ಕಟೀಲು: ತುಳುವರ್ಲ್ಡ್ ಫೌಂಡೆಶನ್ ಶ್ರೀ ಕ್ಷೇತ್ರ ಕಟೀಲಿನಲ್ಲಿ ಜನವರಿ 29 ರಂದು ಶ್ರೀಹರಿ ನಾರಾಯಣ ಆಸ್ರಣ್ಣ ರ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಸಂಕಿರಣದ ಪೂರ್ವಭಾವಿ ಸಭೆಯಲ್ಲಿ ತುಳುರಾಷ್ಟ್ರಿಯ ವಿಚಾರ ಸಂಕಿರಣ ಮಾರ್ಚ್ 16 , ಭಾನುವಾರದಂದು ಕಟೀಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಮತ್ತು ‘
ತುಳುನಾಡ ಆದಿಮೂಲ ದೈವಲಾಯಿನ ಬೆರ್ಮೆರ್ ಬೊಕ್ಕ ಲೆಕ್ಕೇಸಿರಿಯ : ಪಾಡ್ದನ, ಆಲಡೆಲು ಬೊಕ್ಕ ಪ್ರಾದೇಶಿಕತೆದ ಮಿತ್ತ್ ಅಧ್ಯಯನ ‘ ಎಂಬ ವಿಷಯದ ಮೇಲೆ ಸಂಕಿರಣ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.
ತುಳು ವಿಚಾರ ಸಂಕಿರಣ ಸುಮಾರು ನೂರರಷ್ಟು ಸಂಶೋಧನಾ ಲೇಖನಗಳನ್ನು ಆಹ್ವಾನಿಸಿ ಸ್ವೀಕಾರ ಮಾಡುವ ಉದ್ದೇಶ ಹೊಂದಿದೆ. ಆದಿಮೂಲ ದೈವಬೆರ್ಮೆರ್, ಲೆಕ್ಕೇ ಸಿರಿ, ಪಾಡ್ದನ, ಬೆರ್ಮೆರ್ ಬೊಕ್ಕ ಬೈದ್ಯೆರ್, ಮುಗೇರ ಕಲಟು ಬೆರ್ಮೆರ್, ನಾಗ ಬೆರ್ಮೆರ್, ಬೆರ್ಮೆರ್ ಬನ, ಲೆಕ್ಕೇಸಿರಿ ಬನ, ಕಂಬುಲ, ಪೂಕರೆ, ಪ್ರಾದೇಶಿಕ ಬೆರ್ಮೆರ್, ಶಾಸನೊಡು ಬೆರ್ಮೆರ್, ಇತ್ಯಾದಿ ವಿಷಯಗಳ ಮೇಲೆ ನಾಲ್ಕರಿಂದ ಆರುಪುಟಗಳನ್ನು ಮೀರದಂತೆ ಸಂಶೋಧನಾ ಲೇಖನಗಳನ್ನು , 250 ರಿಂದ 300 ಶಬ್ದದೊಳಗೆ ಸಾರಾಂಶ ಲೇಖನಗಳನ್ನು ತುಳು ( ಕನ್ನಡ ಲಿಪಿ) , ಕನ್ನಡ, ಮಲಯಾಳ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಇಮೇಲ್/ ಪೋಸ್ಟ್ ಮುಖಾಂತರ ಫೆಬ್ರವರಿ 20 , 2025 ರ ಒಳಗೆ ಕಳುಹಿಸಿಕೊಡಬೇಕೆಂದು ವಿಚಾರ ಸಂಕಿರಣದ ಸಂಯೋಜಕ ಪ್ರೊ. ಪುರುಷೋತ್ತಮ ಬಲ್ಯಾಯರು ಮನವಿ ಮಾಡಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಸಂಸ್ಥೆಯ ಸ್ಥಾಪಕ ನಿರ್ದೇಶಕರಾದ ಡಾ.ರಾಜೇಶ್ ಕೃಷ್ಣ ಆಳ್ವ , ಶ್ರೀ ದೇವಪ್ಪ ಶೆಟ್ಟಿ, ಶ್ರೀ ವಸಂತ ರೈ, ಉಪಾಧ್ಯಕ್ಷೆ ಶ್ರೀಮತಿ ತಾರಾ ಆಚಾರ್ಯ, ಶ್ರೀ ಕಟೀಲ್ ಉಮೇಶ ಶೆಟ್ಟಿ., ಉಪನ್ಯಾಸಕರಾದ ಶ್ರೀ ಸುಧೀರ್ , ಪದಾಧಿಕಾರಿಗಳು , ಸದಸ್ಯರು ಭಾಗವಹಿಸುತ್ತಾರೆ.