Monday, December 2, 2024
HomeUncategorizedಆಟೋರಿಕ್ಷಾವನ್ನು ಎತ್ತಿ ತನ್ನ ತಾಯಿಯನ್ನು ರಕ್ಷಿಸಿದ್ದ ಕುಮಾರಿ ವೈಭವಿ ಅವರಿಗೆ ನ್ನಿಗೋಳಿ ಪಟ್ಟಣ ಪಂಚಾಯತ್ ಸಮಿತಿ...

ಆಟೋರಿಕ್ಷಾವನ್ನು ಎತ್ತಿ ತನ್ನ ತಾಯಿಯನ್ನು ರಕ್ಷಿಸಿದ್ದ ಕುಮಾರಿ ವೈಭವಿ ಅವರಿಗೆ ನ್ನಿಗೋಳಿ ಪಟ್ಟಣ ಪಂಚಾಯತ್ ಸಮಿತಿ ವತಿಯಿಂದ ಗೌರವ

ಕಿನ್ನಿಗೋಳಿ: ಕಳೆದ ವಾರ ರಾಮನಗರ ಬಳಿ ನಡೆದಿದ್ದ ಅಪಘಾತದ ವೇಳೆ ಆಟೋರಿಕ್ಷಾವನ್ನು ಎತ್ತಿ ತನ್ನ ತಾಯಿಯನ್ನು ರಕ್ಷಿಸಿದ್ದ ಕುಮಾರಿ ವೈಭವಿ ಅವರನ್ನು ಅವರ ರಾಜರತ್ನಪುರ ನಿವಾಸದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಪಘಾತದ ವೈಭವಿ ಅವರ ತೋರಿದ ಧೈರ್ಯ, ಸಮಯಪ್ರಜ್ಞೆಯನ್ನು ಎಸ್ಡಿಪಿಐ ನಾಯಕರು ಶ್ಲಾಘಿಸಿದರು. ಎಸ್ಡಿಪಿಐ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಮಿತಿಯ ಅಧ್ಯಕ್ಷ ಜಲೀಲ್ ಜೆಎಚ್, ಕಾರ್ಯದರ್ಶಿ ನಕಾಶ್, ಉಪಾಧ್ಯಕ್ಷ ಆರಿಫ್, ಮುಲ್ಕಿ ಬ್ಲಾಕ್ ಜೊತೆ ಕಾರ್ಯದರ್ಶಿ ನವಾಝ್ ಕಲ್ಕರೆ, ಮುಲ್ಕಿ-ಕಿನ್ನಿಗೋಳಿ ಲಾರಿ ಮಾಲಕರ ಸಂಘದ ಕಾರ್ಯದರ್ಶಿ ಅಬೂಬಕರ್ ಹಾಗು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular