ಮುಲ್ಕಿ: ಕಿನ್ನಿಗೋಳಿ ಪರಿಸರದಲ್ಲಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಖ್ಯಾತ ಗಾಯಕರಾಗಿ ಸಾಂಸ್ಕೃತಿಕ ರಂಗದಲ್ಲಿ ಸಾಧಕರಾದ ಪ್ರಕಾಶ್ ಕಿನ್ನಿಗೋಳಿ ರವರ ಸಾಧನೆ ಅಭಿನಂದನೀಯ ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಪಟ್ಲ ಹೇಳಿದರು.
ಅವರು ಕಿನ್ನಿಗೋಳಿಯ “ಸಮೃದ್ಧಿ ಹೊಟೇಲ್ ಸಭಾಂಗಣ”ದಲ್ಲಿ ಪಟ್ಲ ಫೌಂಡೇಶನ್ ಘಟಕ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಕಾಶ್ ಕಿನ್ನಿಗೋಳಿ ರವರನ್ನು ಸನ್ಮಾನಿಸಿ ಮಾತನಾಡಿದರು
ಮುಖ್ಯ ಅತಿಥಿಗಳಾಗಿ ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು , ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ,ಪಟ್ಲ ಫೌಂಡೇಶನ್ ಮುಂಬೈ ಘಟಕದ ಅಧ್ಯಕ್ಷ ಹಾಗೂ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪಟ್ಲ ಫೌಂಡೇಶನ್ ಎಕ್ಕಾರು ಘಟಕದ ಅಧ್ಯಕ್ಷ ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ಕಿನ್ನಿಗೋಳಿ ವಲಯ ಪಟ್ಲ ಫೌಂಡೇಶನ್ ನೂತನ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ಕರ್ಕೇರಾ , ಸ್ವರಾಜ್ ಶೆಟ್ಟಿ ಮುಂಡ್ಕೂರು,ಶರತ್ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಶರತ್ ಶೆಟ್ಟಿ ಸಂಕಲಕರಿಯ ನಿರೂಪಿಸಿದರು ಸಾಯಿನಾಥ ಶೆಟ್ಟಿ ಧನ್ಯವಾದ ಅರ್ಪಿಸಿದರು.