ವೀರ ಯೋಧ ಹರೀಶ್‌ರಿಗೆ ಸಮ್ಮಾನ ಎನ್ ಬಿ ಸಬ್ (ಎಂಎಸಿಪಿ) ಹರೀಶ್ ಬಂಗೇರ ಅವರನ್ನು ಮೂಡುಬಿದಿರೆ ಭಾರತೀಯ ಜನತಾ ಪಾರ್ಟಿಯ ಕಛೇರಿಯಲ್ಲಿ ಸಮ್ಮಾನಿಸಲಾಯಿತು.
ನ್ಯಾಯವಾದಿ ಎಂ. ಬಾಹುಬಲಿ ಪ್ರಸಾದ್‌ರವರು ಕಾರ್ಗಿಲ್ ಕಾರ್ಯಾಚರಣೆ ಸಮಯದಲ್ಲಿ ಹಲವಾರು ಸೈನಿಕರು ಅಸಾಧಾರಣ ಶೌರ್ಯದ ಬಗ್ಗೆ ನೆನಪಿಸಿಕೊಂಡರು. ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಪಾಕ್ ಸೈನಿಕರನ್ನು ಸದೆಬಡಿದು, ಗಾಯಗೊಂಡ ನಂತರವೂ ಪಾಯಿಂಟ್ 4875 ಅನ್ನು ಮರಳಿ ವಶಪಟಿಸಿಕೊಳ್ಳಲು ಅವರು ತಂಡವನ್ನು ಮುನ್ನಡೆಸಿದರು.
ಅವರ ಮರಣೋತ್ತರವಾಗಿ ಪರಮವೀರ ಚಕ್ರವನ್ನು ಪಡೆದರು. ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಶತ್ರು ಸ್ಥಾನಗಳನ್ನು ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು ಅವರ ಧೈರ್ಯ ಮತ್ತು ನಾಯಕತ್ವಕ್ಕಾಗಿ ಮರಣೋತ್ತರವಾಗಿ ಪರಮವೀರ ಚಕ್ರವನ್ನು ನೀಡಲಾಯಿತು.
ಹರೀಶ್ ಬಂಗೇರರವರ ದೇಶ ರಕ್ಷಣೆಯ ಸಾಹಸದ ಬಗ್ಗೆ ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು. ಮೂಡುಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷರಾದ ದಿನೇಶ್ ಪುತ್ರನ್ ಪದಾಧಿಕಾರಿಗಳಾದ ಹರಿಪ್ರಸಾದ್ ಶೆಟ್ಟಿ, ರಂಜಿತ್ ಪೂಜಾರಿ, ಸಾತ್ವಿಕ್ ಮಲ್ಯ, ಲಕ್ಷ್ಮಣ ಪೂಜಾರಿ ಮತ್ತಿತರು ಉಪಸ್ಥಿತಿರದ್ದರು.