ಉಡುಪಿ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕ ವತಿಯಿಂದ 21-03-2024 ರಂದು ಗುರುವಾರ ಬೆಳಗ್ಗೆ 10.30 ಗಂಟೆಗೆ ಸರಿಯಾಗಿ ರಾಷ್ಟ್ರೀಯ ಹೆದ್ದಾರಿ ಸಂತೆಕಟ್ಟೆಯಲ್ಲಿ ಸಾರ್ವಜನಿಕರು ಅನುಭವಿಸುವ ಸಮಸ್ಯೆಗಳ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗ ಯೋಜನೆ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ನೀಡಿರುತ್ತಾರೆ.
ರಾಷ್ಟ್ರೀಯ ಹೆದ್ದಾರಿ 66 ಕಲ್ಯಾಣಪುರ ಸಂತೆಕಟ್ಟೆಯಲ್ಲಿ ನಡೆಯುತ್ತಿರುವ ಅಂಡರ್ ಪಾಸಿಂಗ್ ರಸ್ತೆ ಕಾಮಗಾರಿ ಆಗುತ್ತಿದ್ದು ಸದ್ರಿ, ರಾಷ್ಟ್ರೀಯ ಹೆದ್ದಾರಿಯಾ ಬಲಬದಿಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಸದರಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಬಹಳ ತೊಂದರೆ ಉಂಟಾಗುತ್ತಿದ್ದು ದಿನನಿತ್ಯ ಪರದಾಡುವ ಪರಿಸ್ಥಿತಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ನಿರ್ಲಕ್ಷದಿಂದ ಉಂಟಾಗಿರುತ್ತಾರೆ. ಸದರಿ ಅಸಂರ್ಪಕ ರಸ್ತೆಯಿಂದಾಗಿ ಈವರೆಗೆ ಹಲವಾರು ಅಪಘಾತಗಳು ಉಂಟಾಗಿ ಹಲವಾರು ಕುಟುಂಬದ ಮಕ್ಕಳು ಹಾಗೂ ದುಡಿಯುತ್ತಿರುವ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ತಮ್ಮ ಪ್ರಾಣವನ್ನು ಕಳೆದುಕೊಂಡು ಎಷ್ಟೋ ಕುಟುಂಬಗಳು ಬೀದಿಗೆ ಬಂದಿರುತ್ತದೆ. ಇದಕ್ಕೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಮತ್ತು ನಮ್ಮ ಜಿಲ್ಲಾಡಳಿತದ ಕಾರ್ಯವೈಖರಿಯೇ ಕಾರಣವಾಗಿರುತ್ತದೆ ಸದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಮ್ಮ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಹಾಗೂ ಹಲವಾರು ಅಧಿಕಾರಿಗಳು ಸದ್ರಿ ರಸ್ತೆಯಲ್ಲಿ ಹಲವಾರು ಬಾರಿ ಪ್ರಯಾಣಿಸಿದ್ದರೂ ಕೂಡ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ರಸ್ತೆಯಲ್ಲಿ ಬಿದ್ದಿರುವ ಹೊಂಡಗಳಿಗೆ ಸರಿಯಾದ ಕಾಮಗಾರಿ ಮಾಡದೆ ಜಲ್ಲಿ ಹುಡಿ ಹಾಕಿ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಸವಾರರಿಗೆ ತೊಂದರೆಗಳಾಗಲಿಕ್ಕೆ ಮುಖ್ಯ ಕಾರಣವಾಗಿರುತ್ತದೆ. ಹಾಗೂ ಅಲ್ಲಿನ ರಸ್ತೆ ಅಕ್ಕ -ಪಕ್ಕ ಧೂಳಿನಿಂದ ಕೂಡಿದ್ದು ವಾಹನ ಸಂಚಾರಿಗಳಿಗೆ ಮತ್ತು ಪಾದಚಾರಿಗಳಿಗೆ ತುಂಬಾ ನರಕಯಾತನೇ ಆಗಿದೆ. ಆದುದರಿಂದ ಸಂಬಂಧ ಪಟ್ಟ ಇಲಾಖೆಯ ಕೂಡಲೇ ಕರ್ಮ ಕೈಗೊಳ್ಳುವುದು ಮತ್ತು ಕೆ. ಜಿ. ರೋಡ್ ರಸ್ತೆಯ ದುರಸ್ತಿ ಕಲ್ಪಿಸುವಂತೆ ತುಳುನಾಡ ರಕ್ಷಣಾ ವೇದಿಕೆ ಬಲವಾಗಿ ಒತ್ತಾಯ ಮಾಡಿರುತ್ತದೆ ಈ ಬಗ್ಗೆ ವಿಳಂಬ ಧೋರಣೆಯನ್ನು ಅನುಸರಿಸಿದಲ್ಲಿ ಮುಂದಿನ ದಿನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಉಗ್ರ ರೀತಿಯ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ತುಳುನಾಡ ರಕ್ಷಣಾ ವೇದಿಕೆ ನಿಯೋಗ ಆಕ್ರೋಶ ವ್ಯಕ್ತಪಡಿಸಿದರು. ನಿಯೋಗ ಕ್ಕೆ ಎಪ್ರಿಲ್ 15 ರೊಳಗೆ ಸಂತೆಕಟ್ಟೆಯಿಂದ ಉಡುಪಿ ಹೋಗುವ ಅಂಡರ್ ಪಾಸಿಂಗ್ ರಸ್ತೆ ಸಾರ್ವಜನಿಕರಿಗೆ ಉಪಯೋಗಕ್ಕೆ ಬಿಟ್ಟುಕೊಡುವುದಾಗಿ ಭರವಸೆ ನೀಡಿರುತ್ತಾರೆ. ನಿಯೋಗದಲ್ಲಿ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿ’ಸೋಜ ಕೊಳಲಗಿರಿ, ಜಿಲ್ಲಾ ಅಧ್ಯಕ್ಷರಾದ ಕೃಷ್ಣ ಕುಮಾರ್, ಪ್ರಧಾನ ಕಾರ್ಯದರ್ಶಿ ಅಜರುದ್ದೀನ್ ಸುಬ್ರಮಣ್ಯ ನಗರ , ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ, ಮಹಿಳಾ ಜಿಲ್ಲಾಧ್ಯಕ್ಷರಾದ ಶೋಭಾ ಪಂಗಳಾ, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಸತೀಶ್ ಪೂಜಾರಿ ಕಿಳಂಜೆ , ಕಾಪು ತಾಲೂಕು ಅಧ್ಯಕ್ಷರಾದ ಹರೀಶ್ ಶೆಟ್ಟಿ ಮಹಿಳಾ ಪ್ರಧಾನ ಕಾರ್ಯದರ್ಶಿ, ನಾಗಲಕ್ಷ್ಮಿ, ಕಾಪು ಮಹಿಳಾ ಅನುಸೂಯ ಶೆಟ್ಟಿ , ರೋಷನ್ ಬಲ್ಲಾಳ್ , ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್, ಮುಖಂಡರುಗಳಾದ ಪ್ರೀತಮ್ , ಕುಶಾಲ್ ಅಮೀನ್ ಬೆಂಗ್ರೆ, ರೋಷನ್ ಬಂಗೇರ, ರೋಹಿಣಿ ಶೆಟ್ಟಿ , ಶಂಕರ್ ಉಡುಪಿ, ಮಜೀದ್ ದೊಡ್ಡಣ್ಣ ಗುಡ್ಡೆ, ಸಾಧನ , ರವಿಜಾ , ಸುಲತ ವರಾಂಗ , ಸಂಗೀತ ಶೆಟ್ಟಿ ಪಡ್ಡಮ್ , ಮಮತಾ ಎಂ ಮತ್ತಿತರರು ಉಪಸ್ಥಿತರಿದ್ದರು.