spot_img
23.6 C
Udupi
Tuesday, March 28, 2023
spot_img
spot_img
spot_img

ಕಾಸರಗೋಡು ಜಿಲ್ಲೆಯ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತುಲು ಲಿಪಿ ನಾಮಫಲಕ ಅನಾವರಣ

ದಿನಾಂಕ 22 ಜನವರಿ 2023 ರಂದು ತುಲು ಸಾಹಿತಿ, ತುಲು ಲಿಪಿ ಸಂಶೋಧಕರಾದ ದಿ| ಡಾ.ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಹುಟ್ಟೂರು ಸಮೀಪ ಕಾಸರಗೋಡು ಜಿಲ್ಲೆಯ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನ ತುಲು ಲಿಪಿ ನಾಮಫಲಕ ಅನಾವರಣ ಮಾಡಲಾಯಿತು. ದೇವಸ್ಥಾನದಲ್ಲಿ ತುಲು ಲಿಪಿ ನಾಮಫಲಕದ ಉದ್ಘಾಟನೆಯನ್ನು ಶ್ರೀ ಪುಂಡೂರು ಪುರುಷೋತ್ತಮ ಪುಣಿಂಚತ್ತಾಯ ನಿವೃತ್ತ ಉಪನ್ಯಾಸಕ, ಮೃದಂಗ ವಾದಕರು ಹಾಗು ಶ್ರೀ ಪುಂಡೂರು ರಾಮಚಂದ್ರ ಪುಣಿಂಚತ್ತಾಯ ನಿವೃತ್ತ ಶಿಕ್ಷಕ, ಕವಿ, ಯಕ್ಷಗಾನ ಕಲಾವಿದರಾದ ಇವರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಹಾವಿಷ್ಣು ಸೇವಾ ಸಮಿತಿ ಬೆಳ್ಳೂರು ಇದರ ಅಧ್ಯಕ್ಷರಾದ ಶ್ರೀ ಎ ಬಿ ಗಂಗಾಧರ ಬಲ್ಲಾಳ್ ಅಡ್ವಳ, ಶ್ರೀ ಮಹಾವಿಷ್ಣು ಸೇವಾ ಸಮಿತಿ ಬೆಳ್ಳೂರು ಇದರ ಕಾರ್ಯದರ್ಶಿ ಡಾ|| ಶ್ರೀ ಮೋಹನ್ ದಾಸ್ ರೈ, ಜೈ ತುಲುನಾಡ್ (ರಿ.) ಸಂಘಟನೆಯ ಉಪಾಧ್ಯಕ್ಷರಾದ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಜೈ ತುಲುನಾಡ್ (ರಿ.) ಕಾಸರಗೋಡು ಘಟಕದ ಜೊತೆ ಕಾರ್ಯದರ್ಶಿ ಜಗನ್ನಾಥ್ ಕುಲಾಲ್, ಜೈ ತುಲುನಾಡ್ (ರಿ.) ಕಾಸರಗೋಡು ಘಟಕದ ಖಜಾಂಚಿ ಉತ್ತಮ ಉರುಳಿತಡ್ಕ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.
ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತುಲು ಲಿಪಿ ನಾಮಫಲಕ ಅಳವಡಿಕೆಯ ಮಾಡಿದ ಶ್ರೀ ಮಹಾವಿಷ್ಣು ಸೇವಾ ಸಮಿತಿ ಬೆಳ್ಳೂರು ಇದರ ಅಧ್ಯಕ್ಷರಾದ ಶ್ರೀ ಎ ಬಿ ಗಂಗಾಧರ ಬಲ್ಲಾಳ್ ಅಡ್ವಳ ಇವರಿಗೆ ನೆನಪಿನ ಕಾಣಿಕೆ ನೀಡಿ ಜೈ ತುಲುನಾಡ್ (ರಿ.) ಸಂಘಟನೆಯು ಸನ್ಮಾನಿಸಿದರು.
ಈ ಕಾರ್ಯಕ್ರಮಕ್ಕೆ ತುಲು ಸಾಹಿತಿ ಶ್ರೀ ವಿಜಯರಾಜ್ ಪುಣಿಂಚತ್ತಾಯ ಸ್ವಾಗತಿಸಿದರು ಹಾಗು ಚಂದ್ರಶೇಖರ ಆಚಾರ್ಯ ನಾಟೆಕಲ್ಲು ಧನ್ಯವಾದ ಗೈದರು. ತುಲು ನಾಟಕ ಕಲಾವಿದರಾದ ಸುಂದರ್ ರಾಜ್ ರೈ ನಾಟೆಕಲ್ಲು ನಿರೂಪಿಸಿದರು.

Related Articles

Stay Connected

0FansLike
3,752FollowersFollow
0SubscribersSubscribe
- Advertisement -

Latest Articles