ಇತ್ತೀಚಿಗೆ ಅಪಘಾತದಿಂದ ನಿಧನರಾದ ದ ಕ ಜಿಲ್ಲಾ ಗ್ರಹ ರಕ್ಷಕ ದಳದ ಕಛೇರಿ ಅಧೀಕ್ಷಕರಾದ ಶ್ರೀ ಗೋಪಿನಾಥ್ ಅವರಿಗೆ ದ ಕ ಜಿಲ್ಲಾ ಗ್ರಹ ರಕ್ಷಕ ದಳದ ವತಿಯಿಂದ ಕಛೇರಿಯಲ್ಲಿ ಶ್ರದ್ದಾಂಜಲಿ ಸಭೆ ಜರುಗಿತು.ಮಾನ್ಯ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ ಗೋಪಿನಾಥ್ ಅವರು ಬಹಳ ಸರಳ ಸಜ್ಜನಿಕೆಯ ಪ್ರಾಮಾಣಿಕ, ನಿಷ್ಟಾವಂತ ನಿಗರ್ವಿ ಕೆಲಸಗಾರರಾಗಿದ್ದರು. ಅವರ ನಿಧನದಿಂದ ಇಲಾಖೆಗೆ ಬಹು ದೊಡ್ಡ ನಷ್ಟ ಆಗಿದೆ ಎಂದು ವಿಷಾದಿಸಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ನಡೆಸಲಾಯಿತು. ಸಂದರ್ಭದಲ್ಲಿ ಕಛೇರಿ ಸಿಬ್ಬಂದಿ ಶ್ರೀಮತಿ ಶ್ಯಾಮಲ ಹಾಗೂ ಇತರ ಗ್ರಹ ರಕ್ಷಕರು ಉಪಸ್ಥಿತರಿದ್ದರು.