ಮೂಡುಬಿದಿರೆ : ತನ್ನ ಪುಟ್ಟ ಮಗುವನ್ನೆತ್ತಿಕೊಂಡು ತಂದೆಯೋರ್ವ ಸೇತುವೆ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಮಧ್ಯಾಹ್ನ ಗುರುಪುರದಲ್ಲಿ ನಡೆದಿದೆ.
ಕೈಕಂಬದ ನಿವಾಸಿ ಸಂದೀಪ್ ಎಂಬಾತ ತನ್ನ ಎರಡು ವರ್ಷದ ಮಗುವನ್ನೆತ್ತಿಕೊಂಡು ಗುರುಪುರ ಸೇತುವೆಯ ಮೇಲೇರುವುದನ್ನು ಗಮನಿಸಿದ ಸ್ಥಳೀಯರು ಆತ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆಂದು ಯೋಚಿಸಿ ಉಪಾಯದಿಂದ ಕೆಳಗಿಳಿಸಿ ಮಗು ಸಹಿತ ಆತನನ್ನು ಹಿಡಿದು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಸಂದೀಪ್ ಬಳಿ ವಿಚಾರಿಸಿದಾಗ ತಾನು ಮಗುವಿಗೆ ಹೊಳೆ ತೋರಿಸುವ ಉದ್ದೇಶದಿಂದ ಸೇತುವೆಯನ್ನು ಮೇಲೇರಿರುವುದಾಗಿ ತಿಳಿಸಿದ್ದು ಪೊಲೀಸರು ಆತನಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆನ್ನಲಾಗಿದೆ.