ಅಬ್ಬಗದಾರಗ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ 8/3/24 ಶಿವರಾತ್ರಿಯಂದು ಸಾಂಸ್ಕೃತಿಕ ಕಲಾವೇದಿಕೆ ಇದರ ಪ್ರಾಯೊಜಕತ್ವದಲ್ಲಿ 5ನೇ ವರ್ಷದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ, ಹಾಗೂ 48 ವರ್ಷಗಳಿಂದ ಚೆನ್ನಯಪೂಜಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮೋಹನ ಪೂಜಾರಿ ಮುರಂತ ಬೆಟ್ಟು ಸನ್ಮಾನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಶ್ರೀಯುತರಾದ ಪಶುಪತಿ ಶಾಸ್ತ್ರಿ, ಜಯಪ್ರಕಾಶ್ ಪಡಿವಾಳ್, ಜಯರಾಮ್ ಅಮೀನ್ ಅರ್ದೊಟ್ಟು ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಅರಣಾಕುಮಾರ ಕೊಪ್ಳು ವಹಿಸಿದ್ದರು. ಸ್ವಾಗತವನ್ನು ಗಾಯತ್ರಿ ಮೋಹನ್ ಚಂದ್ರ ಕುಲಾಲ್ ,ಸನ್ಮಾನ ಪತ್ರವನ್ನು ಕವಿತಾ ರಮೇಶ್ ಧನ್ಯವಾದವನ್ನು ವಿಕಾಸ್ ಕುಲಾಲ್ ನಡೆಸಿಕೊಟ್ಟರು. ನಿರೂಪಣೆ ಸಪ್ನ ಕುಲಾಲ್ ಬನ್ನಡ್ಕ ನಿರ್ವಾಹಿಕೊಟ್ಟರು. ಕಾರ್ಯಕ್ರಮದ ಸಮಗ್ರ ನಿರ್ವಾಹಣೆಯನ್ನು ಮೋಹನ್ ಹೊಸ್ಮಾರ್ ನೇತ್ರತ್ವದಲ್ಲಿ ಕುಲಾಲ ಕಲಾವೇದಿಕೆ ತಂಡ ಮೂಡಬಿದ್ರೆ ನಡೆಸಿಕೊಟ್ಟಿತ್ತು. ತದನಂತರ ಸ.ಹಿ.ಪ್ರಾ ಶಾಲೆ ಕಲ್ಲಮುಂಡ್ಕೂರು ಹಾಗು ಅಂಗನವಾಡಿ ಕೇಂದ್ರ ಕಳಸಬೈಲು ಇದರ ಪುಟಾಣಿಗಳ ನ್ರತ್ಯ ಕಾರ್ಯಕ್ರಮ ನಡೆಯಿತು. ನಂತರ ಪಲ್ಲವಿ ಕಲಾವಿದರು ಕಾರ್ಕಳ ಇವರಿಂದ ಶಿವಭಕ್ತ ಮಾರ್ಕಂಡೆಯೆ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶಿಸಲ್ಪಟ್ಟಿತು