ಪುತ್ತೂರು: ಪುತ್ತೂರು ತುಳುಕೂಟದ ವತಿಯಿಂದ ರೋಟರಿ ಪುತ್ತೂರು ಸೆಂಟ್ರಲ್ ಸಹಯೋಗದಲ್ಲಿ ತುಳುವರ ಹಬ್ಬ (ಬಲಿ ಪರ್ಬೊ) ಸಾಂಕೇತಿಕ ಆಚರಣೆ ಅಶ್ಮಿ ಕಂಫರ್ಟ್’ನ ಪಂಚಮಿ ಸಭಾಂಗಣದಲ್ಲಿ ಜರಗಿತು.
ಪ್ರಾಚಿನ ಕಾಲದ ತುಳುವರು ಆಚರಿಸುತ್ತಿದ್ದ “ಪರ್ಬೊ” ಬಗ್ಗೆ ಮಾಹಿತಿ ನೀಡಿದ ಎ.ವಿ.ಜಿ. ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕಳುವಾಜೆ ವೆಂಕಟರಮಣ ಗೌಡ “ಕೃಷಿಪ್ರಧಾನವಾಗಿದ್ದ ತುಳುವರು ಬಲಿಯೇಂದ್ರ ಹಬ್ಬದ ಆಚರಣೆ ಸಂದರ್ಭದಲ್ಲಿ ಹೊಲ ಉಳುವ ಎತ್ತುಗಳನ್ನು ಪೂಜಿಸುತ್ತಿದ್ದರು. ಗತಿಸಿದ ಹಿರಿಯರಿಗೆ ವರ್ಷಾಂತಿಕ ಅಗೇಲು ಬಡಿಸುವ ಪದ್ಧತಿಯನ್ನು ಈ ಸಂದರ್ಭದಲ್ಲಿ ಮಾಡುತ್ತಿದ್ದರು. ಆಯುಧ ಪೂಜೆ ಅಂದರೆ ಕೃಷಿ ಉಪಕರಣಗಳನ್ನು ಪೂಜಿಸುವ ಪದ್ಧತಿಯಾಗಿತ್ತು ಅಲ್ಲದೆ ಧಾನ್ಯಗಳನ್ನು ಅಳತೆ ಮಾಡುವ ಪರಿಕರಗಳನ್ನು ಇಟ್ಟು ಧಾನ್ಯಲಕ್ಷ್ಮಿ ಪೂಜೆ ಮಾಡುವ ಕ್ರಮ ಇತ್ತು” ಎಂದು ದೀಪಾವಳಿ ಮತ್ತು ಬಲಿಯೇಂದ್ರ ಹಬ್ಬದ ವ್ಯತ್ಯಾಸಗಳನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಪುತ್ತೂರು ಎಲೈಟ್ ಅಧ್ಯಕ್ಷ ಹಾಗೂ ಸವಣೂರು ವಿದ್ಯಾರಶ್ಮಿ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಅವರು ಮಾತನಾಡಿ ಇಂದಿನ ಮಕ್ಕಳಿಗೇ ಹಿಂದಿನ ಸಂಸ್ಕೃತಿಯ ಅರಿವಿಲ್ಲದಿರುವಾಗ ಮುಂದಿನ ಜನಾಂಗಕ್ಕೆ ಮಾಹಿತಿ ದೊರಕುವಂತಾಗಲು ಇಂತಹಾ ಕಾರ್ಯಕ್ರಮಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು. ತುಳುಕೂಟದ ನಿರ್ದೇಶಕ ಕಲಾವಿದ ಕೃಷ್ಣಪ್ಪ ಬಲಿಯೇಂದ್ರನನ್ನು ಕೂಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಸ್ವಾಗತಿಸಿ ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಸೆಂಟ್ರಲ್ ಅಧ್ಯಕ್ಷ ಅಶ್ರಫ್ ಪಿ.ಎಂ. ಅಧ್ಯಕ್ಷತೆ ವಹಿಸಿದ್ದರು. ತುಳುಕೂಟದ ಉಪಾಧ್ಯಕ್ಷರಾದ ಹೀರಾ ಉದಯ್ ಕಾರ್ಯಕ್ರಮ ನಿರ್ವಹಿಸಿ ರೋಟರಿ ಕಾರ್ಯದರ್ಶಿ ವಸಂತ ಶಂಕರ್ ವಂದಿಸಿದರು.
ಬಲಿಯೇಂದ್ರ ಹಬ್ಬದ ವಿಶೇಷ ತಿನಿಸುಗಳಾದ ಅವಲಕ್ಕಿ-ಕಾಯಿ ಹಾಲು-ಬಾಳೆಹಣ್ಣು, ಉದ್ದಿನ ದೋಸೆ-ಹೆಸರುಕಾಳು-ಸೌತೆ ಕೊದಿಲು, ಅಲಸಂಡೆ ಬೀಜ-ಬಲ್ಯಾರು ಒಣಗಲು ಮೀನಿನ ಗಸಿ ಮತ್ತು ಅಕ್ಕಿ ಪಾಯಸಗಳ ವ್ಯವಸ್ಥೆ ಮಾಡಲಾಗಿತ್ತು.
ತುಳುಕೂಟದ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಎಸ್., ಜತೆಕಾರ್ಯದರ್ಶಿ ನಯನಾ ರೈ, ಕೋಶಾಧ್ಯಕ್ಷ ರವಿಪ್ರಸಾದ್, ನಿರ್ದೇಶಕರುಗಳಾದ ನವೀನ್ಚಂದ್ರ ನಾೖಕ್, ನರೇಶ್ ಜೈನ್, ಆಸ್ಕರ್ ಆನಂದ್, ಬಿ. ಚಂದ್ರಹಾಸ ರೈ, ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್, ಸದಸ್ಯರುಗಳಾದ ಶ್ರೀಧರ ರೈ ಕೋಡಂಬು, ಮೋಹನ್ ಸಿಂಹವನ, ಐ.ಸಿ. ಭುವನೇಂದ್ರ, ಗೀತಾ ಡಿ. ರೈ, ಜಯಲಕ್ಷ್ಮಿ ರೈ, ಕವಿತಾ ದಿನಕರ್, ಚಂದ್ರಪ್ರಭಾ, ವಿದ್ಯಾ, ಮಮತಾ, ಪದ್ಮಾ ಶೆಟ್ಟಿ, ರೋಟರಿ ಎಲೈಟ್ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ, ಪುತ್ತೂರು ಲಯನ್ಸ್ ಸದಸ್ಯ ನಾರಾಯಣ ಗೌಡ,
ರೋಟರಿ ಸೆಂಟ್ರಲ್ ಸದಸ್ಯರಾದ ಅಮಿತಾ ಶೆಟ್ಟಿ, ಶಾಂತಕುಮಾರ್, ಲಾವಣ್ಯ ನಾೖಕ್, ಗೀತಾ ವಸಂತ ಶಂಕರ್, ಜಯಪ್ರಕಾಶ್ ಎ.ಎಲ್., ಜಯಪ್ರಕಾಶ್ ಅಮೈ, ಪ್ರದೀಪ್ ಪೂಜಾರಿ, ಪ್ರದೀಪ್ ಬೊಳುವಾರು, ಶಿವರಾಮ ಎಂ.ಎಸ್., ವಸಂತ ನಾಯಕ್, ವಿಷನ್ ಸೇವಾ ಟ್ರಸ್ಟ್’ನ ಚೇತನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.