Saturday, July 20, 2024
Homeತುಳು ಭಾಷೆಜು. 28ರಂದು ತುಳುನಾಡು ಒಕ್ಕೂಟದಿಂದ 4ನೇ ವರ್ಷದ ಚೆನ್ನೆಮಣೆ ಆಟ, ಪಾರ್ದನ ಹಾಡುಗಾರಿಕೆ ಸ್ಪರ್ಧೆ

ಜು. 28ರಂದು ತುಳುನಾಡು ಒಕ್ಕೂಟದಿಂದ 4ನೇ ವರ್ಷದ ಚೆನ್ನೆಮಣೆ ಆಟ, ಪಾರ್ದನ ಹಾಡುಗಾರಿಕೆ ಸ್ಪರ್ಧೆ

ಬೆಳ್ತಂಗಡಿ: ತುಲುನಾಡ್ ಒಕ್ಕೂಟ ಸಂಘಟನೆಯ ನೇತೃತ್ವದಲ್ಲಿ ಜು. 28ರಂದು 4ನೇ ವರ್ಷದ ʻಚೆನ್ನೆಮಣೆ ಗೊಬ್ಬುದ ಪಂಥೋ ಬೊಕ್ಕ ಸಂಧಿ ಪಾರ್ದನ ಸುಗ್ಗಿಪು ಪಂಥೋʼ ಸ್ಪರ್ಧೆ ನಡೆಯಲಿದೆ. ಬೆಳ್ತಂಗಡಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಚೆನ್ನೆಮಣೆ ಆಟದ ಸ್ಪರ್ಧೆ ಹಾಗೂ ಸಂದಿ ಪಾರ್ದನ ಹಾಡುಗಾರಿಕೆ ಸ್ಪರ್ಧೆ ಆಯೋಜಿಸಲಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪದಾಧಿಕಾರಿ ಕೆ. ಶೈಲೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತುಳುನಾಡು ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್‌ ಆರ್‌.ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ತುಳುನಾಡು ಒಕ್ಕೂಟದ ಅಧ್ಯಕ್ಷ ಶೇಖರ್ ಗೌಂಡತಿಗೆ ಅವರು ಪ್ರಸ್ತಾವನೆ ಮಾಡಲಿದ್ದಾರೆ.
ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಹಂಪನ್‌ಕಟ್ಟದ ತುಳು ಉಪನ್ಯಾಸಕಿ ಸಂಧ್ಯಾ ಆಳ್ವ, ಪತ್ರಕರ್ತರಾದ ಮನೋಹರ್‌ ಬಳೆಂಜ, ಉಜಿರೆಯ ತೆರಿಗೆ ಸಲಹೆಗಾರರಾದ ಟಿ.ಜೆ. ಮೋರಸ್‌, ನಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮೋಹನ್‌ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತುಳುನಾಡು ಒಕ್ಕೂಟ ಬೆಳ್ತಂಗಡಿ ತಾಲೂಕು ಘಟಕದ ಕಾರ್ಯದರ್ಶಿ ರಾಜೀವ್ ಬಿ.ಹೆಚ್. ಗೌರವ ಉಪಸ್ಥಿತರಿರಲಿದ್ದಾರೆ.
ಸಂಜೆ 3.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ತುಳುನಾಡು ಒಕ್ಕೂಟದ ಬೆಳ್ತಂಗಡಿ ತಾಲೂಕು ಕೂಟದ ಅಧ್ಯಕ್ಷ ರಾಜೇಶ್‌ ಕುಲಾಲ್‌ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.


ಮುತ್ತೂಟ್‌ ಫಿನ್‌ ಕಾರ್ಪ್‌ ಇದರ ಸೀನಿಯರ್‌ ಮ್ಯಾನೇಜರ್ ಮಲ್ಲಿಕಾ ಪುನೀತ್‌, ವೇಣೂರಿನ ತುಳು ನಾಟಕ ರಚನೆಕಾರ ಮತ್ತು ರಂಗ ನಿರ್ದೇಶಕ ವಿ.ಎನ್. ಕುಲಾಲ್‌, ನ್ಯಾಯವಾದಿ ಅನಿಲ್ ಕುಮಾರ್ ಯು., ಕಕ್ಯಪದವು ಅಂಬೇಡ್ಕರ್‌ ಯುವಕ ಸಂಘದ ಅಧ್ಯಕ್ಷ ರಾಜೀವ್‌, ನಿವೃತ್ತ ಅಂಚೆ ಉದ್ಯೋಗಿ ಜಯಾನಂದ ಬಂಗೇರ ಮುಖ್ಯ ಅತಿಥಿಗಳಾಗಿದ್ದಾರೆ.


ತುಳುನಾಡು ಒಕ್ಕೂಟದ ಅಧ್ಯಕ್ಷ ಅಡ್ಕದಬೈಲು ಗುತ್ತು ನವೀನ್ ಪೂಜಾರಿ, ತುಳುನಾಡು ಒಕ್ಕೂಟದ ದ.ಕ. ಜಿಲ್ಲಾ ಅಧ್ಯಕ್ಷ ಉದಯ ಗೋಳಿಯಂಗಡಿ ಗೌರವ ಉಪಸ್ಥಿತರಿರಲಿದ್ದಾರೆ.

RELATED ARTICLES
- Advertisment -
Google search engine

Most Popular