ತುಳುಕೂಟ ಗೋವಾ ಘಟಕ ಅ.20ರಂದು ಉದ್ಘಾಟನೆಗೊಳ್ಳಲಿದೆ. ಗೋವಾದ ಪೊರ್ವರಿಮ್ ನಾರ್ತ್ ಪುಂಡಲೀಕ ದೇವಸ್ಥನದ ಸಭಾಗೃಹದಲ್ಲಿ ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ರೈ ತುಳುಕೂಟ ಗೋವಾ ಘಟಕದ ಉದ್ಘಾಟನೆ ಮಾಡಲಿದ್ದಾರೆ.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಸಂಶೋಧಕ ಡಾ. ಅರುಣ್ ಉಳ್ಳಾಲ್ ಪ್ರಮುಖ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋವಾದ ಶಾಸಕರು ಮತ್ತು ಸಚಿವರಾದ ರೋಹನ್ ಅಶೋಕ್ ಕೌಂಟೆ ಭಾಗವಹಿಸಲಿದ್ದಾರೆ. ಜಿಲ್ಲಾ ಕಂಬಳ ಸಮಿತಿಯ ಕಾರ್ಯಧ್ಯಕ್ಷ ಕೆ. ಗುಣಪಾಲ ಕಡಂಬ, ರಂಗಭೂಮಿ ಮತ್ತು ಸಿನೆಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಎಸ್‌ಎನ್‌ಎಸ್ ಕಾಲೇಜು ಸುಂಕದಕಟ್ಟೆದ ಪ್ರಾಧ್ಯಾಪಕರಾದ ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ, ತುಳು ಚಿತ್ರರಂಗ ಕಲಾವಿದರಾದ ಪ್ರಸನ್ನಶೆಟ್ಟಿ ಬೈಲೂರು, ತುಳುಕೂಟ ಬೆದ್ರದ ಅಧ್ಯಕ್ಷ ಧನಕೀರ್ತಿ ಬಲಿಪ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ತುಳುವರ 12 ತಿಂಗಳ ಇತಿಹಾಸ, ಸಂಸ್ಕೃತಿ ನೆನಪಿಸು ನೃತ್ಯ ಮಿನದನ ತುಳುಕೂಟ ಬೆದ್ರದ ಪದಾಧಿಕಾರಿಗಳಿಂದ ನಡೆಯಲಿದೆ. ನಂತರ ಶಿವಧೂತ ಗುಳಿಗೆ ತುಳುನಾಟಕ ಪ್ರದರ್ಶನ ನಡೆಯಲಿದೆ.