ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರ ಪದಗ್ರಹಣ ಸಮಾರಂಭ ಡಿ. 18ರಂದು ನಡೆಯಿತು.
ಉದ್ಘಾಟನೆಯನ್ನು ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ನೆರವೇರಿಸಿದರು ಬಳಿಕ ಮಾತನಾಡಿದ ಅವರು, ತುಳುನಾಡ ರಕ್ಷಣಾ ವೇದಿಕೆ ಉತ್ತಮ ವ್ಯಕ್ತಿತ್ವದ ಸಮಾಜಪರ ಕಾಳಜಿ ಹೊಂದಿರುವ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಅವರು ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸಂಘಟನೆಯನ್ನು ಸಮರ್ಥವಾಗಿ ಬಲಪಡಿಸಲು ಕೆಲಸ ಮಾಡುತ್ತಾರೆ ಎಂದು
ನಂಬಿರುತ್ತೇವೆ. ಅವರು ಉಡುಪಿ ಜಿಲ್ಲೆಯ ಕಾರ್ಯಕರ್ತರ ಪದಾಧಿಕಾರಿಗಳನ್ನು ಜೊತೆಯಾಗಿ ಸೇರಿಸಿಕೊಂಡು ಸರ್ವರ ಪ್ರೀತಿಗೆ ಪಾತ್ರರಾಗಿ ಜನರ ಆಶೋತ್ತರಕ್ಕೆ ಸ್ಪಂದಿಸುವರು ಎಂದು ನಂಬಿರುತ್ತೇನೆ ಎಂದರು. ಬಳಿಕ ಅವರಿಗೆ ಉಡುಪಿ ಜಿಲ್ಲಾ ಕಚೇರಿಯ ಬೀಗದ ಗೊಂಚಲು ಮತ್ತು ಸಂಘಟನೆಯ ಪುಸ್ತಕವನ್ನು ನೀಡಿ ಹೂಗುಚ್ಛ ನೀಡಿ ಅಭಿನಂದಿಸಿದರು.
ಸಭೆಯಲ್ಲಿ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ನೂತನ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರನ್ನು ಪದಾಧಿಕಾರಿಗಳು, ಕಾರ್ಯಕರ್ತರು ಅಭಿನಂದನೆ ಮಾತುಗಳ ನಾಡಿ ಹೂ ಗುಚ್ಛ, ಹೂ ಮಾಲೆ , ಸ್ಮರಣೆಕೆ ನೀಡಿ ಸನ್ಮಾನಿಸಿದರು. ಬಳಿಕ ಸೇರಿದ ಕಾರ್ಯಕರ್ತರ ಜೊತೆ ಸಹ ಭೋಜನ ಸ್ವೀಕರಿಸಲಾಯಿತು.
ಈ ಸಂದಭದಲ್ಲಿ ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ, ಜಿಲ್ಲಾ ಕಾರ್ಮಿಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮೀನಗರ, ಮಹಿಳಾ ಜಿಲ್ಲಾಧ್ಯಕ್ಷೆ ಶೋಭಾ ಪಾಂಗಳ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ, ವೈದ್ಯರ ಘಟಕ ಜಿಲ್ಲಾಧ್ಯಕ್ಷ ಸಂದೀಪ್ ಸನಿಲ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ , ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಾಗಲಕ್ಷ್ಮಿ, ಕಾಪು ಮಹಿಳಾಧ್ಯಕ್ಷೆ ಅನುಸೂಯ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲಾ ಸಲಹೆಗಾರ ಸುಧಾಕರ್ ಅಮೀನ್, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ರೋಷನ್ ಅಮ್ಮುಂಜೆ, ಬ್ರಹ್ಮಾವರ ತಾಲೂಕು ಗೌರವಾಧ್ಯಕ್ಷ ಸುರೇಂದ್ರ, ಜಿಲ್ಲಾ ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್, ಜಿಲ್ಲಾ ಜೊತೆ ಕಾರ್ಯದರ್ಶಿ ಸುಭಾಷ್ ಸುಧನ್, ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಾಲ್ ಅಮೀನ್, ಕಾರ್ಮಿಕ ಸಂಘಟನಾ ಕಾರ್ಯದರ್ಶಿ ರೋಷನ್ ಬಂಗೇರ , ಕಾರ್ಮಿಕ ಜೊತೆ ಕಾರ್ಯದರ್ಶಿ ಮಜಿದ್, ಜಿಲ್ಲಾ ಕಾರ್ಯಕಾರಿ ಸದಸ್ಯ ಶಾಹಬುದ್ದಿನ್, ಗುಣವತಿ ಸುಲೋಚನಾ , ಶಾಮಲಾ ಹರಿಣಾಕ್ಷಿ, ರೋಷನ್ ಬಳ್ಳಾಲ್, ಜಯಲಕ್ಷ್ಮಿ ಹೆಗಡೆ , ರಂಜಿತಾ ಶೆಟ್ಟಿ, ಶಶಿಕಲಾ, ಗುಲಾಬಿ ಮಮತಾ, ಅವಿರಾಜ್ ಶೆಟ್ಟಿ, ರತ್ನಾಕರ್, ವಿಜಯ್ ಶೆಟ್ಟಿ, ಉಪೇಂದ್ರ ಗಾಣಿಗ, ಶಿವರಾಮ ಗಾಣಿಗ , ನಿರ್ಮಲ ಮೆಂಡನ್, ಧನವಂತಿ ಎನ್.ಪುತ್ರನ್, ಗುಲಾಬಿ, ಹೇಮಾನಳಿನಿ, ರತ್ನಾಕರ ಹಾವಂಜೆ, ರೋಹಿಣಿ ಶೆಟ್ಟಿ, ರಾಜೇಶ್ ಅಜೆಕಾರ್, ಹರಿಣಾಕ್ಷಿ ಉಚ್ಚಿಲ, ಧನವಂತಿ ಎರ್ಮಾಳ್, ಮನೋಜ್ ಮತ್ತಿತರರು ಉಪಸ್ಥಿತರಿದ್ದರು.