“ತುಡರ ಪರ್ಬದ ಮಹತ್ವ ಮುಂದಿನ ಪೀಳಿಗೆಗೆ ಅರಿವಾಗಲಿ ” ಟಿ.ಕೆ ಮಧುಸೂದನ ಆಚಾರ್ಯ
ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ,ಮಂಗಳೂರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು ಹಳೆಯಂಗಡಿ ಇದರ ಆಶ್ರಯದಲ್ಲಿ. ನಮ್ಮ ತುಳುನಾಡಿನ ಪ್ರಮುಖ ಆಚರಣೆಗಳಲ್ಲಿ ಒಂದಾದ ದೀಪಾವಳಿ ಹಬ್ಬದ ಪ್ರಯುಕ್ತ ತುಳುನಾಡ ತುಡರ ಪರ್ಬ -2024 ಕಾರ್ಯಕ್ರಮವು ದಿನಾಂಕ 01.11.2023 ರಂದು ಶುಕ್ರವಾರ ಬೆಳಿಗ್ಗೆ : ಘಂಟೆ 9:30 ಕ್ಕೆ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
▪ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಹಳೆಯಂಗಡಿ ಇದರ ಪ್ರಧಾನ ಅರ್ಚಕರು ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ಟಿ.ಕೆ.ಮಧುಸೂಧನ ಆಚಾರ್ಯ ಇವರು ದೀಪ ಪ್ರಜ್ವಲಿಸಿ, ತುಳುನಾಡ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿರುವ ತುಳುನಾಡ ತುಡರ್ ಪರ್ಬ ಮತ್ತು ಅದರ ಮಹತ್ವದ ಬಗ್ಗೆ ಮುಂದಿನ ಯುವ ಪೀಳಿಗೆಗೆ ಅರಿವಾಗಲಿ ಹಾಗೂ ನಿರಂತರವಾಗಿ ಕಾರ್ಯಕ್ರಮವು ಮುಂದುವರಿಯಲಿ ಎಂದು ತಿಳಿಸಿ ಶುಭ ಹಾರೈಸಿದರು.
▪ ಪಡು ಪಣಂಬೂರು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಗೀತಾ ಗಣೇಶ್,ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಸಂಸ್ಥೆಯ ಜನ ಸೇವೆಗೆ ಹಲವು ಪ್ರಶಸ್ತಿಗಳು ದೊರಕಿರುವುದನ್ನು ಶ್ಲಾಘಿಸಿ ಶುಭಹಾರೈಸಿದರು ಹಾಗೂ ತುಳುನಾಡ ತುಡರ್ ಪರ್ಬವನ್ನು ಹೇಗೆ ಆಚರಿಸಬೇಕು ಮತ್ತು ಮುಂದಿನ ಜನಾಂಗಕ್ಕೆ ಹೇಗೆ ಮನದಟ್ಟು ಮಾಡಬೇಕು ಇದರ ಬಗ್ಗೆ ತಿಳಿಸಿ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
▪ಕಾರ್ಯಕ್ರಮದ ಮುಖ್ಯ ಅತಿಥಿ ಕೃಷಿಕರು ಮತ್ತು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ಅಶೋಕ್ ಕುಂದರ್ ಇವರು ತುಡರ್ ಪರ್ಬದಲ್ಲಿ ಯಾವ ಯಾವ ವಸ್ತುಗಳನ್ನು ಗೆರಸೆಯಲ್ಲಿ ಇಡುತ್ತಾರೆ ಮತ್ತು ಆಚಾರ ವಿಚಾರಗಳನ್ನು ವಿವರಿಸಿದರು.
▪ವೇದಿಕೆಯಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರು ಪ್ರಶಾಂತ್ ಕುಮಾರ್ ಬೇಕಲ್, ಅಧ್ಯಕ್ಷರು ದೀಪಕ್ ಸುವರ್ಣ, ಮಹಿಳಾ ಕಾರ್ಯಾಧ್ಯಕ್ಷೆ ಯಶೋಧಾ ದೇವಾಡಿಗ ಉಪಸ್ಥಿತರಿದ್ದರು.
▪ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಕೃಷಿಕರು ಹಾಗೂ ಪ್ರಸಾಧನ ಕಲಾವಿದರಾದ ಜಯ ಶೆಟ್ಟಿ ಮೂಡುಮನೆ , ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಇದರ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾಗಿರುವ ಯೋಗೀಶ್ ಕೋಟ್ಯಾನ್, ಸಾಮಾಜಿಕ ಕಾರ್ಯಕರ್ತ ಧರ್ಮನಂದ ಶೆಟ್ಟಿಗಾರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸುನಿಲ್.ಜಿ ದೇವಾಡಿಗ, ಆರೋಗ್ಯ ಕಾರ್ಯದರ್ಶಿ ಜಗದೀಶ್ ಕೋಟ್ಯಾನ್, ಹಿರಿಯ ಸದಸ್ಯರಾದ ರಾಜ ಸಾಲ್ಯಾನ್ ಹಾಗೂ ಕ್ಲಬ್ ನ ಪದಾಧಿಕಾರಿಗಳು,ಸದಸ್ಯರು, ಸದಸ್ಯೆಯರು ಉಪಸ್ಥಿತರಿದ್ದರು.
▪ಮಹಿಳಾ ಸಮಿತಿಯ ಸದಸ್ಯೆ ವಾಣಿ ಮಹೇಶ್ ಪ್ರಾರ್ಥಿಸಿದರು.
▪ಅಧ್ಯಕ್ಷರಾದ ದೀಪಕ್ ಸುವರ್ಣ ಸ್ವಾಗತಿಸಿದರು.
▪ ಜೊತೆ ಕಾರ್ಯದರ್ಶಿ ಚಂದ್ರ ಸುವರ್ಣ ವಂದಿಸಿದರು.
▪ ಸಾಂಸ್ಕೃತಿಕ ಕಾರ್ಯದರ್ಶಿ ಗೀತಾ ಸದಾನಂದ ಕಾರ್ಯಕ್ರಮ ನಿರೂಪಿಸಿದರು.
▪ಸಭಾ ಕಾರ್ಯಕ್ರಮದ ನಂತರ ಉಪಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.