Wednesday, February 19, 2025
Homeಉಡುಪಿಸಮಾಜ ಸೇವಕರಾದ ಶೈಖ್ ವಾಹಿದ್ ದಾವೂದ್ ರವರಿಗೆ ಸನ್ಮಾನ

ಸಮಾಜ ಸೇವಕರಾದ ಶೈಖ್ ವಾಹಿದ್ ದಾವೂದ್ ರವರಿಗೆ ಸನ್ಮಾನ

ಆ23 ಜುಲೈ 2024, ಮಂಗಳವಾರ ಸಂಜೆ ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರದ ವತಿಯಿಂದ ಸಮಾಜ ಸೇವೆಕ, ರಾಜಕೀಯ ನೇತಾರ, ಗೌರವ ಡಾಕ್ಟರೇಟ್ ಪದವಿ ಹಾಗೂ ರಾಜ್ಯ ವಿಭೂಷಣ ಪ್ರಶಸ್ತಿ ಪಡೆದ ಶೈಖ್ ವಾಹಿದ್ ದಾವುದ್ ರವರಿಗೆ ಗೌವರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಎನ್ ಎನ್ ಒ ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಹಾಫಿಝ್ ಫಝಲ್ ಕಂಡ್ಲೂರುರವರ ಕುರ್ ಆನ್ ಪಠಣದೊಂದಿಗೆ ಸಭೆ ಆರಂಭವಾಯಿತು. ಕಮ್ಯೂನಿಟಿ ಸೆಂಟರ್ ನ ಪ್ರಧಾನ ಕಾರ್ಯದರ್ಶಿ ನಮ್ಮ ನಾಡ ಒಕ್ಕೂಟದ ಕಾರ್ಯ ಚಟುವಟಿಕೆಗಳನ್ನು ವಿವರಿಸುತ್ತಾ ಸ್ವಾಗತಿಸಿದರು. ಮುಖ್ಯ ಅತಿಥಿ ಡಾ. ಭಾಸ್ಕರ್ ಕಾರ್ಣಿಕರವರು ಸನ್ಮಾನಿತರನ್ನು ಅಭಿನಂದಿಸುತ್ತಾ ಶುಭಹಾರೈಸಿದರು.

ಎನ್ ಎನ್ ಒ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮೌಲಾನ ಝಮೀರ್ ಅಹ್ಮದ್ ರಶಾದಿ ಮತ್ತು ಮಾಜಿ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಫಝ್ಲುರ್ರಹ್ಮಾನ್ ಗಂಗೊಳ್ಳಿ, ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಮುಹಮ್ಮದ್ ರಫೀಕ್ ಬಿಎಸ್ಎಫ್ ಸಂದರ್ಭೋಚಿತವಾಗಿ ಮಾತನಾಡಿದರು. ಶೈಖ್ ವಾಹಿದ್ ದಾವೂದ್ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ಉಸ್ಮಾನ್ ಪಳ್ಳಿ ಸನ್ಮಾನ ಪತ್ರ ವಾಚಿಸಿದರು ಮತ್ತು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಮುಜಾವರ್ ಅಬು ಮುಹಮ್ಮದ್ ಕುಂದಾಪುರ ವಂದಿಸಿದರು. ಕೇಂದ್ರ ಸಮಿತಿ ಕೋಶಾಧಿಕಾರಿ ಪೀರು ಸಾಹೇಬ್ ಉಡುಪಿ, ಜಿಲ್ಲಾ ಸದ್ಯಸ್ಯರಾದ ನಿಹಾರ್ ಅಹ್ಮದ್, ಹಾರುನ್ ಸಾಸ್ತಾನ್, ಕಮ್ಯೂನಿಟಿ ಸೆಂಟರ್ ನ ಕೋಶಾಧಿಕಾರಿ ಎಸ್. ಅನ್ವರ್ ಕಂಡ್ಲೂರು ಕೆ ಸಿ ಸಿ ಉಪಾಧ್ಯಕ್ಷ ಜಮಾಲ್ ಗುಲ್ವಾಡಿ ಸದ್ಯಸ್ಯರಾದ ಮನ್ಸೂರ್ ಮರವಂತೆ, ಹಾರೀಸ್ ಮೂಡ್ ಗೋಪಾಡಿ, ಅಲ್ತಾಫ್ ಮೂಡ್ಗೋಪಾಡಿ, ಅಬೂಬಕ್ಜರ್ ಮಾವಿನಕಟ್ಟೆ ,ಅಕ್ರಮ್ ಉಡುಪಿ ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular