Thursday, July 25, 2024
Homeರಾಜ್ಯಕೀರ್ತಿಶೇಷ ಸುಬ್ರಹ್ಮಣ್ಯ ಧಾರೇಶ್ವರರವರಿಗೆ ಯಕ್ಷರಂಗದಿಂದ ನುಡಿನಮನ, ಶ್ರದ್ಧಾಂಜಲಿ

ಕೀರ್ತಿಶೇಷ ಸುಬ್ರಹ್ಮಣ್ಯ ಧಾರೇಶ್ವರರವರಿಗೆ ಯಕ್ಷರಂಗದಿಂದ ನುಡಿನಮನ, ಶ್ರದ್ಧಾಂಜಲಿ

ದಾವಣಗೆರೆ: ಕರ್ನಾಟಕದ ಕರಾವಳಿ ಜಿಲ್ಲೆಗಳ ಯಕ್ಷಗಾನದ ಬಡಗುತಿಟ್ಟಿನ ಪ್ರಖ್ಯಾತ ಭಾಗವತರು, ಯಕ್ಷಗಾನ ಪರಂಪರೆಗಳಿಗೆ ಹೊಸ ಹೊಸ ಪರಿಕಲ್ಪನೆಗಳೊಂದಿಗೆ ವೈಶಿಷ್ಟ ಸಂಪ್ರದಾಯದೊಂದಿಗೆ ಈ ಆರಾಧನಾ ಕಲೆಯನ್ನು ವೈಭವೀಕರಿಸಿದ್ದ ಯಕ್ಷಗಾನದ ರಂಗತಂತ್ರ, ರಂಗ ನಟ, ರಂಗ ನಿರ್ದೇಶಕ, ವಿಶ್ವಖ್ಯಾತಿಯ ಸಮರ್ಥರಾದ ಸುಬ್ರಹ್ಮಣ್ಯ ಧಾರೇಶ್ವರರು ಇತ್ತೀಚಿಗೆ ಸ್ವರ್ಗಸ್ತರಾಗಿದ್ದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ
ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ, ಯಕ್ಷಗಾನ ಸಂಸ್ಥೆಗಳು ನಿನ್ನೆ ತಾನೇ ಕಲಾಕುಂಚ ಸಂಸ್ಥೆಯ ಕಚೇರಿಯ
ಸಭಾಂಗಣದಲ್ಲಿ ಮೌನಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೌರಾಣಿಕ ಯಕ್ಷಗಾನ ಪ್ರಸಂಗಗಳಲ್ಲೂ
ತಮ್ಮ ಸಿರಿಕಂಠದೊಂದಿಗೆ ಛಾಪು ಮೂಡಿಸಿದ ಧಾರೇಶ್ವರರ ಸಾಧನೆಯ ಹಾದಿಯನ್ನು ವಿವರಿಸಿದ ಯಕ್ಷಗಾನ ಹವ್ಯಾಸಿ ಕಲಾವಿದರು, ಉಪನ್ಯಾಸಕರೂ ಆದ ಪ್ರದೀಪ್ ಕಾರಂತ್ ಮಾತನಾಡಿ ಈ ಯಕ್ಷಲೋಕದಲ್ಲಿ ಮತ್ತೆ ಹುಟ್ಟಿ ಬರಲಿ ಎಂದು ನುಡಿ ನಮನ ಸಲ್ಲಿಸಿದರು. ವೇದಿಕೆಯಲ್ಲಿ ಕಲಾಕುಂಚ ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕರು ಹವ್ಯಾಸಿ ಯಕ್ಷಗಾನ ಕಲಾವಿದರಾದ ಸಾಲಿಗ್ರಾಮ ಗಣೇಶ್‌ಶಣೈ, ಕಲಾಕುಂಚ ಹಾವೇರಿ ಶಾಖೆಯ ಅಧ್ಯಕ್ಷರಾದ ಪರಮೇಶ್ವರಯ್ಯ ವೀರಭದ್ರಪ್ಪ ಮಠದ್, ಯಕ್ಷಗಾನ ತರಬೇತಿದಾರರಾದ ಯಕ್ಷಗಾನ ಕಲಾವಿದರಾದ ಹಟ್ಟಿಯಂಗಡಿ ಆನಂದ ಶೆಟ್ಟಿ, ಗಾಯನ ಕಲಾವಿದ ಪ.ವಿಶ್ವನಾಥ್, ರೇಣುಕಾ ರಾಮಣ್ಣ, ಕಲಾಕುಂಚ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಲೀಲಾ ಸುಭಾಷ್, ಯಕ್ಷಗಾನ ದೇಷಭೂಷಣದಲ್ಲಿ ಅನಿತಾ ಕಲ್ಯಾಣರಾವ್, ಕುಮಾರಿ ನಿಸರ್ಗ, ಕಲಾಕುಂಚ ಸಂಘಟನಾ ಕಾರ್ಯದರ್ಶಿ ಕೆ.ಸಿ.ಉಮೇಶ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular