Saturday, June 14, 2025
Homeರಾಜ್ಯಚಾರಣದ ವೇಳೆ ಅವಘಡ: 9 ಸಾವು; 13 ಮಂದಿ ರಕ್ಷಣೆ | ಉತ್ತರಾಖಂಡದಲ್ಲಿ ಕೃಷ್ಣ ಬೈರೇಗೌಡ

ಚಾರಣದ ವೇಳೆ ಅವಘಡ: 9 ಸಾವು; 13 ಮಂದಿ ರಕ್ಷಣೆ | ಉತ್ತರಾಖಂಡದಲ್ಲಿ ಕೃಷ್ಣ ಬೈರೇಗೌಡ

ಬೆಂಗಳೂರು: ಉತ್ತರಾಖಂಡದ ಸಹಸ್ತ್ರತಾಲ್‌ ಚಾರಣಕ್ಕೆ ತೆರಳಿದ್ದ ರಾಜ್ಯದ 22 ಜನರ ಪೈಕಿ 9 ಮಂದಿ ಮೃತಪಟ್ಟಿದ್ದು, 13 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಹವಾಮಾನ ವೈಪರೀತ್ಯ ಅಡಚಣೆಯಾಗಿದೆ.
ಹವಾಮಾನ ವೈಪರೀತ್ಯದಿಂದ ಚಾರಣಿಗರು ಅಪಾಯಕ್ಕೆ ಸಿಲುಕಿದ್ದರು. ಅವರಲ್ಲಿ ಐವರು ಮೃತಪಟ್ಟಿದ್ದಾರೆ, ನಾಲ್ವರು ಕಾಣೆಯಾಗಿದ್ದಾರೆ ಎಂದು ನಿನ್ನೆ ಹೇಳಲಾಗಿತ್ತು. ಆದರೆ ಇಂದು ಆ ನಾಲ್ವರೂ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಚಾರಣಿಗರು ಅಪಾಯಕ್ಕೆ ಸಿಲುಕಿರುವುದು ವರದಿಯಾಗುತ್ತಿದ್ದಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಡೆಹ್ರಾಡೂನ್‌ಗೆ ತಕ್ಷಣ ತೆರಳಿದ್ದರು. ರಕ್ಷಿಸಲಾಗಿರುವ ಚಾರಣಿಗರನ್ನು ಅವರು ಭೇಟಿಯಾಗಿದ್ದಾರೆ.
ಸೌಮ್ಯಾ ಕನಲೆ, ಸ್ಮೃತಿ ಡೊಲಸ್‌, ಶೀನಾ ಲಕ್ಷ್ಮಿ, ಎಸ್.‌ ಶಿವಜ್ಯೋತಿ, ಅನಿಲ್‌ ಭಟ್ಟ, ಭರತ್‌ ಬೊಮ್ಮನಗೌಡರ್‌, ಮಧು ಕಿರಣ್‌ ರೆಡ್ಡಿ, ಜಯಪ್ರಕಾಶ್‌, ಎಸ್‌. ಸುಧಾಕರ್‌, ಎಂ.ಕೆ. ವಿನಯ್‌, ವಿವೇಕ್‌, ಶ್ರೀಧರ್‌, ಎ. ನವೀನ್‌ ಹಾಗೂ ರಿತಿಕಾ ಜಿಂದಾಲ್‌ ದುರ್ಘಟನೆಯಿಂದ ಬದುಕುಳಿದಿದ್ದಾರೆ. ಆಶಾ ಸುಧಾಕರ್‌, ಪದ್ಮನಾಭ ಕುಂದಾಪುರ, ಕೃಷ್ಣ ಮೂರ್ತಿ, ಸಿಂಧೂ ವಕೇಕಲಂ, ಕೆ.ಎನ್.‌ ವೆಂಕಟೇಶ ಪ್ರಸಾದ್‌, ಅನಿತಾ ಬಂಗಪ್ಪ, ಪದ್ಮಿನಿ ಹೆಗ್ಡೆ, ಚೈತ್ರಾ ಪ್ರಣೀತ್‌, ವಿನಾಯಕ್‌ ಮುಂಗುರ್ವಾಡಿ, ಸುಜಾತಾ ಮುಂಗುರ್ವಾಡಿ ಮೃತರು ಎಂದು ಗುರುತಿಸಲಾಗಿದೆ.

RELATED ARTICLES
- Advertisment -
Google search engine

Most Popular