Saturday, June 14, 2025
Homeಉಡುಪಿಸಿ ಎನ್ ಜಿ ಗ್ಯಾಸ್ ಅಭಾವ ಶೀಘ್ರದಲ್ಲಿ ಪರಿಹರಿಸುವಂತೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ...

ಸಿ ಎನ್ ಜಿ ಗ್ಯಾಸ್ ಅಭಾವ ಶೀಘ್ರದಲ್ಲಿ ಪರಿಹರಿಸುವಂತೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಒತ್ತಾಯ

ಉಡುಪಿ: ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸಿ.ಎನ್.ಜಿ. ಗ್ಯಾಸ್ ಅಭಾವ ನೀಗಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ 5000 ಕ್ಕೂ ಅಧಿಕ ಸಿ ಎನ್ ಜಿ ಆಟೋ ರಿಕ್ಷಾ ಇದ್ದು ಉಡುಪಿ ತಾಲೂಕಿನಲ್ಲಿ 1500 ಕ್ಕೂ ಅಧಿಕ ಸಿ ಎನ್ ಜಿ ಆಟೋ ರಿಕ್ಷಾ ಚಾಲನೆಯಲ್ಲಿ ಇದೆ. ಉಡುಪಿ ತಾಲೂಕಿನಲ್ಲಿ 3 ಸಿ ಎನ್ ಜಿ ಪಂಪ್ ಇದ್ದು (ಪಂಪ್ ಇರುವ ಸ್ಥಳ ಗುಂಡಿಬೈಲ್, ಮಲ್ಪೆ , ಬೈಕಾಡಿ ಬ್ರಹ್ಮಾವರ) ರಿಕ್ಷಾ ಚಾಲಕರಿಗೆ ಗ್ಯಾಸ್ ಇಂಧನ ಸಿಗದೆ ಇರುವುದರಿಂದ ರಿಕ್ಷಾ ಚಾಲಕರಿಗೆ ತುಂಬಾ ತೊಂದರೆ ಆಗಿದೆ. ಉಡುಪಿ ತಾಲೂಕಿಗೆ 3 ಸಿ ಎನ್ ಜಿ ಪಂಪ್ ಇದ್ದು ನಿರೀಕ್ಷಿತ ಪ್ರಮಾಣದಲ್ಲಿ ಸರಬರಾಜು ಆಗುತ್ತಿಲ್ಲ ಹೆಜಮಾಡಿ ಯಿಂದ ಕುಂದಾಪುರದವರೆಗೆ ಕಾರ್ಕಳ ಸೇರಿದಂತೆ ಅದಾನಿ ಕಂಪನಿಗೆ ಸಿಎನ್ ಜಿ ಪೂರೈಕೆಯ ಟೆಂಡರ್ ಆಗಿದ್ದು ಒಟ್ಟು ಎಂಟು ಪಂಪುಗಳಲ್ಲಿ “ಅದಾನಿ ಸಿ ಎನ್ ಜಿ” ಸೌಲಭ್ಯ ಅಳವಡಿಸಲಾಗಿದೆ. ಈ ಭಾಗಕ್ಕೆ ಮಂಗಳೂರಿನಿಂದ ಸಿಎನ್ ಜಿ ಪೂರೈಸುತ್ತಿರುವ ಅದಾನಿ ಕಂಪನಿಗೆ ಪ್ರಸ್ತುತವಾಗಿ ಮಂಗಳೂರಿನಲ್ಲಿ ಸಿಎನ್ ಜಿ ಉತ್ಪಾದಿಸುವ ಸ್ವಂತ ಘಟಕ ಇಲ್ಲ ಹೀಗಾಗಿ ಗೇಲ್ ಕಂಪನಿಯಿಂದಲೇ ಸಿ.ಎನ್‌.ಜಿ ಖರೀದಿಸಿ ತನ್ನ ಏಜೆನ್ಸಿ ಅವರಿಗೆ ಪೂರೈಕೆ ಮಾಡುತ್ತಿದೆ ಸ್ವಂತ ಪ್ಲಾಂಟೇಶನ್ ಇಲ್ಲದೆ ಇನ್ನೊಬ್ಬರಿಂದ ಖರೀದಿಸಿ ಪೂರೈಕೆ ಮಾಡುತ್ತಿರುವುದೇ ಸದ್ಯದ ದೊಡ್ಡ ಸಮಸ್ಯೆಯಾಗಿದೆ ಇದರಿಂದ ರಿಕ್ಷಾ ಚಾಲಕರಿಗೆ ತುಂಬಾ ತೊಂದರೆ ಆಗಿರುತ್ತದೆ. ರಿಕ್ಷಾ ಚಾಲಕರು ಗ್ಯಾಸ್ ತುಂಬಿಸಲು ರಾತ್ರಿ ಹಗಲು ಎನ್ನದೆ ಸುಮಾರು 3 ರಿಂದ 4 ಗಂಟೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ರಿಕ್ಷಾ ಚಾಲಕರಿಗೆ ಉಂಟಾಗಿದೆ. ಇದರಿಂದ ದಿನವಿಡೀ ದುಡಿಯುವ ರಿಕ್ಷಾ ಚಾಲಕರಿಗೆ ದಿನ ತೆಗೆಯಲು ಬ್ಯಾಂಕ್ ಲೋನ್ ಕಟ್ಟುವ, ಮನೆಯ ಪರಿಸ್ಥಿತಿ ನಿಭಾಯಿಸಲು ತುಂಬಾ ಕಷ್ಟಕರ ಆಗಿರುವುದರಿಂದ ಈ ಕೂಡಲೇ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ 06-05-2024 ತಾರೀಕು ಸೋಮವಾರ ಬೆಳಗ್ಗೆ 11.00 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಜಿಲ್ಲಾಧಿಕಾರಿ ಪರವಾಗಿ ಅಪಾರ ಜಿಲ್ಲಾಧಿಕಾರಿ ಮಮತಾದೇವಿ ಯವರು ಮನವಿ ಸ್ವೀಕರಿಸಿದರು ತುಳುನಾಡ ರಕ್ಷಣಾ ವೇದಿಕೆ ನಿಯೋಗದಲ್ಲಿ ಉಡುಪಿ
ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾಧ್ಯಕ್ಷ ಕೃಷ್ಣಕುಮಾರ್. ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಪೂಜಾರಿ , ಬ್ರಹ್ಮಾವರ ತಾಲೂಕು ಘಟಕ ಗೌರವಾಧ್ಯಕ್ಷ ಸುರೇಂದ್ರ ಪೂಜಾರಿ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ, ಕಾಪು ತಾಲೂಕು ಅಧ್ಯಕ್ಷ ಹರೀಶ್ ಶೆಟ್ಟಿ , ಕಾರ್ಮಿಕ ಘಟಕ ಜಿಲ್ಲಾ ಉಪಾಧ್ಯಕ್ಷ ಕುಶಾಲ್ ಅಮೀನ್ ಬೆಂಗ್ರೆ , ಉಡುಪಿ ಜಿಲ್ಲಾ ಮಹಿಳಾ ಕೋಶಾಧಿಕಾರಿ ಸುನಂದಾ ಕೋಟ್ಯಾನ್, ಕಾರ್ಮಿಕ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅವಿನಾಶ್ ಮಾಸ್ಟರ್ ಆಟೋ ಘಟಕ ಅಧ್ಯಕ್ಷ ಅನಿಲ್ ಪೂಜಾರಿ, ರೋಷನ್ ಬಂಗೇರ ಮಮತಾ, ಅಮಿತ್ ಶೆಟ್ಟಿ , ಗುಣಕರ್ ನಾಯಕ್, ನಾಜಿಯ ಶೇಕ್, ರೇಣುಕಾ, ಅವಿನಾಶ್ ಸಂತೆಕಟ್ಟೆ ಮತ್ತಿತರ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular