ಪುಣೆ : ಮಹಾರಾಷ್ಟ್ರದ ಪುಣ್ಯ ಭೂಮಿ ಸಾಂಸ್ಕೃತಿಕ ನಗರಿ ಪುಣೆಯ ಹೆಮ್ಮೆಯ ಸಂಸ್ಥೆ ತುಳುಕೂಟ ಪುಣೆ ರಜತ ಮಹೋತ್ಸವದ ಸಂಭ್ರಮವು ಬೆಳಿಗ್ಗೆ 9 ರಿಂದ ಸಾಯಂಕಾಲ 9 ರ ವರೆಗೆ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಮ್ನನ ನಾಡೋಜ ಡಾ. ಜಿ. ಶಂಕರ್ ವೇದಿಕೆಯಲ್ಲಿ ತುಳುನಾಡ ಜಾತ್ರೆ, ವೈಭವದ ಮೆರವಣಿಗೆ, ಪೂರ್ಣ ಕುಂಭ ಸ್ವಾಗತದೊಂದಿಗೆ, ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮವನ್ನು ಪುಣೆಯಲ್ಲಿ ಪ್ರಥಮ ಬಾರಿಗೆ ತುಳುನಾಡ ಜಾತ್ರೆಯಾಗಿ ಸಮಸ್ತ ತುಳು-ಕನ್ನಡ ಬಾಂಧವರಿಂದ ಆಚರಿಸಲ್ಪಟ್ಟರು.
ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಪುಣೆಯಲ್ಲಿ ಹಾಗೂ ಹೊರ ರಾಜ್ಯ-ದೇಶಗಳಲ್ಲಿ ವಿಶೇಷ ಸಾಧನೆ ಮಾಡಿದಂತಹ 25 ತುಳುನಾಡಿನ ಸಾಧಕರಿಗೆ “ಗೌರವ ಪ್ರಶಸ್ತಿ”ಗಳನ್ನು ಪ್ರಧಾನಿಸಿ ಗೌರವಿಸಲಾಯಿತು.
“ಡಾ. ಪ್ರಕಾಶ್ ಶೆಟ್ಟಿ” ತುಳುನಾಡ ಪ್ರಾಚ್ಯ ಮತ್ತು ಗ್ರಾಮೀಣ ವಸ್ತುಸಂಗ್ರಹಾಲಯ ಉದ್ಘಾಟನೆಗೊಂಡು,
ಇಲ್ಲಿ ಹುಟ್ಟಿ ಬೆಳೆದ ತುಳುವರಿಗೆ ತುಳುನಾಡ ಕಲೆ ಸಂಸ್ಕೃತಿ, ಆಚಾರ, ವಿಚಾರಗಳು, ಪುರಾತನ ತುಳುನಾಡಿನ ಉಪಯೋಗಿಸುತಿದ್ದ ಪ್ರಾಚ್ಯ ವಸ್ತುಗಳ ಪ್ರದರ್ಶನ, ಸ್ತಬ್ದ ಚಿತ್ರಗಳ ಪ್ರದರ್ಶನ, ಅದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಯಿತು.
ಬೆಳಿಗ್ಗೆ 9.00 ರಿಂದ 10.30 ರವರೆಗೆ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದಿಂದ ತುಳು ಭಜನೆ ಮತ್ತು ಜಾನಪದ ಗೀತೆ, ಹಾಗೂ ವಿಠಲ್ ನಾಯಕ್ ಕಲ್ಲಡ್ಕ ಮತ್ತು ತಂಡ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ನಡೆಯಿತು. ಜೊತೆಗೆ ತುಳುನಾಡ ಶೈಲಿಯ ಪ್ರೀತಿ ಭೋಜನ ಏರ್ಪಡಿಸಲಾಗಿತ್ತು. ಪುಣೆ ತುಳುವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಿತು.
ರಜತ ಮಹೋತ್ಸವದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು ಮಾತನಾಡುತ್ತ ತುಳುಕೂಟದ ಪ್ರಾರಂಭದ ಸದಸ್ಯನಾಗಿ ತುಳುವನಾಗಿ ನನ್ನ ಸೇವೆಯನ್ನು ಸದಾ ನೀಡುತ್ತಾ ಬಂದವ. ಪುಣೆಯಲ್ಲಿ ನೆಲೆಸಿರುವ ಎಲ್ಲಾ ಧರ್ಮ, ಜಾತಿ ಭಾಂದವರ ತುಳು ಸಂಘಟನೆಯಿದ್ದಾರೆ ಅದು ತುಳುಕೂಟ ಪುಣೆಯಾಗಿದೆ.
ತುಳುಕೂಟ ಮೂಲಕ ತುಳು-ಕನ್ನಡಿಗ ಮಕ್ಕಳ ಶಿಕ್ಷಣ, ಅರೋಗ್ಯ, ಕಷ್ಟ ಸುಖಗಳಿಗೆ ಸ್ಪಂದಿಸಿ ಸಹಕಾರ ನೀಡಿ ಸಂಘವನ್ನು ಬೆಳೆಸಿದ್ದೇವೆ. ತುಳುಕೂಟಕ್ಕೆ ಏನಾದರೂ ಮಾಡಬೇಕೆಂಬ ಇಚ್ಛೆಯಂತೆ ತುಳುಕೂಟದ ಅಧ್ಯಕ್ಷರು ಕೈಗೊಂಡ ಸ್ವಂತ ಕಚೇರಿ, ಮಿನಿ ತುಳು ಭವನದ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ಪುಣೆ ತುಳುಕೂಟ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ಅಶ್ವತಗುತ್ತು ಮಾತನಾಡುತ್ತ 25ವರ್ಷಗಳ ಕಾಲ ತುಳುವರಿಗಾಗಿ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದ ಸಂಘಕ್ಕೆ ಸ್ಥಾಪಕ ಅಧ್ಯಕ್ಷರ ಬಯಕೆಯಂತೆ ರಜತ ಮಹೋತ್ಸವದ ಸಂಭ್ರಮ ಸಂಧರ್ಭದಲ್ಲಿ ಸ್ವಂತ ಕಛೇರಿ ಖರೀದಿಯೊಂದಿಗೆ, ಮಿನಿ ಭವನವನ್ನಾಗಿ ಪರಿವರ್ತಿಸಿ ತುಳುವರ ಸೇವೆಗಾಗಿ ನೀಡುವ ಉದ್ದೇಶದೊಂದಿಗೆ ನಾವು ಕೈ ಗೊಂಡ ಕಾರ್ಯಕ್ರಮ ಫಲಪ್ರದವಾಗಿ ಸಾಗುತಿದೆ ಎಂದು ತಿಳಿಸಿದರು.
ತುಳುಕೂಟ ಪುಣೆ(ರಿ) ಸಂಘ ನಡೆದು ಬಂದ ದಾರಿ
ಪುಣೆಯಲ್ಲಿ ತುಳುಕನ್ನಡಿಗರ ಹೆಚ್ಚು ಸಂಘ ಸಂಸ್ಥೆಗಳಿದ್ದರೂ ಪುಣೆಯಾದ್ಯಂತ ಇರುವ ತುಳುನಾಡ ಬಾಂಧವರನ್ನು ಭಾಷಿಕ ನೆಲೆಗಟ್ಟಿನಲ್ಲಿ, ಸಾಂಸ್ಕೃತಿಕ ಭಾವೈಕ್ಯತೆಯ ಹಾದಿಯಲ್ಲಿ ಒಂದೇ ಛತ್ರದಲ್ಲಿ ಸೇರಿಸುವ ಸಂಸ್ಥೆಯೇ ” ತುಳುಕೂಟ ಪುಣೆ ಮಹಾರಾಷ್ಟ್ರದ ಈ ಸಾಂಸ್ಕೃತಿಕ ನಗರಿ ಪುಣೆಯಲ್ಲಿರುವ ತುಳುನಾಡ ಬಾಂಧವರನ್ನು ಒಗ್ಗೂಡಿಸಲು, ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಯಾವುದೇ ಧರ್ಮ, ಜಾತಿಗೆ ಸೀಮಿತವಾಗದೆ ಸಾಮಾಜಿಕವಾಗಿ ನಮ್ಮ ಅಸ್ಮಿತೆಯನ್ನು ಸಾರಲು ಜಯ ಕೆ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಸಂಸ್ಥೆಯೇ ತುಳುಕೂಟ ಪುಣೆ . ನದಿಯೊಂದು ಉಗಮಿಸಿ ಹರಿಯುತ್ತಾ ತನ್ನ ಹರಿವನ್ನು ವಿಸ್ತರಿಸುತ್ತಾ ತನ್ನ ವಾಹಿನಿಯೊಳಗೆ ಅಗಾಧ ನೀರನ್ನು ಸೇರಿಸಿಕೊಂಡು ದೊಡ್ಡ ನದಿಯಾಗಿ ಹರಿದು ಸಾಗರವ ಸೇರಿದಂತೆ ಬೆರಳೆಣಿಕೆಯ ಸದಸ್ಯರಿಂದ ಆರಂಭಗೊಂಡ ತುಳುಕೂಟ ಬೆಳೆಯುತ್ತಾ ಇಂದು ಹಲವು ಏಳುಬೀಳುಗಳ ನಡುವೆಯೂ ಸಂಘವು ಹಂತ ಹಂತವಾಗಿ ಬೆಳವಣಿಗೆ ಹೊಂದುತ್ತಾ ಪುಣೆಯಲ್ಲಿಯೇ ಎಲ್ಲಾ ತುಳುನಾಡ ಬಾಂಧವರ ಅಭಿಮಾನದ ಸಂಸ್ಥೆಯಾಗಿ ರೂಪುಗೊಂಡಿದೆ. ಪ್ರತೀ ವರ್ಷ ವಾರ್ಷಿಕೋತ್ಸವದಲ್ಲಿ ಜನರು ಜಾತ್ರೆಯಂತೆ ಸಂಭ್ರಮಿಸುತ್ತಿರುವುದು ಸಂಘದ ಯಶಸ್ಸಿಗೆ ಸಾಕ್ಷಿಯಾಗಿದೆ.
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವ ದತ್ತ ಸಂಸ್ಥಾನಂ, ಶ್ರೀ ಕ್ಷೇತ್ರ ಒಡಿಯೂರು ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಅನಂತ ಕೃಷ್ಣ ಅಸ್ರಣ್ಣ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಕಟೀಲು, ಡಾ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ, ನಾಡೋಜ ಡಾ. ಜಿ. ಶಂಕರ್ ಸ್ಥಾಪಕರು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ, ಡಾ. ಕೆ. ಧರಣಿದೇವಿ ಮಾಲಗತ್ತಿ IPS, ಎ.ಸಿ. ಭಂಡಾರಿ ಅಧ್ಯಕ್ಷರು, ಅಖಿಲ ಭಾರತ ತುಳು ಒಕ್ಕೂಟ, ಸೂರ್ಯಕಾಂತ್ ಸುವರ್ಣ ಕಾರ್ಯಾಧ್ಯಕ್ಷರು, ಭಾರತ್ ಕೋ ಅಪರೇಟಿವ್ ಬ್ಯಾಂಕ್ ಮುಂಬಯಿ, ಯಶಪಾಲ್ ಸುವರ್ಣ ಶಾಸಕರು ಉಡುಪಿ, ಉದಯ ಕುಮಾರ್ ಶೆಟ್ಟಿ ಮುನಿಯಾಲ್ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ರವಿಶಂಕರ್ ಶೆಟ್ಟಿ ಬಡಾಜೆ ಆಡಳಿತ ಮೊಕೇಸರರು ಅಣ್ಣಪ್ಪ ಪಂಜುರ್ಲಿ, ಜುಮಾದಿಬಂಟ ದೈವಸ್ಥಾನ ಅಮ್ಮಾಡಿ, ಬಂಟ್ವಾಳ ತಾಲೂಕು, ಶ್ರೀ ಜಯ ಕೋಟ್ಯಾನ್ ಅಧ್ಯಕ್ಷರು, ದಕ್ಷಿಣ ಕನ್ನಡ ಉಡುಪಿ ಮೊಗವೀರ ಸಭಾ, ಡಾ. ಡೆವಿಸ್ ಫ್ರಾಂಕ್ ಫೆರ್ನಾಂಡಿಸ್, ಅನಿವಾಸಿ ಭಾರತೀಯ, ಉಮೇಶ್ ಶೆಟ್ಟಿ ಕಳತ್ತೂರು, ಖ್ಯಾತ ವಕೀಲರು ಉಡುಪಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಶೆಟ್ಟಿ ಎಂ. ಆರ್. ಜಿ. ಗ್ರೂಪ್ಸ್, ಬೆಂಗಳೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸದರು, ಮಂಗಳೂರು, ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು ಜಾಗತಿಕ ಬಂಟರ, ಸಂಘ, ಸಂತೋಷ್ ಶೆಟ್ಟಿ ಇನ್ನಕುರ್ಕಿಲ್ ಪಬೆಟ್ಟು ಅಧ್ಯಕ್ಷರು ಬಂಟರ ಸಂಘ ಪುಣೆ [ರಿ], ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಮುಂಬಯಿ [ರಿ], ಜಯಕರ್ ಶೆಟ್ಟಿ ಇಂದ್ರಾಳಿ
ಅಧ್ಯಕ್ಷರು ತುಳುಕೂಟ ಉಡುಪಿ, ರತ್ನಾಕರ್ ಹೆಗ್ಡೆ ಮಟ್ಟಾರ್ ಖ್ಯಾತ ವಕೀಲರು ಉಡುಪಿ, ಪ್ರತಾಪ್ ಸಿಂಹಾ ನಾಯಕ್ ಎಂಎಲ್ ಸಿ, ವೇದವ್ಯಾಸ್ ಕಾಮತ್ ಶಾಸಕರು ಮಂಗಳೂರು ದಕ್ಷಿಣ, ಉಡುಪಿ ತೋನ್ಸೆ ಮನೋಹರ್ ಶೆಟ್ಟಿ, ಹಾಗೂ ಸಲಹಾ ಸಮಿತಿ ತುಳುಕೂಟ ಪುಣೆ ಮತ್ತ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ನವನೀತ ಶೆಟ್ಟಿ ಮತ್ತು ಡಾ. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.
25 ತುಳು ಪ್ರಶಸ್ತಿ ಪುರಸ್ಕೃತರು
ಶಿಕ್ಷಣ: ಡಾ. ಹೀರಾ ಅಡ್ಯಂತಾಯ ಮುರಳಿ ಕಡೆಕಾರ್, ಸಮಾಜ ಸೇವಕರು: ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ,ಎನ್. ಕೆ. ಶೆಟ್ಟಿ, ನಿತ್ಯಾನಂದ ಶೆಟ್ಟಿ ವಳಕಾಡು, ಮೊಹಮ್ಮದ್ ಫಾರೂಕ್, ಗಡಿ ಪ್ರಧಾನರು: ರವಿ ಶಂಕರ್ ಶೆಟ್ಟಿ ಬಡಾಜೆ, ಪರಿಸರ: ರಾಧಾಕೃಷ್ಣ ನಾಯರ್ ಗ್ರೀನ್ ಹೀರೋ ಆಫ್ ಇಂಡಿಯಾ, ಅನಿವಾಸಿ ತುಳುವೆ: ಡಾ. ಡೆವಿಡ್ ಫ್ರಾಂಕ್ ಫೆರ್ನಾಂಡಿಸ್, ವೈದ್ಯಕೀಯ: ಡಾ. ಚಿತ್ತರಂಜನ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಧಾರ್ಮಿಕ: ಕೆ. ಕೆ. ಶೆಟ್ಟಿ ಅಹಮದ್ ನಗರ್, ಭರತನಾಟ್ಯ: ಸುಕನ್ಯಾ ಭಟ್, ತುಳು ಸಾಧಕರು: ಎ. ಸಿ. ಭಂಡಾರಿ, ಜಯ ಕೆ. ಶೆಟ್ಟಿ, ಗೊಬ್ಬು: ರಾಜೇಶ್ ಪೂಜಾರಿ, ಪಾಡ್ದನ: ಶಾರದಾ ವಿ. ಅಂಚನ್, ತುಳು ಚಲನಚಿತ್ರ: ರಾಮ್ ಶೆಟ್ಟಿ, ನಾಟಕ: ತೋನ್ಸೆ ವಿಜಯಕುಮಾರ್ ಶೆಟ್ಟಿ ಕಲಾಜಗತ್ತು ಮುಂಬಯಿ, ಯಕ್ಷಗಾನ: ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ತುಳುವೆ ಹರಿಶ್ಚಂದ್ರ: ರಂಜಿತ್ ಶೆಟ್ಟಿ, ಪತ್ರಿಕಾ ಮಾಧ್ಯಮ: ಹರೀಶ್ ಮೂಡಬಿದ್ರಿ, ಮರಣೋತ್ತರ: ದಿ. ಓಣಿಮಜಲು ಜಗನ್ನಾಥ್ ಶೆಟ್ಟಿ ದಿ. ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ.