ಮಂಗಳೂರು: ತುಳು ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಭಾರತದ ಅತಿದೊಡ್ಡ ಒಟಿಟಿ ಆಪ್ book my show stream ನಲ್ಲಿ ತುಳು ಸಿನೆಮಾವೊಂದು ಪ್ರದರ್ಶನಗೊಳ್ಳುತ್ತಿದೆ. ಒನ್ ಆಂಡ್ ಒನ್ಲಿ ಗಬ್ಬರ್ ಸಿಂಗ್ ಚಿತ್ರ ಈಗ ಬುಕ್ ಮೈ ಶೋ ಸ್ಟ್ರೀಮ್‌ನಲ್ಲಿ ಪ್ರದರ್ಶನ ಕಂಡಿದೆ.
ನೀವು ಇದ್ದಲ್ಲಿಯೇ ಟಿವಿ, ಆಂಡ್ರಾಯ್ಡ್ ಫೋನ್, ಐಫೋನ್‌ನಲ್ಲಿ ಈ ಸಿನೆಮಾ ನೋಡುವ ಅವಕಾಶ ದೊರಕಿದೆ. ಇಂದಿನಿಂದ ಚಿತ್ರ ಒಟಿಟಿ ಫ್ಲಾಟ್‌ಫಾರಂನಲ್ಲಿ ಪ್ರದರ್ಶನಗೊಳ್ಳುತ್ತಿದೆ.
ತುಳುನಾಡಿನಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತಿದ್ದ ತುಳು ಸಿನೆಮಾ ಈಗ ಒಟಿಟಿ ಫ್ಲಾಟ್‌ಫಾರಂನಲ್ಲಿ ಪ್ರದರ್ಶನಗೊಳ್ಳುವುದರ ಮೂಲಕ ಜಗತ್ತಿನ ಎಲ್ಲೇ ಇದ್ದರೂ ತುಳುವರು ತುಳು ಸಿನೆಮಾ ನೋಡಬಹುದಾಗಿದೆ.
ಸಿನೇಮಾದ ಬುಕ್ ಮೈ ಶೋ ಲಿಂಕ್ ಕೆಳಗೆ ನೀಡಲಾಗಿದೆ. ಈ ಲಿಂಕ್ ಕ್ಲಿಕ್ ಮಾಡಿದಲ್ಲಿ ಗಬ್ಬರ್ ಸಿಂಗ್ ಸಿನೆಮಾದ ಲಿಂಕ್ ದೊರೆಯುತ್ತದೆ. 89 ರೂ. ಪಾವತಿಸಿದರೆ ಒಂದು ಬಾರಿ ಸಿನೆಮಾ ನೋಡಬಹುದು. 149 ರೂ. ಕೊಟ್ಟರೆ ಸಿನೆಮಾವನ್ನು ಆಪ್‌ನಲ್ಲಿ ಖರೀದಿಸಿ ಯಾವಾಗ ಬೇಕಾದರೂ ಎಷ್ಟು ಸಾರಿಯಾದರೂ ನೋಡಬಹುದು.
https://in.bookmyshow.com/mangaluru-mangalore/movies/one-and-only-gabbar-singh-tulu/ET00395053