ಮ್ಯಾಜಿಕ್ ಮೊಮೆಂಟ್ಸ್ ಪ್ರೊಡಕ್ಷನ್ಸ್ ಮತ್ತು ವಿಕೆ ಫಿಲ್ಮ್ಸ್‌ನ ಬಹುನಿರೀಕ್ಷಿತ ತುಳು ಕಿರುಚಿತ್ರದ ಟೀಸರ್ “ಅರೆಕ”https://youtu.be/z8dCK-trQbg?si=BF7x1PZkbUzzOsCM ಈಗಾಗಲೆ ವಿಕೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದ್ದು ಭಾರೀ ರೋಮಾಂಚನದ ದೃಶ್ಯಗಳಿಂದ ಕೂಡಿಬಂದಿದೆ.
ಮೂಡುಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಳ್ವಾಸ್ ಡಿಗ್ರಿ ಕಾಲೇಜಿನ 3ನೇ ದರ್ಜೆಯ ಆನಿಮೇಷನ್ ವಿಧ್ಯಾರ್ಥಿಗಳಾದ ಧನ್‌ರಾಜ್ ಶೆಟ್ಟಿ ಯವರು ನಿರ್ಮಾಪಣೆ ಹಾಗೂ ಎಡಿಟಿಂಗ್, ಸಹಾಯಕ ನಿರ್ದೇಶಕರಾಗಿ ಸುಜಲ್ ಪೂಜಾರಿ ಮಾರ್ನಾಡ್ ಮತ್ತು ದೀಕ್ಷಿತ್, ಛಾಯಾಗ್ರಹಣ ನಿರ್ದೇಶಕರಾಗಿ ಆಕಾಶ್ ರಾವ್, ಸಹಾಯಕ ಛಾಯಾಗ್ರಹಣ ನಿರ್ದೇಶಕರಾಗಿ ಲೋಕೇಶ್, ದೀಕ್ಷಿತ್, ಶ್ರೀರಾಜ್ ಮತ್ತು ಅಮೋಘ, ವಿಜ್ಯುಲ್ ಎಫೆಕ್ಟ್ಸ್ ಮತ್ತು ಸಿಜಿಐ ಮಾಜಿಕ್ ಮೊಮೆಂಟ್ ಪ್ರೊಡಕ್ಷನ್ಸ್, ಕಲೆ ಮತ್ತು ವಿವರಣೆಗಾಗಿ ಪ್ರಥಮ್ ಆಚಾರ್ಯ ಮತ್ತು ಸುಹಾಸ್ ಪೂಜಾರಿ, ಪೋಸ್ಟರ್ ಡಿಸೈನರಾಗಿ ದೀಕ್ಷಿತ್.
ಪ್ರಮುಖ ಪಾತ್ರದಲ್ಲಿ ಆಕಾಶ್ ಪೂಜಾರಿ, ರಿತೇಶ್ ಪೂಜಾರಿ, ಪ್ರಣಾಮ್ ಆಚಾರ್ಯ, ಚಿಂತನ್ ರೈ, ಧೀರಜ್ ಕುಲಾಲ್, ಆಕಾಶ್ ಶೆಟ್ಟಿ, ಪ್ರಜ್ವಲ್, ಲೆಸ್ಟನ್ ಮತ್ತು ಮೋಹನ್ ಬಂಗೇರರವರು ನಟಿಸಿದರು.
ಆಳ್ವಾಸ್ ಡಿಗ್ರಿ ಕಾಲೇಜಿನ ಆನಿಮೇಷನ್ ವಿಭಾಗದ ಮುಖ್ಯಸ್ಥ ರವಿಚಂದ್ರ ಮೂಡುಕೋಣಾಜೆ, ಉಪನ್ಯಾಸಕರಾಗಿ ಶಂಕರ್ ಕಾಮತ್, ಅರುಣ್ ಕುಮಾರ್ ಮತ್ತು ಅಫ್‌ಝಲ್ ಆದಂ ಶುಭಹಾರೈಸಿದರು.
2024ರ ಮಾರ್ಚ್ 31ನೇ ತಾರೀಕಿನಂದು ಸಂಜೆ 6:30ಕ್ಕೆ ತುಳು ಕಿರುಚಿತ್ರ “ಅರೆಕ ವಿಕೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.