Tuesday, April 22, 2025
HomeUncategorizedಮೇ 3ರಂದು ತುಳುನಾಡಿನಾದ್ಯಂತ `ಗಬ್ಬರ್ ಸಿಂಗ್’ ತುಳುಚಿತ್ರ ತೆರೆಗೆ

ಮೇ 3ರಂದು ತುಳುನಾಡಿನಾದ್ಯಂತ `ಗಬ್ಬರ್ ಸಿಂಗ್’ ತುಳುಚಿತ್ರ ತೆರೆಗೆ

ಮಂಗಳೂರು: ತುಳು ಚಿತ್ರರಂಗದ ಜನಪ್ರಿಯ ಕಲಾವಿದರ ಕೂಡುವಿಕೆಯೊಂದಿಗೆ ನಿರ್ಮಾಣಗೊಂಡಿರುವ `ಗಬ್ಬರ್ ಸಿಂಗ್’ ತುಳು ಚಿತ್ರ ಮೇ 3ರಂದು ಶುಕ್ರವಾರ ತುಳುನಾಡಿನಾದ್ಯಂತ ತೆರೆ ಕಾಣಲಿದೆ. ಮುತ್ತು ಗೋಪಾಲ್ ಫಿಲಂಸ್ ಬಾರ್ಕೂರು ಲಾಂಛನದಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಚಿತ್ರ ನಿರ್ಮಾಪಕ ಸತೀಶ್ ಪೂಜಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನೆಮಾಸ್, ಸಿನೆಪೊಲಿಸ್, ಪಿವಿಆರ್, ಉಡುಪಿಯ ಕಲ್ಪನಾ, ಭಾರತ್ ಸಿನೆಮಾಸ್, ಮಣಿಪಾಲದ ಐನಾಕ್ಸ್, ಭಾರತ್ ಸಿನೆಮಾಸ್, ಸುರತ್ಕಲ್ ನ ಸಿನಿಗ್ಯಾಲಕ್ಸಿ, ಪಡುಬಿದ್ರಿಯ ಭಾರತ್ ಸಿನೆಮಾಸ್, ಕಾರ್ಕಳದ ರಾಧಿಕಾ, ಪ್ಲಾನೆಟ್, ಪುತ್ತೂರಿನ ಭಾರತ್ ಸಿನೆಮಾಸ್, ಬೆಳ್ತಂಗಡಿಯ ಭಾರತ್ ಚಿತ್ರ ಮಂದಿರಗಳಲ್ಲಿ `ಗಬ್ಬರ್ ಸಿಂಗ್’ ಪ್ರದರ್ಶನಗೊಳ್ಳಲಿದೆ.

ಉತ್ತರ ಪ್ರದೇಶದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿ ಕತೆ ಹೆಣೆಯಲಾಗಿದೆ. ಉತ್ತಮ ಹಾಸ್ಯದೊಂದಿಗೆ ಸಿನೆಮಾ ಚೆನ್ನಾಗಿ ಮೂಡಿಬಂದಿದೆ.

ಸಿನೆಮಾದಲ್ಲಿ ಆರು ಹಾಡುಗಳಿವೆ. ಚಿತ್ರಾಪುರ, ಬೈಕಂಪಾಡಿ, ಸುರತ್ಕಲ್ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದೆ. ನಾಯಕ ನಟನಾಗಿ ಶರತ್ ಶೆಟ್ಟಿ, ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ.

ಸತೀಶ್ ಪೂಜಾರಿ ಬಾರ್ಕೂರು ಅವರು ಕತೆ, ಚಿತ್ರಕತೆ ರೂಪಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ನಿರ್ದೇಶಿಸಿದ್ದಾರೆರ.

ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರು, ರವಿ ರಾಮಕುಂಜ, ಗಿರೀಶ್ ಎಂ. ಶೆಟ್ಟಿ, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವಾ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ, ಸುರತ್ಕಲ್ ಸಂತೋಷ್, ಚಂದ್ರಹಾಸ ಶೆಟ್ಟಿ ಕಪ್ಪೆಟ್ಟು, ಫ್ರಾಂಕಿ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಬೇಬಿ ಆಧ್ಯಾ ಉಡುಪಿ ಮೊದಲಾದವರಿದ್ದಾರೆ.

ಭೋಜರಾಜ ವಾಮಂಜೂರು, ಚಂದ್ರಶೇಖರ ನಾನಿಲ್ ಹಳೆಯಂಗಡಿ, ನಟ ಶರಣ್ ಶೆಟ್ಟಿ, ನಟಿ ವೆನ್ಸಿಟಾ ಪತ್ರಿಕಾಗೋಷ್ಠಿಯಲ್ಲಿದ್ದರು.

RELATED ARTICLES
- Advertisment -
Google search engine

Most Popular