ಕಳತ್ತೂರು ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ವತಿಯಿಂದ, ಜೈ ತುಳುನಾಡ್ (ರಿ) ಕಾಸ್ರೋಡು ಘಟಕ ಮತ್ತು ಕೇರಳ ತುಳು ಅಕಾಡೆಮಿಯ ಸಹಯೋಗದೊಂದಿಗೆ
ತುಳು ಲಿಪಿ ಬ್ರಹ್ಮ ಡಾ. ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಹುಟ್ಟುಹಬ್ಬ ಮತ್ತು ವಿಶ್ವ ತುಳು ಲಿಪಿ ದಿನ – ಪುವೆಂಪು ನೆಂಪು ಕಾರ್ಯಕ್ರಮ ಗುರುವಾರ ನಡೆಯಿತು. ಬಲೆ ತುಳು ಕಲಿಯುವ ಕಾರ್ಯಾಗಾರವನ್ನು ಇದೇ ವೇಳೆ ಉದ್ಘಾಟಿಸಲಾಯಿತು.
ಜೈ ತುಳುನಾಡು (ರಿ.) ಕಾಸ್ರೋಡು ಘಟಕದ ಅಧ್ಯಕ್ಷ ಕುಶಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಗಣೇಶ್ ರಾವ್, ಮುಖ್ಯ ಶಿಕ್ಷಕ ರಾಧಾಕೃಷ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಮ ಭಟ್, ಕುಂಬ್ಳೆ ಗ್ರಾಮ ಪಂಚಾಯತ್ ಪದಾಧಿಕಾರಿ ಪುಷ್ಪಲತಾ ಪಿ. ಶೆಟ್ಟಿ, ಸಾಹಿತಿ ವಿಜಯರಾಜ್ ಪುಣಿಂಚಿತ್ತಾಯ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಸಂತ ಚೂರಿತಡ್ಕ, ಎಂಪಿಟಿಎ ಅಧ್ಯಕ್ಷ ಸುಧಾಶೆಟ್ಟಿ, ವಿನೋದ ಪ್ರಸಾದ ರೈ ಕಾರಿಂಜ, ಹರಿಕಾಂತ ಕಾಸರಗೋಡು ಉಪಸ್ಥಿತರಿದ್ದರು. ಶ್ರೀನಿವಾಸ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಧನ್ಯವಾದ ಸಲ್ಲಿಸಿದರು.
ಕಳತ್ತೂರು ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ವಿಶ್ವ ತುಳು ಲಿಪಿ ದಿನ – ಪುವೆಂಪು ನೆಂಪು ಕಾರ್ಯಕ್ರಮ
RELATED ARTICLES