ಉಪ್ಪುರು ಗ್ರಾಮದ ಕೊಳಲಗಿರಿ ಜಂಕ್ಷನ್ ನಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತಿದ್ದು ಇದರ ಸರಕಾರಿ ಜಾಗದ ಸರ್ವೆ ನಂಬರ್ 255/1ಎ ಆಗಿದ್ದು ಸರಕಾರದ ಗಮನಕ್ಕೆ ವಿಷಯ ತಂದು
ಈ ಬಗ್ಗೆ ಮನವಿ ಸಲ್ಲಿಸಿ ಸರಕಾರ ಜಾಗದಲ್ಲಿ ಸಂತೆಯ ಬಗ್ಗೆ ಕಾದಿರಿಸಿದ ಜಾಗ ಎಂದು ನಮೂದಿಸಲು ತಿಳಿಸಲಾಗಿತ್ತು . ಇನ್ನು ಸಹ ಇಂತಹ ಕಾರ್ಯ ನಡೆದಿಲ್ಲ ಆದರೂ ಸಹ 2017418ನೇ ಸಾಲಿನಿಂದ ವಾರದ ಸಂತೆ ನಡೆಯುತ್ತಿದ್ದು ಇದು ಸಂತೋಷದ ಸಂಗತಿ ಈಗ ಗ್ರಾಮ ಪಂಚಾಯಿತಿ ನಿರ್ಣಯ ಏಲಂ ಎಂದು ಪ್ರಕಟವಾಗಿರುತ್ತದೆ. ಸಭೆ ನಿರ್ಣಯ ನಂಬರ್ 116/2024-25 ದಿನಾಂಕ 12-08-2024 ರಂತೆ ತಾವುಗಳು ಈ ಬಗ್ಗೆ ಏಲಂ ಕರೆದಿರುತ್ತೀರಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಈ ಬಗ್ಗೆ ಆಕ್ಷೇಪ ಎತ್ತಿದ್ದು ಏಲಂ ಮಾಡುವುದಾದರೆ.
ನಿಯಮ ಆರ್ ಟಿ ಸಿ ಯಲ್ಲಿ ಸಂತೆಯ ಬಗ್ಗೆ ಕಾಯ್ದರಿಸಿದ ಜಾಗ ಎಂದು ನಮೂದಿಸಿರಿ ಸಂತೆ ಜಾಗದಲ್ಲಿ ಶೌಚಾಲಯದ ವ್ಯವಸ್ಥೆ ಮಾಡಿ ಸೂಕ್ತ ಸಂತೆ ಬಗ್ಗೆ ಚಾವಾಣಿ ನಿರ್ಮಾಣ ಮಾಡಿ ಈ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕ ಏಲಂ ಹಾಕಿ ಇಲ್ಲವಾದಲ್ಲಿ ಈಗ ಪ್ರತಿ ವಾರ ಸಂತೆ ಹೇಗೆ ನಡೆಯುತ್ತದೆ ಅದೇ ರೀತಿ ನಡೆಯಲಿ ಎಂದು ತುಳುನಾಡ ರಕ್ಷಣಾ ವೇದಿಕೆ ಉಪ್ಪುರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದೆ. ಮನವಿ ಸ್ವೀಕರಿಸಿದ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಉಡುಪಿ ಜಿಲ್ಲಾ ವೀಕ್ಷಕರದ ಫ್ರಾಂಕಿ ಡಿಸೋಜ ಕೊಳಲಗಿರಿ ಬ್ರಹ್ಮಾವರ ತಾಲೂಕ್ ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ತಾಲೂಕು ಗೌರವಾಧ್ಯಕ್ಷ ಸುರೇಂದ್ರ ಪೂಜಾರಿ. ಜಿಲ್ಲಾ ಕಾರ್ಮಿ ಘಟಕ ಅಧ್ಯಕ್ಷ ಜಯ ಪೂಜಾರಿ ಕಾರ್ಮಿ ಘಟಕ ಯುವ ಅಧ್ಯಕ್ಷ ರೋಷನ್ ಬಂಗೇರ ಉಪಸ್ಥಿತರಿದ್ದರು.