ್ರೆ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಾನ್ಯ ಶ್ರೀ ಮಧುಕರ್ ಪಿ ಭಾಗವತ್ ಮತ್ತು ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಮಾನ್ಯ ಮಾಲಾ ಸಿ. ಗಿಡ ನೆಡುವ ಮೂಲಕ ಚಾಲನೆ ಕೊಟ್ಟರು.

ಈ ಕಾರ್ಯಕ್ರಮದಲ್ಲಿ ಮೂಡುಬಿದ್ರೆಯ ವಕೀಲರ ಸಂಘದ ಅಧ್ಯಕ್ಷರಾದ ಹರೀಶ್ ಪಿ., ಪ್ರಧಾನ ಕಾರ್ಯದರ್ಶಿ
ಜಯಪ್ರಕಾಶ್ ಭಂಡಾರಿ, ಸರಕಾರಿ ವಕೀಲರಾದ ಶ್ರೀಮತಿ ಶೋಭಾ, ವಕೀಲರಾದ ಎಂ. ಬಾಹುಬಲಿ ಪ್ರಸಾದ್, ಎಂ. ಎಸ್ ಕೋಟ್ಯಾನ್, ಎಂ. ಎಸ್ ತಂತ್ರಿ, ಶಾಂತಿಪ್ರಸಾದ್ ಹೆಗ್ಡೆ, ಎಂ. ಕೆ. ದಿವಿಜೇಂದ್ರ ಕುಮಾರ್, ಶ್ವೇತಾ ಜೈನ್, ಆನಂದ ಕೆ. ಎಸ್, ಮರ್ವಿನ್ ಲೋಬೊ, ದೀಕ್ಷಾ, ಸುಧಾಮಣಿ, ರೂಪ ಹಾಗೂವಕೀಲರ ಸಂಘದ ಸದಸ್ಯರು ಉಪಸ್ತಿತರಿದ್ದರು.