ಕಾರ್ಕಳ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ತುಳು ಸಂಘ ತುಡರ್ ಇದರ ಆಶ್ರಯದಲ್ಲಿ ತಾರೀಕು 17/09/22 ರಂದು ತುಡರ ಸಿರಿ ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ದಯಾನಂದ ಜಿ ಕತ್ತಲ್‌ಸಾರ್ ಅವರು ತುಳು ಸಂಸ್ಕೃತಿಯ ಸಾಂಪ್ರದಾಯಿಕ ಶೈಲಿಯಲ್ಲಿ ಕಾರ್ಯಕ್ರಮವನ್ನ ಉದ್ಘಾಟಿಸಿದರು.

ತುಳು ಲಿಪಿ ಮತ್ತು ಭಾಷೆಯ ಇತಿಹಾಸವನ್ನು ವರ್ಣಿಸಿ ಅದರ ಮಹತ್ವವನ್ನು ತಿಳಿಸುತ್ತ ತುಳು ಭಾಷೆ ಕರ್ನಾಟಕದ ಅಧಿಕೃತ ರಾಜ್ಯ ಭಾಷೆಯಾಗ ಬೇಕು‌ ಹಾಗೂ ಅದರಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ನಿರ್ವಹಿಸ ಬೇಕೆಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಿರಂಜನ್ ಎನ್ ಚಿಪ್ಳೂಣ್ಕರ್ ರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತುಳು ಮತ್ತು ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಾಯನ ಮಾಡಬೇಕು ಮತ್ತು ಇದಕ್ಕೆ ನಮ್ಮ ವಿದ್ಯಾ ಸಂಸ್ಥೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ರೊಬೊಟಿಕ್ಸ್ ಕ್ಲಬ್ಬಿನ ವಿದ್ಯಾರ್ಥಿಗಳು ತಯಾರಿಸಿದ ನೂತನ ರೋಬೋಟಿನ ಅನಾವರಣ ಮಾಡಲಾಯಿತು. ವೇದಿಕೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಾಯಿಗೀತ, ನಿಟ್ಟೆ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಐ ಆರ್ ಮಿತ್ತಂತ್ತಾಯ, ಆಫ್ ಕ್ಯಾಂಪಸ್ ಸೆಂಟರಿನ ಪರೀಕ್ಷಾಂಗದ ‌ಉಪ ಕುಲಸಚಿವರಾದ ಡಾ ಸುಬ್ರಮಣ್ಯ ಭಟ್ ನಿಟ್ಟೆ,ಡಾ ಶ್ರೀನಾಥ್ ಶೆಟ್ಟಿ ರೆಸಿಡೆಂಟ್ ಇಂಜಿನಿಯರ್,ಡಾ ನರಸಿಂಹ ಬೈಲಕೆರಿ ಡೀನ್ ಸ್ಟೂಡೆಂಟ್ ವೆಲ್ಫೇರ್, ಸಂಘದ ಮಾರ್ಗದರ್ಶಕರಾದ ಶ್ರೀಮತಿ ಸುಧೀಕ್ಷಾ ಪೈ ಉಪಸ್ಥಿತರಿದ್ದರು. ತುಡರ್ ಸಂಘದ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ಕಾರ್ಯಕ್ರಮಕ್ಕೆ ಗಣ್ಯರನ್ನ ಸ್ವಾಗತಿಸಿ, ವಿಘ್ನೇಶ್ ಶೆಟ್ಟಿ ವಂದಿಸಿದರು. ಅನ್ವೇಷ್ ಶೆಟ್ಟಿ ದಯಾನಂದ ಕತ್ತಲ್‌ಸಾರ್ ಅವರನ್ನ ಸಭೆಗೆ ಪರಿಚಯಿಸಿದರು. ಸುಶಾನ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಸಂಸ್ಥೆಯ ಸ್ಟೀರಿಯೋ ಕ್ಲಬ್ ಹಾಗೂ ಕಲಾಂಜಲಿ ತಂಡದಿಂದ ತುಳು ಹಾಡುಗಳ ಗಾಯನ ಮತ್ತು ತುಳುನಾಡಿನ ಸಾಂಪ್ರದಾಯಿಕ ನೃತ್ಯದ ಪ್ರದರ್ಶನ ನಡೆಯಿತು.