ಆ.4ರಂದು ಮೂಡುಬಿದಿರೆ ಕನ್ನಡ ಭವನದಲ್ಲಿ ಕುರಲ್‌ ಕಲಾವಿದರಿಂದ ʻಯೇರ್‌ʼ ನಾಟಕದ ಪ್ರಥಮ ಪ್ರದರ್ಶನ

0
398

ಮೂಡುಬಿದಿರೆ: ʻಬರವುದ ಬೀರೆʼ ದಿ. ಸುರೇಂದ್ರ ಕುಮಾರ್‌ ಕಲತ್ರಪಾದೆ ಇವರ ಶುಭಾಶೀರ್ವಾದಗಳೊಂದಿಗೆ ಪ್ರಸಾದ್‌ ಆಳ್ವ ಪಡುಕೊಣಾಜೆ ಇವರ ಸಾರಥ್ಯದಲ್ಲಿ, ಬಾಲಿಕಾ ಜೈನ್‌ ಪಡುಕೊಣಾಜೆ ಇವರ ಸಮಗ್ರ ನಿರ್ವಹಣೆಯಲ್ಲಿ ಯೋಗೀಶ್‌ ಪೂಜಾರಿ ಪೇರಲ್ಕೆ ಇವರ ದಕ್ಷ ನಿರ್ದೇಶನದಲ್ಲಿ ʻಯೇರ್‌ʼ ತುಳುನಾಟಕ ಪ್ರಥಮ ಪ್ರದರ್ಶನ ಆ.4ರಂದು ಮೂಡುಬಿದಿರೆ ಸ್ಕೌಟ್ಸ್‌ ಗೈಡ್ಸ್‌ ಕನ್ನಡ ಭವನದಲ್ಲಿ ನಡೆಯಲಿದೆ. ವಿ.ಎಸ್.‌ ಶಶಿಧರ ದೇವಾಡಿಗ ಅವರ ವಿಭಿನ್ನ ಶೈಲಿಯ ಕಥೆಯಿದ್ದು, ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ ಕಥೆ ಈ ನಾಟಕದಲ್ಲಿದೆ.
ನಾಟಕ ಪ್ರಥಮ ಪ್ರದರ್ಶನವಾಗಿರುವುದರಿಂದ ಉಚಿತ ಪ್ರವೇಶವಿರುತ್ತದೆ ಎಂದು ಕುರಲ್‌ ಕಲಾವಿದೆರ್‌ ಬೆದ್ರ ತಂಡದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆ.4ರ ಭಾನುವಾರ ಸಂಜೆ 7.30ಕ್ಕೆ ಕಲಾಪ್ರೇಮಿಗಳು ಈ ಸದವಕಾಶವನ್ನು ಬಳಸಿಕೊಂಡು ಕಲಾವಿದರನ್ನು ಪ್ರೋತ್ಸಾಹಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

LEAVE A REPLY

Please enter your comment!
Please enter your name here