ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರ್ ದ.ಕ ಕರ್ನಾಟಕ ವತಿಯಿಂದ ನಿಸ್ವಾರ್ಥ ಸೇವೇ ಒಂದೇ ನಮ್ಮ ಧೈಯ 51ನೇ ಮಾಸಿಕ ಸೇವಾ ಯೋಜನೆಯನ್ನು ಪೂಪಾಡಿಕಲ್ಲು ನಿವಾಸಿಯಾಗಿರುವ ಅಕ್ಷಯ್ ಕುಮಾರ್ ರವರಿಗೆ ನೀಡಲುವುದಾಗಿ ನಿರ್ಧರಿಸಿದ್ದು ಸಹೃದಯಿಗಳಿಂದ ಸಹಾಯ ಹಸ್ತ ಚಾಚಿದ್ದಾರೆ.
ಮಂಗಳೂರು ತಾಲೂಕಿನ ಎಡಪದವು ಪೂಪಾಡಿಕಲ್ಲು ನಿವಾಸಿಯಾಗಿರುವ ಅಕ್ಷಯ್ ಕುಮಾರ್ ರವರು ತನ್ನ ಎರಡು ಕಿಡ್ನಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇವಾಗ ಅವರ ತಾಯಿಯ ಕಿಡ್ನಿಯನ್ನು ಟ್ರಾನ್ಸ್ ಪ್ಲಾಂಟ್ ಮಾಡಲು ನಿರ್ಧರಿಸಿ ನವೆಂಬರ್ ತಿಂಗಳಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಅದಕ್ಕಾಗಿ ಸುಮಾರು 10ರಿಂದ 12ಲಕ್ಷ ಮೊತ್ತದ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ತೀರಾ ಬಡ ಕುಟುಂಬದವರಾಗಿರುವುದರಿಂದ ಸಹೃದಯಿಗಳಾದ ನೀವೆಲ್ಲ ನಿಮ್ಮ ಸಂಸ್ಥೆಯ ಮೂಲಕ ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.