Saturday, June 14, 2025
Homeತುಳುನಾಡುಶಾರದಾ ವಿದ್ಯಾಲಯದಲ್ಲಿ ತುಲುವೆರೆ ಕಲ ವರ್ಸೊಚ್ಚಯ; ಕಲತ ಮಸ್ತಿರೆ ಬಿಡುಗಡೆ ಕಾರ್ಯಕ್ರಮ

ಶಾರದಾ ವಿದ್ಯಾಲಯದಲ್ಲಿ ತುಲುವೆರೆ ಕಲ ವರ್ಸೊಚ್ಚಯ; ಕಲತ ಮಸ್ತಿರೆ ಬಿಡುಗಡೆ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ `ತುಳುನಾಡು ವಾರ್ತೆ’ಗೆ ತುಳು ಪತ್ರಿಕಾ ಮಾಧ್ಯಮ-ಕಲತ ಮಾನಾದಿಗೆ

ಮಂಗಳೂರು: ತುಲುವೆರೆ ಕಲ ವರ್ಸೊಚ್ಚಯ, ಕಲತ ಮಸ್ತಿರೆ ಬಿಡುಗಡೆ ಕಾರ್ಯಕ್ರಮವು ಮಂಗಳೂರುನ ಕೊಡಿಯಾಲ್ ಬೈಲಿನ ಶಾರದಾ ವಿದ್ಯಾಲಯದಲ್ಲಿ ಬುಧವಾರ ನಡೆಯಿತು. ಶಾರದಾ ವಿದ್ಯಾಲಯ ಮಂಗಳೂರು ಇದರ ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ತುಳುನಾಡು ವಾರ್ತೆ ಪತ್ರಿಕೆಗೆ ತುಳು ಪತ್ರಿಕಾ ಮಾಧ್ಯಮ ಕಲತ ಮಾನಾದಿಗೆ ಸನ್ಮಾನ ನಡೆಯಿತು. ಜೊತೆಗೆ ಟೈಮ್ಸ್ ಆಫ್ ಕುಡ್ಲ, ತುಳುನಾಡು ಧ್ವನಿ, ಪೂವರಿ, ಪಿಂಗಾರ ಮುಂತಾದ ಪತ್ರಿಕೆಗಳಿಗೂ ತುಳು ಪತ್ರಿಕಾ ಮಾಧ್ಯಮ-ಕಲತ ಮಾನಾದಿಗೆ ಸಲ್ಲಿಕೆಯಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಲುವೆರ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ವಹಿಸಿದ್ದರು. ಖ್ಯಾತ ನಿರೂಪಕರು, ಸಂಘಟಕರು ಕದ್ರಿ ನವನೀತ್ ಶೆಟ್ಟಿ ಯೂಟ್ಯೂಬ್ ಲೋಕಾರ್ಪಣೆ ಮಾಡಿದರು. ಸಾಹಿತಿ ಕಾ. ವಿ. ಕೃಷ್ಣದಾಸ್ ಮತ್ತು ನಿರೂಪಕ ರಾಜೇಂದ್ರ ಪ್ರಸಾದ್ ಎಕ್ಕಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೊಲ್ಲಿದಾರಗೆ, ಉದಿಪು, ಉಪ್ಪರಿಗೆ, ತುಡರ್, ಕೇಪುಲ, ಪುಂಡಿಕಾಣಿಕೆ ಕೃತಿಗಳ ಬಿಡುಗಡೆಯಾಯಿತು. ವಿಜಯಲಕ್ಷ್ಮಿ ಕಟೀಲ್, ಡಾ ಮೀನಾಕ್ಷಿ ರಾಮಚಂದ್ರ , ರಾಜಶ್ರೀ ಟಿ. ರೈ ಪೆರ್ಲ , ವೀಣಾ ಟಿ. ಶೆಟ್ಟಿ , ರಘು ಇಡ್ಕಿದು, ಅಕ್ಷಯ ಆರ್. ಶೆಟ್ಟಿ ಕೃತಿ ಪರಿಚಯಿಸಿದರು.

ಉಪನ್ಯಾಸ ಮತ್ತು ಪಾತೆರಕತೆ ಕಾರ್ಯಕ್ರಮದಲ್ಲಿ ಮುದ್ದು ಮೂಡುಬೆಳ್ಳೆ ಅವರು ತುಳು ಸಾಹಿತ್ಯದ ಬುಲೆಚ್ಚಿಲ್ ದ ತಾದಿ ಆನಿ-ಇನಿ-ನನ ವಿಷಯದ ಕುರಿತು ಉಪನ್ಯಾಸ ನೀಡಿದರು. ಹರಿಣಿ ಎಂ. ಶೆಟ್ಟಿ, ದಿವ್ಯ ಅಂಚನ್ ಪಕ್ಷಿಕೆರೆ, ಪದ್ಮನಾಭ ಪೂಜಾರಿ ನೇರಂಬೋಳ್ ಇವರಿಗೆ ಕಲತ ಬೊಲ್ಲಿ – ಮೋಕೆದ ತಮ್ಮನ ನಡೆಯಿತು.. ತುಲುವೆರೆ ಕಲತ ಪದುಕೆರೆನ ಚಾತುರ್ಪು ತೂಪರಿಕೆ – ಪದರಂಗಿತ ಮಿನದನ ನಡೆಯಿತು.. ಹಿರಿಯ ಸಾಹಿತಿ ಸದಾನಂದ ನಾರಾವಿ ಇವರಿಂದ ಮುಗಿತಲದ ಮದಿಪು ನಡೆಯಿತು. ಅಮೃತ ತುಲು ಚಿಟ್ಕ ಕಬಿಕೂಟದಲ್ಲಿ ತುಳುನಾಡಿನ ಸುಮಾರು 40 ಪ್ರತಿಭಾನ್ವಿತ ಕವಿಗಳು ಪಾಲ್ಗೊಂಡು ಕವನ ವಾಚನ ಮಾಡಿದರು.

RELATED ARTICLES
- Advertisment -
Google search engine

Most Popular