ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸ್ಥಾಪನ ಸಮಿತಿ ಮಂಗಳೂರು ಮತ್ತು ತುಳುನಾಡ ರಕ್ಷಣಾ ವೇದಿಕೆಯೊಂದಿಗೆ ತುಳುನಾಡಿನ ವೀರ ರೈತರಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮ “ತುಳುನಾಡ ಅಮರ ಸುಳ್ಯ ಸಮರ 1837” ಸಂಸ್ಮರಣೆ ಮತ್ತು ವಿಜಯ ದಿನಾಚರಣೆಯ ಕಾರ್ಯಕ್ರಮವು ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಡೆಯಿತು. ಆದಿಚುಂಚನ ಗುರಿ ಕಾವೂರು ಶಾಖ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಕೆದಂಬಾಡಿ ರಾಮಯ್ಯಗೌಡ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಗೌರವವಂದನೆ ಸಲ್ಲಿಸಿದರು. ಪ್ರಮುಖರಾದ ಡಿಬಿ ಬಾಲಕೃಷ್ಣ, ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಸ್ಥಾಪನ ಸಮಿತಿಯ ಅಧ್ಯಕ್ಷ ಕಿರಣ್ ಗುಡ್ಡೆಗೆ ಗುತ್ತು, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ಭಾಸ್ಕರ್ ದೇವಸ್ಯ, ರಕ್ಷಿತ್ ಪುತ್ತಿಲ, ಕಿರಣ್ ಹೊಸೋಳಿಕೆ, ಶಶಿ ಬಂಡಿಮಾರ್, ಪ್ರಶಾಂತ್ ಭಟ್ ಕಡಬ, ಮಹೇಶ್ ನಡುತೋಟ, ಆನಂದ್ ಪಿ.ಎಚ್, ಸುನಿಲ್ ಕೇರ್ ನಾಟಕ ಶಾಂತಪ್ಪ ಯು, ಸುರೇಶ್ ಬೈಲು, ಶಿವರಾಮ್ ಗೌಡ , ಮಹೇಶ್ ಮೋಂಟಡ್ಕ, ಗಣೇಶ್ ಕುಲಾಯಿ, ಪುರುಷೋತ್ತಮ ದೇವಸ್ಯ, ಸುಂದರ್ ಬಿ, ಕಲಾವತಿ, ಜಯಶ್ರೀ, ಡಾ. ಅರುಣ, ಶರಣ್ ರಾಜ್, ಕೆ, ಕ್ಲೀಟಸ್ ಲೋಬೋ, ಫ್ರಾಂಕಿ ಡಿಸೋಜ, ಶಾರದಾ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಿತ್ರಕಲಾ ಮತ್ತು ರಸಪ್ರಶ್ನೆ ಸ್ಪರ್ಧೆಗಳು ನಡೆಯಿತು.