Wednesday, September 11, 2024
Homeಮಂಗಳೂರು2040ಕ್ಕೆ ತುಳುನಾಡಿಗೆ ಅಪಾಯ ಕಟ್ಟಿಟ್ಟ ಬುತ್ತಿ! | ಮಂಗಳೂರು, ಉಡುಪಿಯ ಇಷ್ಟು ಭೂಮಿ ಭೂಮಿ ಸಮುದ್ರಪಾಲು?

2040ಕ್ಕೆ ತುಳುನಾಡಿಗೆ ಅಪಾಯ ಕಟ್ಟಿಟ್ಟ ಬುತ್ತಿ! | ಮಂಗಳೂರು, ಉಡುಪಿಯ ಇಷ್ಟು ಭೂಮಿ ಭೂಮಿ ಸಮುದ್ರಪಾಲು?

ಮಂಗಳೂರು: ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ತುಳುನಾಡಿನ ಕಡಲತೀರದ ನಗರಗಳಿಗೆ ಅಪಾಯ ಇದೆ ಎಂದು ಕೆಲವು ವರ್ಷಗಳ ಹಿಂದೆಯೇ ವಿಜ್ಞಾನಿಗಳು ಎಚ್ಚರಿಸಿದ್ದರು. ಆದರೆ, ಇದೀಗ ಬೆಂಗಳೂರಿನ ವಿಜ್ಞಾನಿಗಳ ತಂಡ ಮತ್ತೊಂದು ಅಧ್ಯಯನ ಮಾಡಿದೆ. 2040ರ ಹೊತ್ತಿಗೆ ಮಂಗಳೂರು, ಉಡುಪಿ ನಗರಗಳ 5 ಶೇಕಡಾದಷ್ಟು ಭೂ ಭಾಗ ಸಮುದ್ರ ಸೇರಲಿದೆ ಎಂಬ ಆತಂಕಕಾರಿ ವರದಿ ಈ ಅಧ್ಯಯನ ತಂಡ ನೀಡಿದೆ ಎಂದು ವರದಿಯೊಂದು ತಿಳಿಸಿದೆ.
ಸಮುದ್ರ ಪ್ರಕ್ಷುಬ್ಧವಾದಾಗ ಕಡಲು ಅಬ್ಬರಿಸೋದು, ಕಡಲತಡಿಯ ಮನೆಗಳಿಗೆ ನೀರು ನುಗ್ಗೋದು ಇತ್ತೀಚೆಗಿನ ವರ್ಷಗಳಲ್ಲಿ ತುಳುನಾಡಿನ ಕಡಲತೀರದಲ್ಲಿ ನಡೆಯುತ್ತಿದೆ. ಸಮುದ್ರ ಪ್ರತಿಮಳೆಗಾಲದಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಣೆಗೊಳಿಸುತ್ತಿದೆ. 2040ರ ಹೊತ್ತಿಗೆ ಸಮುದ್ರದ ಅಬ್ಬರಕ್ಕೆ ತುಳುನಾಡಿನ ಶೇಕಡಾ 5ರಷ್ಟು ಭೂಭಾಗವೇ ಸಮುದ್ರ ಪಾಲಾಗಬಹುದು ಎಂದು ಅಧ್ಯಯನ ವರದಿ ತಿಳಿಸಿದೆ ಎನ್ನಲಾಗಿದೆ.
ಬೆಂಗಳೂರಿನ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸಸ್ ಎಂಬ ಚಿಂತಕರ ಚಾವಡಿ ಈ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ. ಹವಾಮಾನ ಬದಲಾವಣೆ ಮತ್ತು ಸಮುದ್ರ ತೀರದಲ್ಲಿ ಮಾನವನ ಹಸ್ತಕ್ಷೇಪದಿಂದ ಕಡಲು ಅಬ್ಬರಿಸುತ್ತಿದ್ದು,ಭವಿಷ್ಯದಲ್ಲಿ ಇದು ಆಪತ್ತಿನ ಕರೆಗಂಟೆ ಎಂದು ವಿಜ್ಞಾನಿಗಳು ವ್ಯಾಖ್ಯಾನಿಸಿದ್ದಾರೆ.
ಮಂಗಳೂರಿನ ಹಿರಿಯ ವಿಜ್ಞಾನಿ ಡಾ.ಜಯಪ್ಪ ಹೇಳುವುದೇನು?
ಸಮುದ್ರದಲ್ಲಿ ಬ್ರೇಕ್ ವಾಟರ್, ಬೀಚ್ಗಳಲ್ಲಿ ತಡೆ, ಕಟ್ಟಡಗಳು, ಕಡಲ್ಕೊರೆತ ನಿವಾರಣೆಗೆ ಹಾಕಿರುವ ಕಲ್ಲುಗಳ ರಾಶಿ ಎಲ್ಲವೂ ಸಮುದ್ರದ ದಿಕ್ಕನ್ನು ಬದಲಿಸುವಂತೆ ಮಾಡುತ್ತಿದೆ. ಹಿಂದೆಗಿಂತಲೂ ಸಮುದ್ರ ತುಂಬಾ ಭೂ ಭಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಮಂಗಳೂರು ಉಚ್ಚಿಲ, ಸೋಮೇಶ್ವರ, ಉಳ್ಳಾಲ, ಸಸಿಹಿತ್ಲು ಮುಂತಾದ ಭಾಗದಲ್ಲಿ ಅತಿ ಹೆಚ್ಚಿನ ಭೂಭಾಗ ಸಮುದ್ರ ಪಾಲಾಗಬಹುದು ಎಂದು ಮಂಗಳೂರಿನ ವಿಜ್ಞಾನಿಯೊಬ್ಬರು ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.

RELATED ARTICLES
- Advertisment -
Google search engine

Most Popular