Wednesday, April 23, 2025
Homeಸುರತ್ಕಲ್ಎಂ.ಆರ್.ಪಿ.ಎಲ್ ನಿಂದ ಪೌರಕಾರ್ಮಿಕರಿಗೆ ಗೌರವ

ಎಂ.ಆರ್.ಪಿ.ಎಲ್ ನಿಂದ ಪೌರಕಾರ್ಮಿಕರಿಗೆ ಗೌರವ

ಸುರತ್ಕಲ್: ಎಂ.ಆರ್.ಪಿ.ಎಲ್ ಕಂಪನಿ ವತಿಯಿಂದ ಸುರತ್ಕಲ್ ವಾರ್ಡ್ ಮತ್ತು ಬಾಳ ಗ್ರಾಮ ಪಂಚಾಯತ್ ನ ಸುಮಾರು 159 ಪೌರಕಾರ್ಮಿಕರಿಗೆ ಸಂಸ್ಥೆಯ ಸಭಾಭವನದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿ.ಎಸ್.ಆರ್.ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಮಾತನಾಡಿ ಪೌರ ಕಾರ್ಮಿಕರೆಂದರೆ ಸಾರ್ವಜನಿಕರ ಪಾಲಿಗೆ ದೇವರಿದ್ದಂತೆ, ಸ್ವಚ್ಚ ಪರಿಸರಕ್ಕೆ ಮುಖ್ಯವಾಗಿ ಪೌರ ಕಾರ್ಮಿಕರು ಕಾರಣರಾಗಿದ್ದಾರೆ, ಅದಕ್ಕಾಗಿ ಎಂ.ಆರ್.ಪಿ.ಎಲ್ ಕಂಪನಿಯ 15 ದಿನಗಳ ಸ್ವಚ್ಚ ಪಕ್ವಾಡ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು. ‌

ಎಂ.ಆರ್.ಪಿ.ಎಲ್ ಅಸ್ಪತ್ರೆಯ ಡಾ.ಅರವಿಂದ್ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು 150 ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ಈ ಸಂದರ್ಭ ಸಂಸ್ಥೆಯ ನಾಗೇಂದ್ರ ರಾವ್, ಡಾ.ಖಾನ್ ಮತ್ತಿತರು ಉಪಸ್ಥಿತರಿದ್ದರು. ಸಂಸ್ಥೆಯ ಅಧಿಕಾರಿ ಸ್ಟೀವನ್ ಪಿಂಟೋ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.

RELATED ARTICLES
- Advertisment -
Google search engine

Most Popular