ಸಾವಿರಾರು ವರುಷಗಳ ಇತಿಹಾಸವುಳ್ಳ ದೈವಾರಾಧನೆ ಮತ್ತು ಶ್ರೀಮಂತ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿರುವ ತುಳುನಾಡಿನ ಈ ನೆಲದ ಭಾಷೆ ತುಳು ಭಾಷೆಗೆ ಪ್ರಾಮುಖ್ಯತೆ ನೀಡಬೇಕು ಯಾಕೆಂದರೆ ಈ ನೆಲದಲ್ಲಿ ಒಂದು ಮಾತೃಭಾಷೆ ಇದ್ದು ಮೊದಲಿನದಾಗಿ ಅದಕ್ಕೆ ಮೌಲ್ಯ ಸಿಗಬೇಕು ಮತ್ತು ಬೆಂಗಳೂರು ಹಾಸನ ಮಂಡ್ಯ ಇನ್ನಿತರ ಪ್ರದೇಶಗಳಲ್ಲಿ ಕೇವಲ ಕನ್ನಡ ಇರುವುದರಿಂದ ಅಲ್ಲಿ ಕಡ್ಡಾಯದ ನೀತಿ ಅನ್ವಯಿಸುತ್ತದೆ. ಆದರೆ ತುಳುನಾಡಿನಲ್ಲಿ ಸರ್ವರೂ ಪ್ರೀತಿಸುವ ಹಾಗೂ ಸಂಭಾಷಣೆಗೆ ಹೆಚ್ಚಾಗಿ ಬಳಸುವ ಭಾಷೆ ತುಳು ಭಾಷೆ ಆದ್ದರಿಂದ ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ಜಿಲ್ಲಾಡಳಿತ ನೀಡಬೇಕು ಮತ್ತು ಗೌರವದಿಂದ ಈ ಭಾಷೆಯನ್ನು ಬಳಸುವಂತಾಗಬೇಕು.
ಸಂವಿಧಾನಿಕ ವಾಗಿ ಒಂದು ನೆಲದಲ್ಲಿ ಪ್ರಾದೇಶಿಕ ಭಾಷೆ ಇದ್ದಲ್ಲಿ ಅದನ್ನು ಬಳಸಲು ಅನುಮತಿ ನೀಡಿದಲ್ಲಿ ತುಳುನಾಡಿನಲ್ಲಿ ಸೌಹಾರ್ದತೆ ಹೆಚ್ಚುತ್ತದೆ. ಆದ್ದರಿಂದ ದಯವಿಟ್ಟು ನಮ್ಮ ಈ ಸ್ಥಿತಿಯನ್ನು ಮನಗಂಡು ನಮ್ಮ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ 2 ಜಿಲ್ಲೆಗಳಿಗೆ ಅನ್ವಯವಾಗುವಂತೆ ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ತುಳು ಭಾಷೆ ಲಿಪಿಯ ನಾಮಫಲಕಗಳನ್ನು ಶೇಕಡ 60 ರಷ್ಟು ಅವಕಾಶ ಕಲ್ಪಿಸಲು ಕೂಡಲೇ ವಿಶೇಷ ಆದೇಶ ಹೊರಡಿಸಬೇಕೆಂದು ವಿನಂತಿ.
ಈಗಾಗಲೇ ತುಳುನಾಡಿನಲ್ಲಿ ತುಳು ಲಿಪಿಯ ಶಿಕ್ಷಣ ಕ್ರಾಂತಿ ನಡೆದಿದ್ದು ಸುಮಾರು 20 ಸಾವಿರಕ್ಕಿಂತಲೂ ಮಿಗಿಲಾದ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ತುಳು ಪಠ್ಯ ಆರಂಭವಾಗಿದ್ದು ತುಳು ಭಾಷೆ ಬೆಳವಣಿಗೆ ಬಹಳ ವೇಗದಿಂದ ನಡೆಯುತ್ತಿದೆ ಇಲ್ಲಿ ಕೆಲವೊಂದು ಭಾಷ ಹೋರಾಟಗಾರರು ಎಂಬ ಸೋಗಿನಲ್ಲಿ ಬೇರೆ ಭಾಷೆಗಳ ನಾಮಫಲಕಗಳಿಗೆ ಮಸಿ ಬಳಿಯುವುದು ಇತರ ಭಾಷೆಗಳನ್ನು ದ್ವೇಷಿಸುವ ನೆಲೆಯಲ್ಲಿ ಇಲ್ಲಿನ ಸೌಹಾರ್ದತೆಯನ್ನು ಕೆಡಿಸುವ ಕೆಲಸಗಳನ್ನು ಕೆಲವರು ಮಾಡುತ್ತಿದ್ದು ಅಂತಹ ಕೃತ್ಯಕ್ಕೆ ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಹಾಗೂ ಶಾಂತಿ ಸೌಹಾರ್ದತೆ ನೆಲೆಸಲು ತಾವು ಸೂಕ್ತ ಕ್ರಮ ಕೈಗೊಳ್ಳುವಂತೆ ಕಳಕಳಿ ವಿನಂತಿಸಿ ದಿನಾಂಕ 10-03-2025 ರಂದು ತುಳುನಾಡ ರಕ್ಷಣಾ ವೇದಿಕೆ ನಿಯೋಗ ಉಡುಪಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು .
ನಿಯೋಗದಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಪೂಜಾರಿ, ವೈದ್ಯರ ಘಟಕ ಜಿಲ್ಲಾಧ್ಯಕ್ಷ ಸಂದೀಪ್ ಸನಿಲ್, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಬ್ರಹ್ಮವರ ತಾಲೂಕು ಗೌರವ ಅಧ್ಯಕ್ಷ ಸುರೇಂದ್ರ ಪೂಜಾರಿ, ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ಸದಾಶಿವ ಬ್ರಹ್ಮಾವರ, ಸುನಂದ ಕೋಟ್ಯಾನ್, ಅನುಸೂಯ ಶೆಟ್ಟಿ, ಮಜೀದ್, ಜ್ಯೋತಿ ಆರ್. ಬನ್ನಂಜೆ , ಶ್ಯಾಮಲಾ, ನಿತೀನ್, ಅಶ್ವಿನಿ, ಅಚಾರ್ಯ ಹರ್ಷಿತಾ, ಉಮೇಶ್ ಶೆಟ್ಟಿ, ಸಂತೋಷ್ ಶೈಲೇಶ್, ಜಯಶ್ರೀ ಸುವರ್ಣ ಮತ್ತಿತರರ ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
