ಮಂಗಳೂರು:ತುಳುವೆರ್ ಕುಡ್ಲ (ರಿ) ಮಹಿಳಾ ಘಟಕ ಸಂಘಟನೆ ವತಿಯಿಂದ ತುಳು ಬರೆಕ ನಮ ಅಭಿಯಾನ ಕಾರ್ಯಕ್ರಮವು ಕೊಜಿಪಾಡಿ ಅಂಗನವಾಡಿ ಶಾಲೆಯಲ್ಲಿ ನಡೆಯಿತು.

ತುಳುವೆರ್ ಕುಡ್ಲ (ರಿ) ಸಂಘಟನೆಯ ಮಹಿಳಾ ಅಧ್ಯಕ್ಷೆ ಪೂಜಾ ಜಿ. ಶೆಟ್ಟಿ, ಪದಾಧಿಕಾರಿ ನಕುಲ್ ಇವರು ಕಾರ್ಯಕ್ರಮ ನಡೆಸಿಕೊಟ್ಟರು. ತುಳು ಲಿಪಿ ಫಲಕವನ್ನು (ಚಾರ್ಟ್ ) ಕೊಜಿಪಾಡಿ ಅಂಗನವಾಡಿ ಶಾಲೆಯ ಶಿಕ್ಷಕರಿಗೆ ನೀಡಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಇನ್ನಷ್ಟು ಮಕ್ಕಳು ತುಳು ಲಿಪಿ ಕಲಿಯಬೇಕು ಎನ್ನುವ ಉದ್ದೇಶದಿಂದ ಈ ಅಭಿಯಾನವನ್ನು ಮಾಡಲಾಯಿತು. ತುಳುವೆರ್‌ ಕುಡ್ಲ(ರಿ) ಸಂಘಟನೆಯ ಈ ಅಭಿಯಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ತುಳುವೆರ್ ಕುಡ್ಲ (ರಿ) ಸಂಘಟನೆಯ ಮಹಿಳಾ ಅಧ್ಯಕ್ಷೆ ಪೂಜಾ ಜಿ. ಶೆಟ್ಟಿ, ಪದಾಧಿಕಾರಿ ನಕುಲ್, ಅಂಗನವಾಡಿ ಶಿಕ್ಷಕರು, ಮಕ್ಕಳು ಸ್ಥಳೀಯರು ಉಪಸ್ಥಿತರಿದ್ದರು.